ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜೆನ್ -ಜಿ ಯುವತಿಯ ತಿಂಗಳ ಖರ್ಚು ಕೇಳಿದ್ರೆ ದಂಗಾಗೋದು ಗ್ಯಾರಂಟಿ; ದುಬಾರಿ ಜೀವನ ಶೈಲಿ ನೋಡಿ ನೆಟ್ಟಿಗರು ಹೇಳಿದ್ದೇನು?

Viral Video: ಬೆಂಗಳೂರಿನಲ್ಲಿ ವಾಸ ಮಾಡುತ್ತಿರುವ 22 ವರ್ಷದ ಯುವತಿ ಯೊಬ್ಬಳು ತನ್ನ ತಿಂಗಳ ಖರ್ಚನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಒಬ್ಬಂಟಿಯಾಗಿ ವಾಸ ಮಾಡುತ್ತಿರುವ ಯುವತಿಯೂ ಮಾನಸಿಕ ನೆಮ್ಮದಿ ಹಾಗೂ ಸ್ವಯಂ ಆರೈಕೆಗಾಗಿ ದೊಡ್ಡ ಮೊತ್ತವನ್ನೇ ಖರ್ಚು ಮಾಡುತ್ತಾರೆ.

ಬೆಂಗಳೂರು ಯುವತಿಯ ದುಬಾರಿ ಜೀವನ ಶೈಲಿ

ಬೆಂಗಳೂರು,ಮಾ.24: ಮುಂಬೈ, ಸಿಲಿಕಾನ್ ಸಿಟಿಯಂತ (Bengaluru) ನಗರ ಪ್ರದೇಶದಲ್ಲಿ ಇಂದು ಜೀವನ ನಡೆಸುವುದು ಕಷ್ಟಕರ. ಅದರಲ್ಲೂ ಇಂದಿನ ಯುವ ಪೀಳಿಗೆಗೆ ಖರ್ಚು ವೆಚ್ಚಗಳನ್ನು ನಿಭಾಯಿ ಸುವುದು ಕಷ್ಟಕರವೇ ಆಗಿರುತ್ತದೆ. ಇಂದಿನ ಕಾಲದ 'ಜೆನ್-ಜಿ' ಜೀವನ ಶೈಲಿ ಮತ್ತು ಅವರ ಖರ್ಚು ವೆಚ್ಚ ಎಷ್ಟು ದುಬಾರಿ ಯಾಗಿರುತ್ತದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಬೆಂಗಳೂರಿನಲ್ಲಿ ವಾಸ ಮಾಡುತ್ತಿರುವ 22 ವರ್ಷದ ಯುವತಿಯೊಬ್ಬಳು ತನ್ನ ತಿಂಗಳ ಖರ್ಚನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಒಬ್ಬಂಟಿಯಾಗಿ ವಾಸ ಮಾಡುತ್ತಿರುವ ಯುವತಿಯೂ ಮಾನಸಿಕ ನೆಮ್ಮದಿ ಹಾಗೂ ಸ್ವಯಂ ಆರೈಕೆಗಾಗಿ ದೊಡ್ಡ ಮೊತ್ತವನ್ನೇ ಖರ್ಚು ಮಾಡುತ್ತಾರೆ.

ವಿಡಿಯೋ ನೋಡಿ:



ಮಾನಸಿಕ ಆರೋಗ್ಯಕ್ಕಾಗಿ ತಿಂಗಳಿಗೆ 10,000 ರೂಪಾಯಿಯನ್ನು ಯುವತಿ ಮೀಸಲಿಟ್ಟಿದ್ದಾಳೆ. ಅದೇ ರೀತಿ ವಾರಾಂತ್ಯದ ಮಸಾಜ್‌ ಮತ್ತು ಪೆಡಿಕ್ಯೂರ್‌ಗಳಿಗಾಗಿ ತಿಂಗಳಿಗೆ ಸುಮಾರು 5,000 ರೂ. ಹಾಗೂ ಉಗುರುಗಳ ವಿನ್ಯಾಸ ಕ್ಕೆ 3000 ರೂಪಾಯಿ ಖರ್ಚು ಮಾಡುತ್ತಾರೆ‌. ಪ್ರತಿ ಭಾನುವಾರ ಡೇಟ್ ಗಾಗಿ 2,000 ರೂಪಾಯಿ ವ್ಯಯಿಸುತ್ತಾಳೆ.

Viral News: ಪ್ಲಂಬರ್ ಕೆಲಸ ಮಾಡುವ ವ್ಯಕ್ತಿಯ ವಾರ್ಷಿಕ ಆದಾಯ ಗೊತ್ತಾ? ಐಟಿ ಉದ್ಯೋಗಕ್ಕಿಂತ ಇದೆ ಬೆಸ್ಟ್‌ ಎಂದ ನೆಟ್ಟಿಗರು

ತಿಂಗಳಿಗೆ ಇತರ ಖರ್ಚಿಗಾಗಿ 2,000 ಹೂವುಗಳ ಖರೀದಿ ಹಾಗೂ ಪರ್ಸನಲ್ ಖರ್ಚಿಗೆ 3,000 ರೂ ಖರ್ಚು ಮಾಡುತ್ತೇನೆ ಎಂದಿದ್ದಾಳೆ. ಹಿಂದಿ‌ನ ತಲೆಮಾರಿನವರು ಎಷ್ಟು ಹಣ ವಿನಿ‌ ಯೋಗಿಸುತ್ತಾರೆ ಎಂದು ತನಗೆ ತಿಳಿದಿಲ್ಲ. ಆದರೆ ಆದರೆ ತನಗೆ ಇದು ಮುಖ್ಯ. ಎಂದು ಆಕೆ ವಿಡಿಯೋದಲ್ಲಿ ಹೇಳಿಕೊಂಡಿದ್ದಾಳೆ.

ಈ ವೀಡಿಯೊ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು ಮಿಶ್ರ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ. ಕೆಲವರು ಆಕೆಯ ಜೀವನ ಶೈಲಿಯನ್ನು ಪ್ರಶ್ನಿಸಿದರೆ, ಇತರರು ಅವರ ಆಯ್ಕೆಗಳನ್ನು ಬೆಂಬಲಿಸಿದ್ದಾರೆ‌. ಬಳಕೆದಾರರೊಬ್ಬರು ನೀವು ನಿಮ್ಮ ಮೇಲೆ ಹಣ ಖರ್ಚು ಮಾಡುತ್ತಿರುವುದು ಅದ್ಭುತವಾಗಿದೆ... ಆದರೆ ದಯವಿಟ್ಟು ಇಡೀ ಪೀಳಿಗೆಗೆ ತಪ್ಪು ಸಂದೇಶ ನೀಡಬೇಡಿ ಎಂದಿದ್ದಾರೆ.‌