ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಈ ಆಟೋ ಚಾಲಕನ ತಿಂಗಳ ದುಡಿಮೆ ಕೇಳಿದ್ರೆ ಶಾಕ್‌ ಆಗ್ತೀರಾ : ಕಾರ್ಪೊರೇಟ್ ಕೆಲಸಕ್ಕೆ ಗುಡ್ ಬೈ ಹೇಳಿ ಎಂದ ನೆಟ್ಟಿಗರು!

Viral Video: ಸ್ವಂತ ಉದ್ಯಮದಲ್ಲಿ ಲಾಭಗಳಿಸುವ ಟ್ರಿಕ್ಸ್ ಗೊತ್ತಿದ್ದರೆ ದುಪ್ಪಟ್ಟು ಹಣ ಮಾಡಬಹುದು ಅನ್ನೋದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಮುಂಬೈ ನಲ್ಲಿ ಆಟೋ ಚಾಲಕನೊಬ್ಬ ಖರ್ಚುಗಳನ್ನು ವ್ಯಯಿಸಿ ದಿನಕ್ಕೆ 2,500 ರೂಪಾಯಿ ಲಾಭ ಗಳಿಸುವುದಾಗಿ ಹೇಳಿಕೊಂಡಿದ್ದಾನೆ. ಇದಕ್ಕೆ ಅನೇಕ ಉದ್ಯೋಗಿಗಳು ಇದೇ ಉದ್ಯಮ ಬೆಸ್ಟ್ ಆಯ್ಕೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ತಿಂಗಳಿಗೆ ರೂ.75,000 ಆದಾಯ ಗಳಿಸುವ ಆಟೋ ಚಾಲಕ

ಮುಂಬೈ,ಮಾ.15: ಹೆಚ್ಚಿನ ಶಿಕ್ಷಣವಂತರೂ ಸ್ವ ಉದ್ಯೋಗಕ್ಕಿಂತ ಹೆಚ್ಚಾಗಿ ಆಫೀಸ್ ಕೆಲಸ, ಕಾರ್ಪೊರೇಟ್ ಉದ್ಯೋಗಕ್ಕೆ ಹೆಚ್ಚಿನ ಆಸಕ್ತಿ ವಹಿಸುತ್ತಾರೆ. ಆದರೆ ಸ್ವಂತ ಉದ್ಯಮದಲ್ಲಿ ಲಾಭಗಳಿಸುವ ಟ್ರಿಕ್ಸ್ ಗೊತ್ತಿದ್ದರೆ ದುಪ್ಪಟ್ಟು ಹಣ ಮಾಡಬಹುದು ಅನ್ನೋದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಮುಂಬೈ ನಲ್ಲಿ (Mumbai News) ಆಟೋ ಚಾಲಕನೊಬ್ಬ ಖರ್ಚುಗಳನ್ನು ವ್ಯಯಿಸಿ ದಿನಕ್ಕೆ 2,500 ರೂಪಾಯಿ ಲಾಭ ಗಳಿಸುವುದಾಗಿ ಹೇಳಿಕೊಂಡಿದ್ದಾನೆ. ಇದಕ್ಕೆ ಅನೇಕ ಉದ್ಯೋಗಿಗಳು ಇದೇ ಉದ್ಯಮ ಬೆಸ್ಟ್ ಆಯ್ಕೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಹೆಚ್ಚು ಶಿಕ್ಷಣ ಪಡೆದರೂ ಇತ್ತೀಚೆಗೆ ತಮಗೆ ಬೇಕಾದ ಉದ್ಯೋಗ ಗಿಟ್ಟಿಸಿಕೊಳ್ಳುವುದು ಕಷ್ಟ. ಆದರೆ ಸ್ವ ಉದ್ಯಮ‌ದಿಂದ ಆಟೋಚಾಲಕನೊಬ್ಬ ದುಬಾರಿ ಜೀವನಶೈಲಿಯ ಮಧ್ಯದಲ್ಲೂ ಲಾಭ ಗಳಿಸುತ್ತಿದ್ದಾನೆ. ಆಟೋ ಚಾಲಕನು ಮುಂಬೈ ಜೀವನ ಶೈಲಿ ದುಬಾರಿಯಾದರೂ ಇಲ್ಲಿ ಕಷ್ಟ ಪಟ್ಟರೆ ಹಣ ಮಳೆಯಂತೆ ಸುರಿಯುತ್ತದೆ ಆದರೆ ಸರಿಯಾದ ಆತ್ಮವಿಶ್ವಾಸ, ಶ್ರಮ ಬೇಕಷ್ಟೇ ಅಂದಿದ್ದಾರೆ.

ವಿಡಿಯೋ ನೋಡಿ:



ಒಬ್ಬ ವ್ಯಕ್ತಿ ಮುಂಬೈನಲ್ಲಿ ವಾಸಿಸುವುದು ಎಷ್ಟು ದುಬಾರಿ ಎಂಬುದರ ಕುರಿತು ಆಟೋ ಚಾಲಕನೊಂದಿಗೆ ಪ್ರಶ್ನಿಸಿದಾಗ ಚಾಲಕ ಹೇಳಿಕೊಂಡಿದ್ದಾನೆ. ಮುಂಬೈ ತುಂಬಾ ದುಬಾರಿಯಾಗಿದೆ. ಆದರೆ ಇಲ್ಲಿ ಹಣವೂ ಮಳೆಯಂತೆ ಬರುತ್ತದೆ. ಆಟೋ ಚಾಲಕನು ದಿನಕ್ಕೆ ಸರಾಸರಿ 2500 ರೂ. ಗಳಿಸು ತ್ತೇನೆ ಎಂದು ಬಹಿರಂಗಪಡಿಸುತ್ತಾನೆ. ಈ ಲೆಕ್ಕದಂತೆ ತಿಂಗಳಿಗೆ ಸುಮಾರು 75,000 ಲಾಭವಾಗಿ ಉಳಿಸುತ್ತಾನೆ.

Viral Video: ಛೇ ಎಂತಾ ಅಮಾನವೀಯ ಕೃತ್ಯ: ಭಾರಿ ತೂಕದ ಪಾರ್ಸೆಲ್ ಹೊತ್ತು ಹೈರಾಣಾದ ಡೆಲಿವರಿ ಬಾಯ್!

ಭಾರತದಲ್ಲಿ ತಿಂಗಳಿಗೆ 30 ಸಾವಿರ ರೂಪಾಯಿಗಳ ಕೆಲಸವನ್ನು ಗೌರವಾನ್ವಿತವೆಂದು ಪರಿಗಣಿಸ ಲಾಗುತ್ತದೆ. ಆದರೆ 75 ಸಾವಿರ ರೂಪಾಯಿ ಆಟೋ ಚಾಲಕನನ್ನು ಗಳಿಸುವುದು ಕಂಡು ಅನೇಕರು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಈ ಕ್ಲಿಪ್ ಸುಮಾರು ಒಂದು ಮಿಲಿಯನ್ ವೀಕ್ಷಣೆಗಳಿಸಿದ್ದು ಮಿಶ್ರ ಪ್ರತಿಕ್ರಿಯೆಗಳು ಹುಟ್ಟುಹಾಕಿದೆ.

ಬಳಕೆದಾರರೊಬ್ಬರು ಸಹೋದರ ನಿಮ್ಮಲ್ಲಿ ಖಾಲಿ ಹುದ್ದೆ ಇದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು ದೊಡ್ಡ ನಗರಗಳಲ್ಲಿನ ಆಟೋ ಚಾಲಕರು ನಿಜವಾಗಿಯೂ ಇಷ್ಟು ಸಂಪಾದಿಸುತ್ತಾರೆ, ಬಹುಶಃ ಇನ್ನೂ ಹೆಚ್ಚು ದುಡಿಯಬಹುದು ಎಂದು ಪ್ರತಿಕ್ರಿಯೆ ನೀಡಿದ್ದಾರೆ