ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಗುವಿನ ಪರಿವೇ ಇಲ್ಲದೆ ರೀಲ್ಸ್‌ನಲ್ಲಿ ಕಳೆದುಹೋದ ತಾಯಿ; ಬ್ರಿಡ್ಜ್‌ನತ್ತ ಸಾಗಿದ ಕಂದಮ್ಮನ ರಕ್ಷಣೆ ಮಾಡಿದ್ಯಾರು?

Viral Video: ಸೋಷಿಯಲ್ ಮೀಡಿಯಾದಲ್ಲಿ ಆತಂಕಕಾರಿ ವಿಡಿಯೊವೊಂದು ವೈರಲ್ ಆಗಿದ್ದು ಮಹಿಳೆ ಯೊಬ್ಬರು ರೀಲ್ಸ್ ಮಾಡುತ್ತಾ ಬ್ಯುಸಿಯಾಗಿದ್ದು ಆಕೆಯ ಮಗು ಸೇತುವೆಯ ಅಂಚಿನ ಕಡೆಗೆ ತೆವಳಿ ಕೊಂಡು ಹೋಗುತ್ತಿದೆ.‌ ಆದರೆ ಈಕೆ ತನ್ನ ಮಗುವಿನ ಬಗ್ಗೆ ಕ್ಯಾರೇ ಇಲ್ಲ ಎನ್ನುವಂತೆ ವಿಡಿಯೊ ಚಿತ್ರೀಕರಣದಲ್ಲಿ ಮಗ್ನರಾಗಿದ್ದಾಳೆ. ಈ ವಿಡಿಯೊ ನೋಡಿದ ಅನೇಕರು ಮಹಿಳೆಯ ಬೇಜವ್ದಾರಿ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ.

ರೀಲ್ಸ್ ಗಾಗಿ ಮಗುವಿನ ಜೀವದ ಜೊತೆ ಚೆಲ್ಲಾಟ ಆಡಿದ ಪಾಪಿ ತಾಯಿ

ನವದೆಹಲಿ,ಆ.10: ​ಇತ್ತೀಚೆಗೆ ರೀಲ್ಸ್ ಗೀಳು ಅನ್ನೋದು ಹೆಚ್ಚಾಗಿದೆ. ತನ್ನ ಜೀವಕ್ಕೆ ಅಪಾಯ ಇದ್ದರೂ ಪರವಾಗಿಲ್ಲ, ವೀವ್ಸ್- ಲೈಕ್ಸ್ ಗಳಿಸಬೇಕೆಂದು ಹುಚ್ಚಾಟ ಮೆರೆಯುವವರು ಅನೇಕರು ಇದ್ದಾರೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಆತಂಕಕಾರಿ ವಿಡಿಯೊವೊಂದು ವೈರಲ್ (Viral News) ಆಗಿದ್ದು ಮಹಿಳೆಯೊಬ್ಬರು ರೀಲ್ಸ್ ಮಾಡುತ್ತಾ ಬ್ಯುಸಿಯಾಗಿದ್ದು ಆಕೆಯ ಮಗು ಸೇತುವೆಯ ಅಂಚಿನ ಕಡೆಗೆ ತೆವಳಿಕೊಂಡು ಹೋಗುತ್ತಿದೆ.‌ ಆದರೆ ಈಕೆ ತನ್ನ ಮಗುವಿನ ಬಗ್ಗೆ ಕ್ಯಾರೇ ಇಲ್ಲ ಎನ್ನುವಂತೆ ವಿಡಿಯೊ ಚಿತ್ರೀಕರಣದಲ್ಲಿ ಮಗ್ನರಾಗಿದ್ದಾಳೆ. ಈ ವಿಡಿಯೊ ನೋಡಿದ ಅನೇಕರು ಮಹಿಳೆಯ ಬೇಜವ್ದಾರಿ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ.

ಮಗು ಅಪಾಯಕಾರಿ ಪ್ರದೇಶವಾದ ಸೇತುವೆ ಹತ್ತಿರ ತಲುಪಲು ಮುಂದಾಗುತ್ತಿದೆ. ಆದರೆ ಹತ್ತಿರದ ವ್ಯಕ್ತಿಯೊಬ್ಬರು ಪರಿಸ್ಥಿತಿಯನ್ನು ಗಮನಿಸುತ್ತಾರೆ. ಆತ ಕೂಡಲೇ ಮಗುವಿನ ಕಡೆಗೆ ಧಾವಿಸಿದ್ದು ಮಗುವನ್ನು ಎತ್ತಿಕೊಂಡು ಅಂಚಿನಿಂದ ದೂರ ಕರೆ‌ದೊಯ್ಯುತ್ತಾರೆ. ಆದರೆ ಮಗುವಿನ ತಾಯಿ ಮಾತ್ರ ವಿಡಿಯೋ ಮಾಡಿ ಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದಾರೆ.

ವಿಡಿಯೋ ನೋಡಿ:



ವೈರಲ್ ಆದ ವೀಡಿಯೊದಲ್ಲಿ, ಮಹಿಳೆ ತನ್ನನ್ನು ತಾನು ರೆಕಾರ್ಡ್ ಮಾಡಿಕೊಳ್ಳುತ್ತ ರೀಲ್ಸ್ ನಲ್ಲಿ ಮುಳುಗಿಹೋಗಿದ್ದಾಳೆ., ತನ್ನ ಹಿಂದೆ ಏನು ನಡೆಯುತ್ತಿದೆ, ಮಗು ಏಲ್ಲಿದೆ ಎನ್ನುವ ಗೋಜಿನಲ್ಲೇ ಇಲ್ಲ, ಮಗು ಸೇತುವೆ ಅಂಚಿನ ಕಡೆಗೆ ತೆವಳುತ್ತಾ ಮುಂದೆ ಸಾಗಿದೆ. ಅಷ್ಟರಲ್ಲೇ ಸಮಯಪ್ರಜ್ಞೆ ಮೆರೆದ ವ್ಯಕ್ತಿಯೊಬ್ಬರು, ತಕ್ಷಣವೇ ಓಡಿಬಂದು ಮಗುವನ್ನು ಎತ್ತಿಕೊಂಡು ಸುರಕ್ಷಿತ ಸ್ಥಳದ ಬಳಿ ಕೊಂಡೊಯ್ದಿದ್ದಾರೆ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಅನೇಕ ಪ್ರತಿಕ್ರಿಯೆ ಹುಟ್ಟು ಹಾಕಿದೆ. ಹಲವಾರು ಬಳಕೆದಾರರು ತಾಯಿಯ ನಡವಳಿಕೆ ವಿರುದ್ಧ ಕಿಡಿಕಾರಿದ್ದಾರೆ.

Viral Video: ಛೇ ಎಂತಾ ಅಮಾನವೀಯ ಕೃತ್ಯ: ಭಾರಿ ತೂಕದ ಪಾರ್ಸೆಲ್ ಹೊತ್ತು ಹೈರಾಣಾದ ಡೆಲಿವರಿ ಬಾಯ್!

ದೈನಂದಿನ ಜೀವನದಲ್ಲಿ ಮೊಬೈಲ್ ರೀಲ್‌ಗಳ ಪ್ರಭಾವ ಹೆಚ್ಚುತ್ತಿದ್ದು ಸಾರ್ವಜನಿಕ ಸ್ಥಳಗಳಲ್ಲಿ, ವಿಶೇಷವಾಗಿ ಸೇತುವೆಗಳು, ರಸ್ತೆಗಳು, ಬಾಲ್ಕನಿಗಳ ಹತ್ತಿರ ಮಕ್ಕಳನ್ನು ಒಬ್ಬಂಟಿಯಾಗಿ ಬಿಡುವ ಮುನ್ನ ಯೋಚಿಸಬೇಕು ಎಂದು ಹಲವಾರು ಮಂದಿ ಕಳವಳ ವ್ಯಕ್ತಪಡಿಸಿದ್ದಾರೆ. ಬಳಕೆದಾರ ರೊಬ್ಬರು ಒಂದು ರೀಲ್ಸ್‌ಗಾಗಿ, ಲೈಕ್ಸ್-ಕಾಮೆಂಟ್‌ಗಳಿಗಾಗಿ ಮಗುವಿನ ಪ್ರಾಣದ ಜೊತೆ ಆಟವಾಡ ಬೇಡಿ ಎಂದರು. ಆದರೆ ಈ ಘಟನೆ ನಡೆದ ಸ್ಥಳ ಮತ್ತು ದಿನಾಂಕ ಸ್ಪಷ್ಟವಾಗಿಲ್ಲ.