ಬೆಂಗಳೂರು,ಮೇ 20: ಸಿಲಿಕಾನ್ ಸಿಟಿಯಂತ ನಗರ ಪ್ರದೇಶ ದಲ್ಲಿ ಇಂದು ಬದುಕು ಸಾಗಿಸುವುದು ಸುಲಭದ ಮಾತಲ್ಲ. .ಇದೀಗ ಬೆಂಗಳೂರಿನ (Bengaluru) ಅಪಾರ್ಟ್‌ಮೆಂಟ್ ಒಂದರ ಬೆಲೆ ಕೇಳಿ ನೆಟ್ಟಿಗರು ದಂಗಾಗಿ ಹೋಗಿದ್ದಾರೆ. ಬೆಂಗಳೂರಿನ ಹೃದಯ ಭಾಗದಲ್ಲಿರುವ ಪ್ರತಿಷ್ಠಿತ ಮಿಲ್ಲರ್ಸ್ ರೋಡ್ ನಲ್ಲಿರುವ 3BHK ಫ್ಲಾಟ್ ಒಂದರ ಬೆಲೆ ಬರೋಬ್ಬರಿ 6.5 ಕೋಟಿ ರೂಪಾಯಿ ಎಂದು ತಿಳಿದು ಮಧ್ಯಮ ವರ್ಗದ ಜನರು ಶಾಕ್‌ಗೆ ಒಳಗಾಗಿದ್ದಾರೆ. ಮೆಟ್ರೋ ನಗರಗಳಲ್ಲಿ ಮನೆ ಹೊಂದುವುದು ಮಧ್ಯಮ ವರ್ಗದ ಖರೀದಿದಾರರಿಗೆ ಅಸಾಧ್ಯವಾಗುತ್ತಿದೆಯೇ ಎಂದು ಅನೇಕ ಬಳಕೆದಾರರು ಪ್ರಶ್ನಿಸಿದ್ದಾರೆ.
ರೆಡ್ಡಿಟ್ ನಲ್ಲಿ ಶೇರ್ ಮಾಡಿಕೊಂಡಿರುವ ಈ ಐಷಾರಾಮಿ ಫ್ಲಾಟ್‌ನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿವೆ. ಪೋಸ್ಟ್ ಆನ್‌ಲೈನ್‌ನಲ್ಲಿ ಹರಡುತ್ತಿದ್ದಂತೆ, ಬೆಂಗಳೂರು, ಮುಂಬೈ ಮತ್ತು ದೆಹಲಿ-NCR ನಂತಹ ನಗರಗಳಲ್ಲಿ ಹೆಚ್ಚುತ್ತಿರುವ ರಿಯಲ್ ಎಸ್ಟೇಟ್ ಬೆಲೆಗಳ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿತು. ರಿಯಲ್ ಎಸ್ಟೇಟ್ ಬೆಲೆ ಗಳಂತೆಯೇ ಸಂಬಳ ಹೆಚ್ಚಿಲ್ಲ, ಇದು ಯುವ ವೃತ್ತಿಪರರಿಗೆ ದೊಡ್ಡ ನಷ್ಟ ಎಂದು ಹಲವಾರು ಆತಂಕ ವ್ಯಕ್ತಪಡಿಸಿದ್ದಾರೆ.
Viral Video: ಬರೇಲಿಯಲ್ಲಿ ರಣ ಭೀಕರ ಬಿರುಗಾಳಿ; ಶೆಡ್‌ನೊಂದಿಗೆ ಆಕಾಶಕ್ಕೆ ಹಾರಿದ ವ್ಯಕ್ತಿಯ ವಿಡಿಯೊ ವೈರಲ್
ಅಪಾರ್ಟ್‌ಮೆಂಟ್‌ನ ಪ್ರೀಮಿಯಂ ಒಳಾಂಗಣಗಳು, ವಿಶಾಲವಾದ ಕೊಠಡಿಗಳು, ಆಕರ್ಷಣೀಯ ವಿನ್ಯಾಸ ಎಲ್ಲವೂ ಗಮನ ಸೆಳೆದಿದೆ. ಈ 3BHK ಫ್ಲಾಟ್ ಸಾಮಾನ್ಯ ಫ್ಲಾಟ್ ನಂತೆ ಇರದೇ ಸುಮಾರು 2,850 ಚದರ ಅಡಿ ವಿಸ್ತೀರ್ಣ ಕೂಡ ಹೊಂದಿದೆ. ಜೊತೆಗೆ ಮನೆ ಕೆಲಸದವರಿಗೂ ಪ್ರತ್ಯೇಕ ರೂಮ್, ಪಾರ್ಕಿಂಗ್ ವ್ಯವಸ್ಥೆ ಎಲ್ಲವೂ ಇದೆ. ಆದರೆ ಈ ಅಪಾರ್ಟ್ ಮೆಂಟ್‌ಗೆ ಇಷ್ಟು ದುಬಾರಿ ಬೆಲೆ ಆಘಾತಕಾರಿ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ.
ಮಿಲ್ಲರ್ಸ್ ರೋಡ್ ಬೆಂಗಳೂರಿನ ಅತ್ಯಂತ ದುಬಾರಿ ಏರಿಯಾಗಳಲ್ಲಿ ಒಂದಾಗಿದೆ. ಇಲ್ಲಿ ಜಾಗದ ಕೊರತೆ ಇರುವುದರಿಂದ ಇಲ್ಲಿನ ಬಾಡಿಗೆಯೂ ದುಬಾರಿ ಯಾಗಿದೆ. ಕೆಲವು ಬಳಕೆದಾರರು ಬೆಂಗಳೂರಿನ ತಂತ್ರಜ್ಞಾನವು ಗಗನಕ್ಕೇರುತ್ತಿರುವ ಬಗ್ಗೆ ದೂಷಿಸಿದ್ದಾರೆ. "ಐಟಿ ಸಂಬಳ ಮತ್ತು ಹೂಡಿಕೆದಾರರ ಹಣವು ನಗರವನ್ನು ಸಂಪೂರ್ಣವಾಗಿ ಬದಲಾಯಿಸಿದೆ" ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ." ಮತ್ತೊಬ್ಬರು ಮಧ್ಯಮ ವರ್ಗದ ಕನಸುಗಳಿಗೆ ಈಗ ಕೋಟಿ ವೆಚ್ಚವಾಗುತ್ತದೆ"ಎಂದು ಬರೆದಿದ್ದಾರೆ.