ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಎಸ್‌ಬಿಐ ಬ್ಯಾಂಕ್‌ ಸಿಬ್ಬಂದಿಗೆ ಖಾರದ ಪುಡಿ ಎರಚಿ 4 ಲಕ್ಷ ರೂಪಾಯಿ ದೋಚಿದ ಕಳ್ಳ: ಕೆಲವೇ ನಿಮಿಷದಲ್ಲಿ ಖದೀಮನ ಹೆಡೆಮುಡಿ ಕಟ್ಟದ ಪೊಲೀಸರು

Viral News: ಬ್ಯಾಂಕ್‌ ಉದ್ಯೋಗಿಗಳ ಕಣ್ಣಿಗೆ ಖಾರದ ಪುಡಿ ಎರಚಿ, 4 ಲಕ್ಷ ರೂಪಾಯಿ ನಗದು ದೋಚಿ ಪರಾರಿಯಾದ ಘಟನೆಯೊಂದು ನಡೆದಿದೆ. ಆದಾಗ್ಯೂ, ಪೊಲೀಸರು 30 ನಿಮಿಷಗಳಲ್ಲಿ ಆತನನ್ನು ಪತ್ತೆಹಚ್ಚಿ ಸಂಪೂರ್ಣ ಹಣವನ್ನು ವಶಪಡಿಸಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಈ ಸಿನಿಮೀಯ ಘಟನೆ ನಡೆದಿದೆ.

ಮಾಹಾರಾಷ್ಟ್ರದಲ್ಲಿ ಬ್ಯಾಂಕ್ ಸಿಬ್ಬಂದಿ ಮೇಲೆ ಮೆಣಸಿನ ಪುಡಿ ಎಸೆದು 4 ಲಕ್ಷ ರೂಪಾಯಿ ದೋಚಿದ ಕಳ್ಳ

ಮುಂಬೈ, ಸೆ. 11: ಬ್ಯಾಂಕ್‌ ಉದ್ಯೋಗಿಗಳ ಕಣ್ಣಿಗೆ ಖಾರದ ಪುಡಿ ಎರಚಿದ ಕಳ್ಳನೊಬ್ಬ 4 ಲಕ್ಷ ರೂಪಾಯಿ ನಗದು ದೋಚಿ ಪರಾರಿಯಾದ ವಿಚಿತ್ರ ಘಟನೆ ನಡೆದಿದೆ. ಅಚ್ಚರಿ ಎಂದರೆ ಪೊಲೀಸರು 30 ನಿಮಿಷಗಳಲ್ಲಿ ಆತನನ್ನು ಪತ್ತೆಹಚ್ಚಿ ಸಂಪೂರ್ಣ ಹಣವನ್ನು ವಶಪಡಿಸಿಕೊಂಡಿದ್ದಾರೆ. ಸಿಸಿಟಿವಿ ಕ್ಯಾಮೆರಾದದಲ್ಲಿ ಆತ ಬ್ಯಾಂಕ್‌ ದರೋಟೆ ಮಾಡುತ್ತಿರುವ ದೃಶ್ಯ ಸೆರೆಯಾಗಿದ್ದು (Viral News), ಆತ ಕೆಂಪು ಕುರ್ತಾ ಮತ್ತು ಕಪ್ಪು ಪೈಜಾಮ ಧರಿಸಿ ನುಗ್ಗಿದ್ದ.

ಇತ್ತೀಚೆಗೆ ಕಳವು ಪ್ರಕರಣಗಳು ಹೆಚ್ಚಾಗುತ್ತಿವೆ. ಕೆಲವು ದಿನಗಳ ಹಿಂದೆಯಷ್ಟೆ ಪಂಜಾಬ್‌ನ ಝಿರಾಕ್‌ಪುರದ ಪಾಲಂ ಎನ್‌ಕ್ಲೇವ್ ಎನ್ನುವಲ್ಲಿ ಚ್ಹೀಲ್‌ ಚೇರ್‌ನಲ್ಲಿ ಪ್ರಯಾಣಿಸುತ್ತಿದ್ದ ವಿಶೇಷ ಚೇತನ ವ್ಯಕ್ತಿಯ ವೇಳೆ ದಾಳಿ ನಡೆಸಿ ಇಬ್ಬರು ದುಷ್ಕರ್ಮಿಗಳು ಕಳವು ಮಾಡಿದ್ದರು. ಇದೀಗ ಮಹಾರಾಷ್ಟ್ರದ ನಾಗಪುರದಲ್ಲಿರುವ ​ರಾಷ್ಟ್ರೀಕೃತ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿಯೇ ಕಳ್ಳತನ ಪ್ರಕರಣ ವರದಿಯಾಗಿದೆ.

ಮಾಹಿತಿಯ ಪ್ರಕಾರ, ಶಾಖೆಯಲ್ಲಿ ಎಂದಿನಂತೆವ್ಯವಹಾರ ನಡೆಯುತ್ತಿತ್ತು. ನೌಕರರು ತಮ್ಮ ಕರ್ತವ್ಯದಲ್ಲಿ ನಿರತರಾಗಿದ್ದರು. ಆಗ ಕಳ್ಳ ಗ್ರಾಹಕನಂತೆ ನಟಿಸುತ್ತ ಬ್ಯಾಂಕ್‌ ಒಳಗೆ ಪ್ರವೇಶಿಸಿದ್ದಾನೆ. ಅವನು ಕ್ಯಾಶ್ ಕೌಂಟರ್‌ನತ್ತ ನಡೆದು ತನ್ನಲ್ಲಿ ಅಡಗಿಸಿಟ್ಟಿದ್ದ ಕೆಂಪು ಮೆಣಸಿನ ಪುಡಿಯನ್ನು ಹೊರತೆಗೆದು ನೇರವಾಗಿ ಬ್ಯಾಂಕ್ ನೌಕರರ ಕಣ್ಣಿಗೆ ಎರಚಿದ್ದಾನೆ.

ಸಿಜೆಪಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು 1 ಲಕ್ಷ ರುಪಾಯಿ ಖರ್ಚು ಮಾಡಿದ ಬಿ.ಟೆಕ್ ಪದವೀಧರ!

​ಸಿಬ್ಬಂದಿ ಕಣ್ಣು ಉರಿಯಿಂದ ರಕ್ಷಣೆ ಪಡೆಯಲು ಓಡಾಡುತ್ತಿದ್ದರೆ, ಈ ಗೊಂದಲದ ವಾತಾವರಣವನ್ನು ಬಳಸಿಕೊಂಡ ಕಳ್ಳ ಕೌಂಟರ್‌ನಲ್ಲಿದ್ದ 4 ಲಕ್ಷ ರೂಪಾಯಿ ನಗದನ್ನು ಬಾಚಿಕೊಂಡು ಬ್ಯಾಂಕ್‌ನಿಂದ ಹೊರಗೆ ಓಡಿದ್ದ. ಕೆಲವು ಬ್ಯಾಂಕ್ ನೌಕರರು ಮತ್ತು ಭದ್ರತಾ ಸಿಬ್ಬಂದಿ ಅಪಾಯವನ್ನು ಲೆಕ್ಕಿಸದೆ ಅವನನ್ನು ಬೆನ್ನಟ್ಟಲು ಪ್ರಯತ್ನಿಸಿದ್ದಾರೆ‌.

ಸಿಸಿಟಿವಿ ಕ್ಯಾಮೆರಾ ದೃಶ್ಯಗಳ ಆಧಾರದ ಮೇಲೆ ಪೊಲೀಸರು ಪ್ರದೇಶದಾದ್ಯಂತ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ ತಂಡಗಳಿಗೆ ಎಚ್ಚರಿಕೆ ನೀಡಿದರು. ಹೀಗಾಗಿ ದರೋಡೆ ನಡೆದ ಕೇವಲ 30 ನಿಮಿಷಗಳಲ್ಲಿ ಅಧಿಕಾರಿಗಳು ಕಳ್ಳನನ್ನು ಬಂಧಿಸಿದರು. ಕಳುವಾಗಿದ್ದ 4 ಲಕ್ಷ ರೂಪಾಯಿ ನಗದನ್ನು ಆತನಿಂದ ವಶಪಡಿಸಿಕೊಳ್ಳಲಾಗಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ.