ಬಿಹಾರ,ಜು.28: ಪ್ರೀತಿ,ಪ್ರೇಮ ವಿಚಾರದಲ್ಲಿ ಇತ್ತೀಚೆಗೆ ನಾನಾ ರೀತಿಯ ಘಟನೆಗಳು ವರದಿಯಾಗುತ್ತಲೇ ಇವೆ. ಇದೀಗ ಬಿಹಾರದ ನಲಂದಾ ಜಿಲ್ಲೆಯ ರಾಜ್ ಗೀರ್ ನಲ್ಲಿ ಅಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಚಲಿಸುತ್ತಿದ್ದ ಬೈಕ್ ನಲ್ಲಿ ಯುವತಿಯೊಬ್ಬಳು ನೇತಾಡುತ್ತಿದ್ದು ಬೈಕ್ ಸವಾರನು ರಸ್ತೆ ಯುದ್ದಕ್ಕೂ ಎಳೆದೊಯ್ದಿದ್ದಾನೆ. ಇವರಿಬ್ಬರು ಪ್ರೇಮಿಗಳಾಗಿದ್ದು ಯುವಕ ಮದುವೆಯಾಗಲು ನಿರಾಕರಣೆ ಮಾಡಿದ್ದು ಯುವತಿ ಬೈಕ್‌ನ ಹ್ಯಾಂಡಲ್ ಹಿಡಿದು ನಿಂತಿದ್ದಾಳೆ. ಆದರೆ ಬೈಕ್ ಸವಾರ ನಿಲ್ಲಿಸದೆಯೇ ಮುಂದೆ ಸಾಗಿದ್ದಾನೆ. ಈ ಅಘಾತಕಾರಿ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗುತ್ತಿದೆ.
ಬಿಹಾರದ ನಳಂದ ಜಿಲ್ಲೆಯ ರಾಜ್‌ಗಿರ್‌ನ ಕಿಲಾ ಮೈದಾನದಲ್ಲಿ ಈ ಘಟನೆ ನಡೆದಿದೆ. ಚಲಿಸುತ್ತಿದ್ದ ಬೈಕ್ ನ ಹ್ಯಾಂಡಲ್ ಹಿಡಿದ ಯುವತಿಯನ್ನು ರಸ್ತೆಯ ಉದ್ದಕ್ಕೂ ಎಳೆದೊಯ್ಯುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಈ ಕ್ಲಿಪ್ ಜನರನ್ನು ಭಯ ಭೀತಗೊಳಿಸಿದ್ದು,ಅನೇಕರು ಬೈಕ್ ಸವಾರನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ವಿಡಿಯೋ ನೋಡಿ:
ದಾರಿಹೋಕರೊಬ್ಬರು ರೆಕಾರ್ಡ್ ಮಾಡಿ ವಿಡಿಯೊ ಶೇರ್ ಮಾಡಿದ್ದಾರೆ. ವೈರಲ್ ಕ್ಲಿಪ್‌ನಲ್ಲಿ, ಒಬ್ಬ ಯುವಕ ಬೈಕ್ ಸವಾರಿ ಮಾಡುತ್ತಿರುವುದನ್ನು ಸೆರೆಹಿಡಿಯಲಾಗಿದೆ. ಆದರೆ ಯುವತಿಯೊಬ್ಬಳು ಬೈಕ್ ನಲ್ಲಿ ನೇತಾಡುತ್ತಾ ರಸ್ತೆಯ ಉದ್ದಕ್ಕೂ ಹಲವಾರು ಮೀಟರ್‌ಗಳವರೆಗೆ ಎಳೆಯಲ್ಪಟ್ಟಿದ್ದಾಳೆ. ಸವಾರ ಮಾತ್ರ ಬೈಕ್ ನಿಲ್ಲಿಸದೇ ಮುಂದಕ್ಕೆ ಚಲಾಯಿಸಿಕೊಂಡು ಹೋಗಿದ್ದಾನೆ. ಯುವತಿ ರಸ್ತೆಯಲ್ಲೇ ತೀವ್ರವಾಗಿ ಉಜ್ಜಿಕೊಳ್ಳುತ್ತಾ ಮುಂದೆ ಸಾಗಿದ್ದು ಕೊನೆಗೆ ನಿಯಂತ್ರಣ ತಪ್ಪಿ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ.
ರಸ್ತೆಗೆ ಬೀಳುತ್ತಿದ್ದಂತೆ ಸುತ್ತಮುತ್ತಲ ಸ್ಥಳೀಯರು ತಕ್ಷಣ ಓಡಿ ಬಂದು ಯುವತಿಯನ್ನು ರಕ್ಷಣೆಗೆ ಧಾವಿಸಿದ್ದಾರೆ. ಈ ಬೈಕ್ ಸವಾರಿ ಮಾಡುತ್ತಿರುವ ವ್ಯಕ್ತಿ ಸರ್ಕಾರಿ ಉದ್ಯೋಗಿ ಎಂದು ವರದಿಯಾಗಿದೆ. ಮಹಿಳೆ ಆತನ ಗೆಳತಿಯಾಗಿದ್ದು ಇಬ್ಬರೂ ಹಲವಾರು ತಿಂಗಳುಗಳಿಂದ ಸಂಬಂಧದಲ್ಲಿದ್ದಾರೆ. ಕುಟುಂಬದ ವಿರೋಧದಿಂದಾಗಿ ಆ ವ್ಯಕ್ತಿ ಅವಳನ್ನು ಮದುವೆಯಾಗಲು ನಿರಾಕರಿಸಿದಾಗ ಈ ಘರ್ಷಣೆ ಸಂಭವಿಸಿದೆ.
ಮಹಿಳೆ ನವಾಡಾ ಜಿಲ್ಲೆಯ ನರದಿಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಆದಾಗ್ಯೂ, ಈ ಘಟನೆಯ ಕುರಿತು ಅಧಿಕಾರಿಗಳು ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ, ತನಿಖೆ ನಡೆಯುತ್ತಿದೆ ಎನ್ನಲಾಗಿದೆ. ವೀಡಿಯೊ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದರು. ನೆಟ್ಟಿಗರೊಬ್ಬರು ಇದನ್ನು ತನಿಖೆ ನಡೆಸಿ ಬೈಕರ್ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.