ಬೆಂಗಳೂರು: ಬೆಂಗಳೂರಿನ ಬೀದಿಯೊಂದರಲ್ಲಿ ನಿಂತಿದ್ದ ಟಿಬೆಟಿಯನ್(Tibetan) ವ್ಯಕ್ತಿಯೊಬ್ಬ ಕನ್ನಡವನ್ನು ಸಲೀಸಾಗಿ ಮಾತನಾಡಿದ್ದಾನೆ. ಅವನು ಪಟಪಟನೆ ಕನ್ನಡ ಮಾತನಾಡುತ್ತಿರುವ ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.ಕನ್ನಡ(Kannada) ಗೊತ್ತಿದ್ದು, ಮಾತನಾಡುವುದಕ್ಕೆ ಹಿಂದೆ-ಮುಂದೆ ನೋಡುವವರಿಗಿಂತ ಇತ ಎಷ್ಟೋ ಮಿಗಿಲು ಎನ್ನುತ್ತಿದ್ದಾರೆ ನೆಟ್ಟಿಗರು. ಇವನ ಕನ್ನಡಪ್ರೇಮ ಕಂಡು ನೆಟ್ಟಿಗರಂತೂ ಫುಲ್ ಫಿದಾ ಆಗಿದ್ದಾರೆ.
ವೈರಲ್ ಆದ ವಿಡಿಯೊದಲ್ಲಿ ಟಿಬೆಟಿಯನ್ ವ್ಯಕ್ತಿಯೊಬ್ಬ ಇಂಗ್ಲಿಷ್ ಮತ್ತು ಕನ್ನಡ ಪದಗಳನ್ನು ಮಿಕ್ಸ್ ಮಾಡಿ ಮಾತನಾಡುವುದು ಸೆರೆಯಾಗಿದೆ. ಹಾಗೇ ಆತ "ಕನ್ನಡ ಗೊತ್ತಿಲ್ಲ ಅಂತ ಏನೂ ಇಲ್ಲ. ಕಾವೇರಿ ನೀರು ಕುಡಿದ ನಂತರ, ನೀವು ಸಲೀಸಾಗಿ ಕನ್ನಡ ಮಾತನಾಡುತ್ತೀರಿ" ಎಂದು ಅವನು ಹೇಳಿದ ಮಾತು ಸಿಕ್ಕಾಪಟ್ಟೆ ವೈರಲ್ ಆಗಿದೆ.
ವಿಡಿಯೊ ನೋಡಿ...
ಅಲ್ಲದೇ ಆತ ವಿಡಿಯೊದಲ್ಲಿ ತನಗೆ ಕನ್ನಡ ಮಾತನಾಡುವ ಬಹಳಷ್ಟು ಟಿಬೆಟಿಯನ್ನರು ಗೊತ್ತು ಎಂದು ಹೇಳಿದ್ದಾನೆ. ಹಾಗೂ ತಾನು ಕನ್ನಡದಲ್ಲಿ ಮಾತನಾಡುವಾಗ ಜನರು ತನ್ನನ್ನು ತುಂಬಾ ಗೌರವಿಸುತ್ತಾರೆ. ಹೊರಗಿನವರು ಕನ್ನಡ ಭಾಷೆಯನ್ನು ಮಾತನಾಡುತ್ತಿದ್ದಾರೆ ಎಂದು ತುಂಬಾ ಹೆಮ್ಮೆಪಡುತ್ತಾರೆ ಎಂದು ಖುಷಿಯಿಂದ ಹೇಳಿದ್ದಾನೆ.
ಈ ಸುದ್ದಿಯನ್ನೂ ಓದಿ:Viral Video: ಊಟದ ವಿಷಯಕ್ಕೆ ಕಿರಿಕ್; ರೊಚ್ಚಿಗೆದ್ದ ಪ್ರಯಾಣಿಕರಿಂದ ಅನಾಗರಿಕ ವರ್ತನೆ
ಬೆಂಗಳೂರಿನಲ್ಲಿ ಭಾಷಾ ಚರ್ಚೆ
ಇತ್ತೀಚೆಗೆ ನಡೆದ ವಿವಾದವೊಂದರಲ್ಲಿ, ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್ ಒಬ್ಬರು ಗ್ರಾಹಕರೊಂದಿಗೆ ಕನ್ನಡ ಮಾತನಾಡಲು ನಿರಾಕರಿಸಿದ್ದರು ಮತ್ತು ಈ ಘಟನೆ ಬೆಂಗಳೂರಿನ ಚಂದಾಪುರ ಶಾಖೆಯಲ್ಲಿ ಗಲಾಟೆಗೆ ಕಾರಣವಾಯಿತು. ಗ್ರಾಹಕರು ಪದೇ ಪದೇ ಒತ್ತಾಯಿಸುತ್ತಿದ್ದರೂ ಸಹ ಮ್ಯಾನೇಜರ್ ಕನ್ನಡ ಮಾತನಾಡಿಲ್ಲ.ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.ಮ್ಯಾನೇಜರ್ ಕನ್ನಡದಲ್ಲಿ ಮಾತನಾಡಲು ನಿರಾಕರಿಸುತ್ತಿರುವುದನ್ನು ಮತ್ತು ಹಿಂದಿ ಮಾತ್ರ ತಿಳಿದಿರಬೇಕೆಂದು ಒತ್ತಾಯಿಸುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿತ್ತು.