ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪತ್ನಿ ವಸ್ತುವಿನ ಬೆಲೆ ಕೇಳುತ್ತಿದ್ದಂತೆ ಪತಿ ತಕ್ಷಣವೇ ಪರ್ಸ್ ಕೈಗೆತ್ತಿಕೊಂಡರು: ದಕ್ಷಿಣ ಕೊರಿಯಾ ಅಧ್ಯಕ್ಷರ ನಡೆಗೆ ನೆಟ್ಟಿಗರು ಫಿದಾ!

Viral Video: ದಕ್ಷಿಣ ಕೊರಿಯಾದ ಅಧ್ಯಕ್ಷ ಲೀ ಜೇ-ಮ್ಯುಂಗ್ ಅವರ ನಡೆಯೊಂದು ಎಲ್ಲರ ಹೃದಯ ಗೆದ್ದಿದ್ದು ದಂಪತಿಗಳ ನಡುವಿನ ಬಂಧ ಹೀಗಿರಬೇಕೆಂದು ನೆಟ್ಟಿಗರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅಧ್ಯಕ್ಷ ಲೀ ಜೇ-ಮ್ಯುಂಗ್ ಮತ್ತು ಪತ್ನಿ ಕಿಮ್ ಹ್ಯೆ-ಕ್ಯುಂಗ್ ಮಾರುಕಟ್ಟೆಯೊಂದಕ್ಕೆ ಭೇಟಿ ನೀಡಿದ್ದರು. ಆದರೆ ಪತ್ನಿಯೂ ಅಂಗಡಿ ಮಾಲೀಕನ ಬಳಿ ಯಾವುದೇ ವಸ್ತುವಿನ ಬೆಲೆಯೊಂದು ವಿಚಾರಿಸುತ್ತಿದ್ದಾಗ ಅವರ ಮಾತು ಮುಗಿಯುವ ಮುನ್ನವೇ ಅಧ್ಯಕ್ಷ ಲೀ ಜೇ-ಮ್ಯುಂಗ್ ಅವರು  ತಮ್ಮ ಜೇಬಿನಿಂದ ಹಣದ ಪರ್ಸ್ ತೆಗೆದು ಹಣ ಪಾವತಿಸಲು ಮುಂದಾಗಿದ್ದಾರೆ.

ದಕ್ಷಿಣ ಕೊರಿಯಾ ಅಧ್ಯಕ್ಷ ಲೀ ಜೇ-ಮ್ಯುಂಗ್ ನಡೆಗೆ ನೆಟ್ಟಿಗರು ಫಿದಾ

ದಕ್ಷಿಣ ಕೊರಿಯಾ,ಜು.5: ಪತಿ- ಪತ್ನಿ ಸಾಮರಸ್ಯ ಸಾರುವ ವಿಡಿಯೊವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ (Viral News) ಆಗುತ್ತಿದೆ. ದಕ್ಷಿಣ ಕೊರಿಯಾದ ಅಧ್ಯಕ್ಷ ಲೀ ಜೇ-ಮ್ಯುಂಗ್ ಅವರ ನಡೆಯೊಂದು ಎಲ್ಲರ ಹೃದಯ ಗೆದ್ದಿದ್ದು ದಂಪತಿಗಳ ನಡುವಿನ ಬಂಧ ಹೀಗಿರಬೇಕೆಂದು ನೆಟ್ಟಿಗರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅಧ್ಯಕ್ಷ ಲೀ ಜೇ-ಮ್ಯುಂಗ್ ಮತ್ತು ಪತ್ನಿ ಕಿಮ್ ಹ್ಯೆ-ಕ್ಯುಂಗ್ ಮಾರುಕಟ್ಟೆಯೊಂದಕ್ಕೆ ಭೇಟಿ ನೀಡಿದ್ದರು. ಆದರೆ ಪತ್ನಿಯೂ ಅಂಗಡಿ ಮಾಲೀಕನ ಬಳಿ ಯಾವುದೇ ವಸ್ತುವಿನ ಬೆಲೆಯೊಂದು ವಿಚಾರಿಸುತ್ತಿದ್ದಾಗ ಅವರ ಮಾತು ಮುಗಿಯುವ ಮುನ್ನವೇ ಅಧ್ಯಕ್ಷ ಲೀ ಜೇ-ಮ್ಯುಂಗ್ ಅವರು  ತಮ್ಮ ಜೇಬಿನಿಂದ ಹಣದ ಪರ್ಸ್ ತೆಗೆದು ಹಣ ಪಾವತಿಸಲು ಮುಂದಾಗಿದ್ದಾರೆ.

ದಕ್ಷಿಣ ಕೊರಿಯಾದ ಅಧ್ಯಕ್ಷ ಲೀ ಜೇ-ಮ್ಯುಂಗ್ ಮತ್ತು ಪತ್ನಿ ಕಿಮ್ ಹೈ-ಕ್ಯುಂಗ್ ಅವರನ್ನು ಒಳಗೊಂಡ ಈ  ಹೃದಯಸ್ಪರ್ಶಿ ಕ್ಷಣವು ಇಂಟರ್ನೆಟ್‌ನ ಗಮನ ಸೆಳೆದಿದೆ. ವೈರಲ್ ಆದ ವೀಡಿಯೊದಲ್ಲಿ ಕಿಮ್ ಹೈ-ಕ್ಯುಂಗ್ ರಸ್ತೆಬದಿಯ ಅಂಗಡಿಯಲ್ಲಿ ನಿಂತು ಮಾರಾಟ ಗಾರರೊಬ್ಬರ ಬಳಿ ವಸ್ತುವಿನ ಬೆಲೆಯ ಬಗ್ಗೆ ಕೇಳುತ್ತಿರುವುದನ್ನು ತೋರಿಸಲಾಗಿದೆ. ಆದರೆ ಸಂಭಾಷಣೆ ಮುಗಿ ಯುವ ಮೊದಲೇ, ಪತ್ನಿ ಹಣ ಕೇಳುವ ಮುನ್ನವೆ ಅಧ್ಯಕ್ಷ ಲೀ ಜೇ-ಮ್ಯುಂಗ್  ಸಹಜವಾಗಿಯೇ ತನ್ನ ಜೇಬಿಗೆ ಕೈ ಹಾಕಿ ತನ್ನ ಪರ್ಸ್  ಹೊರತೆಗೆದು ಹಣ ಪಾವತಿಸಲು ಮುಂದಾಗಿದ್ದಾರೆ‌.

ವಿಡಿಯೋ ನೋಡಿ:



ಈ ದೃಶ್ಯ ಕೆಲವೇ ಸೆಕೆಂಡುಗಳವರೆಗೆ ಇದ್ದರೂ ಇವರಿಬ್ಬರ ಬಾಂಧವ್ಯವನ್ನು ಬಿಂಬಿಸುವಂತಿತ್ತು. ಗಣ್ಯ ವ್ಯಕ್ತಿಯಾದರೂ ಪತ್ನಿಗೆ ನೀಡುವ ಗೌರವ, ಕಾಳಜಿ ಎದ್ದು ತೋರುತ್ತಿತ್ತು. ಅಧ್ಯಕ್ಷರ ಸ್ವಾಭಾವಿಕ ಈ ನೋಟವನ್ನು ದಂಪತಿಗಳ ದೈನಂದಿನ ಸಂಬಂಧದ ಒಂದು ಭಾಗವಾಗಿದೆ. ಇದು ರಾಜಕೀಯವಾಗಿ ಮಾಡಿದ ಪ್ರದರ್ಶನದಂತೆ ಕಾಣದೆ, ಸಾಮಾನ್ಯ ಪತಿ-ಪತ್ನಿಯರ ನಡುವಿನ ದೈನಂದಿನ ಒಡನಾಟದಂತಿದೆ ಎಂದು ನೆಟ್ಟಿಗರು ಮೆಚ್ಚುಗೆ ನೀಡಿದ್ದಾರೆ.

Viral video: ಉಚಿತ ಪ್ರಯಾಣ ನಿರಾಕರಿಸಿದ ಆಟೋ ಚಾಲಕನನ್ನು ನಿಂದಿಸಿದ ಹೋಮ್ ಗಾರ್ಡ್ ಸಿಬ್ಬಂದಿ ಅಮಾನತು

ಇಬ್ಬರು ವ್ಯಾಪಾರಿಗಳೊಂದಿಗೆ ಸಂವಹನ ನಡೆಸಿದ್ದು ಕೆಲವು ಸಾಂಪ್ರದಾಯಿಕ ಕೊರಿಯನ್ ತಿಂಡಿಗಳನ್ನು ಸವಿದರು. ವರದಿಗಳ ಪ್ರಕಾರ ಅವರು ಬಕ್‌ವೀಟ್ ಚಿಪ್ಸ್, ಪಫ್ಡ್ ರೈಸ್, ಬೇಬಿ ಆಕ್ಟೋಪಸ್, ಒಣಗಿದ ಸ್ಕ್ವಿಡ್, ಬ್ರೆಡ್ ಸ್ಟಿಕ್‌ಗಳು, ಡೋನಟ್ಸ್, ಸೇರಿದಂತೆ ಹಲವಾರು ತಿಂಡಿ ಸ್ನಾಕ್ಸ್ ಖರೀದಿ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಈ ಕ್ಲಿಪ್ ಪ್ರಪಂಚದಾದ್ಯಂತ ಲಕ್ಷಾಂತರ ಜನರ ಗಮನ ಸೆಳೆದಿದೆ. ಅಧ್ಯಕ್ಷರ ಈ ನಡೆ ಸಹಜ ಮತ್ತು ಪ್ರೀತಿಯದ್ದು ಎಂದು ಹಲವರು ಬಣ್ಣಿಸಿದರು. ಬಳಕೆದಾರ ರೊಬ್ಬರು ದಂಪತಿಗಳು ಹೇಗಿರಬೇಕೆಂದು ಇವರ ಈ ದೃಶ್ಯ ಸಾಕ್ಷಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.