ಮುಂಬೈ, ಜ. 5: ನಮ್ಮ ದೇಹವು ಆರೋಗ್ಯಯುತವಾಗಿ ಇರಬೇಕೆಂದರೆ ವಿಟಮಿನ್ ಯುಕ್ತ ಆಹಾರ, ಕಾಳುಗಳು, ಹಸಿ ತರಕಾರಿ , ಹಣ್ಣು ಸೇವಿಸಬೇಕು. ಹೀಗಾಗಿ ಅನೇಕ ಜನರು ತಮ್ಮ ನಿತ್ಯದ ಆಹಾರದ ಜೊತೆಗೆ ಹಣ್ಣು, ಹಸಿ (Viral Video) ತರಕಾರಿಗಳನ್ನು ಕೂಡ ಸೇವಿಸುತ್ತಾರೆ. ಟೊಮೆಟೊ, ಮುಳ್ಳು ಸೌತೆ, ಕ್ಯಾರೆಟ್, ಬ್ರಿಟ್ರೋಟ್ ಅನ್ನು ಸಲಾಡ್ ರೀತಿಯಲ್ಲಿ ತಿನ್ನುವುದನ್ನು ನಾವು ಕಂಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ಹಸಿ ಬದನೆಕಾಯಿ , ಕ್ಯಾಬೇಜ್, ಹಸಿ ಶುಂಠಿಯನ್ನು ಸೇವಿಸಿದ್ದ ಘಟನೆ ಮುಂಬೈ ಲೋಕಲ್ ರೈಲಿನಲ್ಲಿ ನಡೆದಿದೆ. ರೈಲಿನಲ್ಲಿ ಕುಳಿತುಕೊಂಡು ಈ ತರಕಾರಿಗಳನ್ನು ಆತ ಸೇವಿಸುತ್ತಿದ್ದರೆ ಉಳಿದವರು ಆತನನ್ನು ಅಚ್ಚರಿಯಿಂದ ಕಂಡಿದ್ದು ಸದ್ಯ ಈ ಕುರಿತಾದ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗಿದೆ. ವಿಡಿಯೋವನ್ನು ಮನೋರಂಜನೆಯ ಉದ್ದೇಶಕ್ಕಾಗಿ ಮಾಡಲಾಗಿದ್ದು ಈ ತಮಾಷೆಯ ವಿಡಿಯೋದಲ್ಲಿ ಸಹ ಪ್ರಯಾಣಿಕರ ಎಕ್ಸ್ಪ್ರೇಶನ್ ತುಂಬಾ ಫನ್ನಿಯಾಗಿದೆ.
ಸೋಶಿಯಲ್ ಮಿಡಿಯಾ ವ್ಲಾಗರ್ ಪ್ರಣಯ್ ಜೋಶಿ ಎನ್ನುವವರು ಈ ವಿಡಿಯೋವನ್ನು ಮಾಡಿದ್ದಾರೆ. ಮುಂಬೈನ ಲೋಕಲ್ ರೈಲುಗಳಲ್ಲಿ ವಿಚಿತ್ರ, ಅನಿರೀಕ್ಷಿತ ಘಟನೆ ಬಗ್ಗೆ ವೀಡಿಯೊ ಮಾಡುತ್ತಿದ್ದ ಇವರು ಸೋಶಿಯಲ್ ಮಿಡಿಯಾದಲ್ಲಿ ಅಧಿಕ ಸಂಖ್ಯೆಯ ಫಾಲೋವರ್ಸ್ ಅನ್ನು ಕೂಡ ಹೊಂದಿದ್ದಾರೆ. ಅಂತೆಯೇ ಈ ಬಾರಿ ವೈರಲ್ ಆದ ವಿಡಿಯೋದಲ್ಲಿ ಪ್ರಣಯ್ ಅವರು ಚಲಿಸುತ್ತಿದ್ದ ಲೋಕಲ್ ರೈಲಿನಲ್ಲಿ ಪ್ರಯಾಣಿಸುವಾಗ ವಿಭಿನ್ನ ಕಾಂಬಿನೇಶನ್ ಆಹಾರಗಳನ್ನು ಸೇವಿಸಿದ್ದನ್ನು ಕಾಣಬಹುದು.
ವಿಡಿಯೋ ನೋಡಿ:
ವೈರಲ್ ಆದ ವಿಡಿಯೋದಲ್ಲಿ ಆತನು, ಟೊಮೆಟೊ ಕೆಚಪ್ ಜೊತೆ ಹಸಿ ಶುಂಠಿ ಸೇರಿಸಿ ಜಗಿದು ತಿಂದಿದ್ದಾನೆ. ಬಳಿಕ ಬಿಸಿ ಬಿಸಿ ಚಹಾಕ್ಕೆ ಬಾಳೆಹಣ್ಣು ಅದ್ದಿ ತಿಂದಿದ್ದಾನೆ. ಹಸಿ ಎಲೆ ಕೋಸು (ಕ್ಯಾಬೇಜ್) ಮತ್ತು ಹಸಿ ಬದನೆಕಾಯಿ ಸೇವಿಸಿದ್ದಾನೆ. ಇಂತಹ ವಿಭಿನ್ನ ಕಾಂಬಿನೇಶನ್ ಅನ್ನು ಆತ ತಿನ್ನುವುದನ್ನು ಕಂಡು ರೈಲಿನಲ್ಲಿದ್ದ ಸಹ ಪ್ರಯಾಣಿಕರು ಆಘಾತಗೊಂಡು ಆತನನ್ನೇ ವಿಚಿತ್ರ ರೀತಿಯಲ್ಲಿ ಕಂಡಿದ್ದಾರೆ. ಇನ್‌ಸ್ಟಾಗ್ರಾಮ್ ಈ ರೀಲ್ 33 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದಿದ್ದು ಆನ್‌ಲೈನ್‌ನಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.
ಪ್ರಣಯ್ ಜೋಶಿ ಹಂಚಿಕೊಂಡಿದ್ದ ಅದೇ ವಿಡಿಯೋದಲ್ಲಿ ಅವರು ಹಸಿ ಶುಂಠಿಯ ಮೇಲೆ ಟೊಮೆಟೊ ಕೆಚಪ್ ಸೇರಿಸಿ ರುಚಿಕರವಾಗಿದೆ ಎಂಬಂತೆ ಅಗಿಯುತ್ತಿದ್ದು ವಾಹ್, ಸೂಪರ್ ಆಗಿದೆ. ನಿಮಗೆ ಬೇಕಾ ಎಂದು ಸಹ ಪ್ರಯಾಣಿಕರೊಬ್ಬರ ಬಳಿಗೆ ಕೇಳಿದ್ದಾರೆ. ಅದಕ್ಕೆ ಸಹ ಪ್ರಯಾಣಿಕ ತಬ್ಬಿಬ್ಬಾಗಿದ್ದನ್ನು ವಿಡಿಯೋದಲ್ಲಿ ಕಾಣಬಹುದು. ಒಬ್ಬ ಪ್ರಯಾಣಿಕನು ತಾನು ಟೊಮೆಟೊ ಮಾತ್ರ ಈ ರೀತಿ ಹಸಿಯಾಗಿ ಸೇವನೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಇನ್ನೊಬ್ಬ ಪ್ರಯಾಣಿಕನು ವ್ಲಾಗರ್ ಬಳಿ ನೀವು ಹಸಿ ಬದನೆಕಾಯಿಯನ್ನು ಏಕೆ ತಿನ್ನುತ್ತಿದ್ದೀರಿ ಎಂದು ನೇರವಾಗಿ ಕೇಳಿದ್ದಾರೆ. ಕೆಲವು ಪ್ರಯಾಣಿಕರು ಒಬ್ಬರನ್ನೊಬ್ಬರು ನೋಡಿಕೊಂಡು ವ್ಲಾಗರ್ ತಿನ್ನುವ ದೃಶ್ಯಗಳನ್ನು ಕಂಡು ನಗುತ್ತಿದ್ದರೆ ಇನ್ನು ಕೆಲವರು ಅದು ನಿಜಕ್ಕು ರುಚಿ ಇರಬಹುದೆ ಎಂದು ಕುತೂಹಲದಿಂದ ವೀಕ್ಷಿಸುತ್ತಿದ್ದ ದೃಶ್ಯವನ್ನು ಕಾಣಬಹುದು. ಪ್ರಯಾಣಿಕರ ಪ್ರತಿಕ್ರಿಯೆಗಳು ವೀಡಿಯೊದ ಹೈಲೈಟ್ ಆಗಿವೆ.
ವೈರಲ್ ಆದ ವಿಡಿಯೋ ಬಗ್ಗೆ ನೆಟ್ಟಿಗರು ನಾನಾತರನಾಗಿ ಕಾಮೆಂಟ್ ಮಾಡಿದ್ದಾರೆ. ಚಹಾದಲ್ಲಿ ಬಾಳೆಹಣ್ಣು ಅದ್ದಿ ಸೇವಿಸುವುದು ವಿಚಿತ್ರವಲ್ಲ. ಅದನ್ನು ನಮ್ಮ ಹಿರಿಯರು ಕೂಡ ಮಾಡುತ್ತಿದ್ದರು. ಇನ್ನು ಎಲೆ ಕೋಸುಗಳನ್ನು ಸಲಾಡ್ ರೀತಿಯಲ್ಲಿ ಅನೇಕ ಜನರು ಸೇವಿಸುತ್ತಾರೆ. ಆದರೆ ಬದನೆ ಕಾಯಿ ಮತ್ತು ಶುಂಠಿ ಸೇವಿಸುವುದು ಕಡಿಮೆ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿ ದ್ದಾರೆ. ವ್ಲಾಗರ್ ಈ ಹಸಿ ತರಕಾರಿ ಸೇವನೆ ನೋಡಲು ಫನ್ನಿ ಆಗಿದೆ. ಅಂತೆಯೇ ಕ್ಯಾಬೇಜ್, ಬದನೆಕಾಯಿ ಹಸಿಯಾಗಿ ಸೇವಿಸುದರಿಂದಲೂ ಅನೇಕ ಆರೋಗ್ಯ ಪ್ರಯೋಜನೆ ಸಿಗಲಿದೆ ಎಂದು ಮತ್ತೊಬ್ಬ ಬಳಕೆದಾರರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.