ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಲಗಿದ್ದ ಬೀದಿ ನಾಯಿಗೆ ಕಲ್ಲು ಹೊಡೆದ ಬಾಲಕ: ಮಗ ಮಾಡಿದ ಕೃತ್ಯ ನೋಡಿ ನಿರ್ಲಕ್ಷ್ಯ ಮಾಡಿದ ಪೋಷಕರು, ವಿಡಿಯೋ ನೋಡಿ

Viral Video: ದೆಹಲಿಯ ಒಂದು ವಿಡಿಯೋ ಈಗ ಪೋಷಕರ ಬಗ್ಗೆ ಚರ್ಚೆಗೆ ಗ್ರಾಸವಾಗಿದ್ದು, ಬಾಲಕನೊಬ್ಬ ಹೆತ್ತವರ ಮುಂದೆಯೇ ಬೀದಿ ನಾಯಿಗೆ ಕಲ್ಲು ಎಸೆದಿದ್ದಾನೆ. ನಾಯಿಯೂ ಯಾವುದೇ ರೀತಿ ತೊಂದರೆ ಪಡಿಸದೇ ನಿದ್ರಿಸುತ್ತಿತ್ತು. ಆದರೆ ಸಣ್ಣ ಬಾಲಕನೊಬ್ಬ, ರಸ್ತೆಯಲ್ಲಿದ್ದ ಕಲ್ಲನ್ನು ಎತ್ತಿಕೊಂಡು ಮಲಗಿದ್ದ ನಾಯಿಗೆ ಎಸೆದಿದ್ದಾನೆ‌. ಸದ್ಯ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪೋಷಕರ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ.

ದೆಹಲಿಯಲ್ಲಿ ಮಲಗಿದ್ದ ಬೀದಿ ನಾಯಿಗೆ ಕಲ್ಲು ಎಸೆದ ಪುಟ್ಟ ಬಾಲಕ

ನವದೆಹಲಿ,ಜು.23: ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ನಾವು ಶಾಲೆಯ ಪಾಠಗಳಿಗಿಂತ ಮನೆಯಲ್ಲೇ ಕಲಿಸಿಕೊಟ್ಟರೆ ಉತ್ತಮ. ನಾಗರಿಕ ಪ್ರಜ್ಞೆ, ಪರಿಸರ ಕಾಳಜಿ, ಪ್ರಾಣಿಗಳ ಮೇಲಿನ ದಯೆ ಇತ್ಯಾದಿಯನ್ನು ಪೋಷಕರು, ಹಿರಿಯರಿಂದಲೇ ಮಕ್ಕಳು ಕಲಿಯುತ್ತಾರೆ. ಆದರೆ ದೆಹಲಿಯ ಒಂದು ವಿಡಿಯೋ ಈಗ ಪೋಷಕರ ಬಗ್ಗೆ ಚರ್ಚೆಗೆ ಗ್ರಾಸವಾಗಿದ್ದು, ಬಾಲಕನೊಬ್ಬ ಹೆತ್ತವರ ಮುಂದೆಯೇ ಬೀದಿ ನಾಯಿಗೆ ಕಲ್ಲು ಎಸೆದಿದ್ದಾನೆ. ನಾಯಿಯೂ ಯಾವುದೇ ರೀತಿ ತೊಂದರೆ ಪಡಿಸದೇ ನಿದ್ರಿ ಸುತ್ತಿತ್ತು. ಆದರೆ ಸಣ್ಣ ಬಾಲಕನೊಬ್ಬ, ರಸ್ತೆಯಲ್ಲಿದ್ದ ಕಲ್ಲನ್ನು ಎತ್ತಿಕೊಂಡು ಮಲಗಿದ್ದ ನಾಯಿಗೆ ಎಸೆದಿದ್ದಾನೆ‌. ಸದ್ಯ ಈ ವಿಡಿಯೊ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಪೋಷಕರ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ.

ದಯೆ ಮತ್ತು ಸಹಾನುಭೂತಿಯ ಪಾಠಗಳನ್ನು ಪೋಷಕರೆ ತಿಳಿಸಿದರೆ ಮಕ್ಕಳು ಸಣ್ಣವರಿಂದಲೇ ಇದನ್ನು ಕಲಿಯುತ್ತಾರೆ. ಆದರೆ ಬಾಲಕನೊಬ್ಬ ಬೀದಿ ನಾಯಿಯೊಂದರ ಮೇಲೆ ಕಲ್ಲು ಎಸೆದರೂ, ಅದನ್ನು ತಿದ್ದುವ ಬದಲು ಪೋಷಕರು ನಗುತ್ತಾ ನಿಂತಿದ್ದಾರೆ. ಮಕ್ಕಳು ತಮ್ಮ ಪೋಷಕರು ಏನು ಕಲಿಸುತ್ತಾರೋ ಅದನ್ನು ಕಲಿಯುತ್ತಾರೆ. ಇಂತಹ ನಡವಳಿಕೆಯನ್ನು ಪ್ರೋತ್ಸಾಹಿಸುವುದು ಸರಿಯಲ್ಲ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಡಿಯೋ ನೋಡಿ:



ದೇಶದ ರಾಜಧಾನಿ ದೆಹಲಿಯಲ್ಲಿ ಈ ಘಟನೆಯೂ ನಡೆದಿದೆ. ಬಾಲಕ ಕಲ್ಲು ಬಿಸಾಡಿದರೂ ಹಠಾತ್ ದಾಳಿಯಿಂದ ಬೆಚ್ಚಿಬಿದ್ದ ನಾಯಿ ತಕ್ಷಣ ಎದ್ದು ಸುತ್ತಲೂ ನೋಡಿತು.ಆದರೆ ಯಾರಿಗೂ ದಾಳಿ ಮಾಡದೆ ಹೋರಟು ಹೋಗಿದೆ. ವೈರಲ್ ಆದ ವಿಡಿಯೊದಲ್ಲಿ ಬೀದಿನಾಯಿಯೂ ಯಾರಿಗೆ ತೊಂದರೆ ಕೊಡದೆ ಶಾಂತವಾಗಿ ಮಲಗಿರುವುದು ನೋಡಬಹುದು. ಈ ವೇಳೆ ಅಲ್ಲಿಗೆ ಬಂದ ಸಣ್ಣ ಬಾಲಕನೊಬ್ಬ, ರಸ್ತೆಯಲ್ಲಿದ್ದ ಕಲ್ಲನ್ನು ಎತ್ತಿಕೊಂಡು ಅದಕ್ಕೆ ಬಿಸಾಡಿದ್ದಾನೆ, ನಾಯಿ ಭಯದಿಂದ ಎದ್ದು ಹೋಗಿದೆ.

Viral Video: ʼʼನಂಗೂ ಅಡ್ಮಿಷನ್‌ ಕೊಡಿʼʼ; ಬಾಯ್ಸ್ ಹಾಸ್ಟೆಲ್ ಮೆಸ್‌ಗೆ ನುಗ್ಗಿದ ಮೊಸಳೆ

ಆದರೆ ಈ ಘಟನೆಯಲ್ಲಿ ಎಲ್ಲರೂ ಕೋಪಗೊಂಡಿದ್ದು ಪೋಷಕರ ವರ್ತನೆ ಬಗ್ಗೆ.‌. ಬಾಲಕ ಪ್ರಾಣಿಗೆ ಕಲ್ಲು ಹೊಡೆಯುತ್ತಿದ್ದರೂ ಪೋಷಕರು ಬುದ್ದಿ ಹೇಳದೆ ನಿಂತಿದ್ದಾರೆ.. ಸದ್ಯ ಈ ವಿಡಿಯೊ ವೈರಲ್ ಆಗಿದ್ದು, "ಇದು ಕೆಟ್ಟ ಪೋಷಕರ ವರ್ತನೆ" ಎಂದು ಜನರು ಕಿಡಿಕಾರುತ್ತಿದ್ದಾರೆ. ಬಳಕೆದಾರ ರೊಬ್ಬರು ಸಣ್ಣ ವಿಷಯ ಆದರೆ ಜೀವನದಲ್ಲಿ ದೊಡ್ಡ ವ್ಯತ್ಯಾಸವನ್ನುಂಟು ಮಾಡುತ್ತದೆ ಅಂದರು. ಮತ್ತೊಬ್ಬರು ನಾವು ಮಕ್ಕಳಿಗೆ ಮೌಲ್ಯಗಳು ಮತ್ತು ಕರುಣೆಯನ್ನು ಸಣ್ಣವರಿಂದಲೇ ಕಲಿಸಬೇಕು ಎಂದು ಬರೆದಿದ್ದಾರೆ.