ಕಠ್ಮಂಡು, ಸೆ. 2: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಅಪಾರ ಜೀವಹಾನಿಗೆ ಕಾರಣವಾಗಿದೆ. ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಸದ್ಯದ ಅಂಕಿ-ಅಂಶಗಳ ಪ್ರಕಾರ 1,127 ಮಂದಿ ಸಾವನ್ನಪ್ಪಿದ್ದು, 4,858 ಮಂದಿ ನಾಪತ್ತೆಯಾಗಿದ್ದಾರೆ. ಪ್ರವಾಹದ ಆರ್ಭಟಕ್ಕೆ ನೂರಾರು ಮನೆಗಳು, ಕಟ್ಟಡಗಳು ಮಣ್ಣು ಪಾಲಾಗಿವೆ. ಈ ಎಲ್ಲ ಭೀಕರತೆಯ ನಡುವೆ, ನಾಪತ್ತೆಯಾದ ಮಾಲಕರಿಗಾಗಿ ಧ್ವಂಸಗೊಂಡ ಮನೆಗಳ ಬಳಿಯೇ ಶ್ವಾನಗಳು ಕಾದು ಕುಳಿತಿರುವ ದೃಶ್ಯ (Viral News) ಮನುಕಲುಕುವಂತಿದೆ.
ನೇಪಾಳದಲ್ಲಿಪ್ರವಾಹವು ಜನರ ಬದುಕನ್ನೇ ವಿನಾಶಕ್ಕೆ ತಳ್ಳಿದೆ. ಈ ನಡುವೆ ಹಲವು ಶ್ವಾನಗಳು ಧ್ವಂಸಗೊಂಡ ಮನೆ ಬಳಿಗೆ ಹೋಗಿ ಅಲ್ಲಿಯೆ ಕಾದು ಕುಳಿತಿವೆ. ನಾಪತ್ತೆಯಾದ ತಮ್ಮವರಿಗಾಗಿ ಅವು ಹುಡುಕುತ್ತಲೇ ಇವೆ. ನೇಪಾಳದ ತ್ರಿಶೂಲಿ ಬಜಾರ್‌ನಲ್ಲಿ ಮನೆಗಳು ಸಂಪೂರ್ಣವಾಗಿ ಪ್ರವಾಹದಲ್ಲಿ ಕೊಚ್ಚಿಹೋದ ಜಾಗದಲ್ಲಿ ಕಪ್ಪು ಮತ್ತು ಬಿಳಿ ನಾಯಿಗಳು ಅಲ್ಲಿಂದ ಕದಲುತ್ತಿಲ್ಲ. ಸುತ್ತಲೂ ಜೆಸಿಬಿ ಕಾರ್ಯಾಚರಣೆ ನಡೆಸುತ್ತಿದ್ದರೂ, ಅಷ್ಟೊಂದು ಶಬ್ದ ಹಾಗೂ ಗದ್ದಲದ ನಡುವೆಯೂ ಇದ್ದ ಸ್ಥಳದಿಂದ ತೆರಳುತ್ತಿಲ್ಲ. ಈ ಶ್ವಾನಗಳು ಪ್ರವೇಶದ್ವಾರದ ಬಳಿ ಕೆಸರಿನಲ್ಲಯೇ ಗಂಟೆಗಟ್ಟಲೆ ಕುಳಿತು ಸಮಯ ಕಳೆಯುತ್ತವೆ. ರಕ್ಷಣಾ ಸಿಬ್ಬಂದಿ ಬಿಸ್ಕೇಟ್ ನೀಡಿ ಆಚೆ ಕರೆಯಲು ಕರೆತರಲು ಯತ್ನಿಸಿದರೂ ಬರುತ್ತಿಲ್ಲ. ಆದರೆ ಅವು ತಲೆ ಎತ್ತಿಯೂ ನೋಡುತ್ತಿಲ್ಲ. ಅವು ತಮ್ಮ ಮನೆಯ ಗಡಿಯಾಗಿದ್ದ ಜಾಗವನ್ನು ಬಿಟ್ಟು ಹೊರಗೆ ಬರಲು ಒಪ್ಪುತ್ತಿಲ್ಲ ಎಂದಯ ಸ್ತಳೀಯರು ಹೇಳಿದ್ದಾರೆ.
ವಿಡಿಯೊ ನೋಡಿ:
ಇನ್ನೊಂದೆಡೆ ಧುಂಗಿಯಲ್ಲಿ ಲಿಲ್ಲಿ ಎಂಬ ನಾಯಿ ಅದರ ಮನೆ ಇದ್ದ ಸ್ಥಳದ ಬಳಿಯೇ ಉಳಿದುಕೊಂಡಿದೆ. ಊಟ ಹಾಕುತ್ತಿದ್ದ ಹೋಟೆಲ್ ಮಾಲಕ ಪ್ರವಾಹದ ನಂತರ ಕಾಣೆಯಾಗಿದ್ದು, ಧ್ವಂಸಗೊಂಡ ಹೋಟೆಲ್ ಶಟರ್ ಬಳಿಯೇ ನಾಯಿ ದಿನವಿಡೀ ಹುಡುಕಾಟ ನಡೆಸುತ್ತಿದೆ. ಸ್ಥಳೀಯರು ಆಹಾರ ನೀಡಿದರೂ ಅದು ಆ ಜಾಗವನ್ನು ತೊರೆಯುತ್ತಿಲ್ಲ.
Viral Video: ಮಧ್ಯ ರಸ್ತೆಯಲ್ಲೇ ಭರ್ಜರಿ ಭೋಜನ
ವೈರಲ್ ಆದ ಮತ್ತೊಂದು ವಿಡಿಯೊದಲ್ಲಿ, ಅರ್ಧದಷ್ಟು ಕೊಚ್ಚಿಹೋದ ಮಣ್ಣಿನ ರಾಶಿಯ ಮೇಲೆಯೇ ಸುಸ್ತಾಗಿ ಕುಳಿತಿರುವ ಶ್ವಾನದ ದೃಶ್ಯ ಕಣ್ಣೀರು ತರಿಸುವಂತಿದೆ. ಕಣ್ಮರೆಯಾದ ತಮ್ಮ ಮಾಲಕರೆಡೆಗೆ ಸಾಕು ನಾಯಿಗಳು ತೋರುತ್ತಿರುವ ನಿಷ್ಠೆ ನಿಜಕ್ಕೂ ಅಚ್ಚರಿ ಮೂಡಿಸುವಂತಿದೆ.