ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮದುವೆಯಾಗುವ ಕನ್ಯೆಗಾಗಿ ವ್ಯಕ್ತಿಯ ವಿಚಿತ್ರ ಷರತ್ತು ಕೇಳಿದ್ರೆ ಶಾಕ್‌ ಆಗ್ತೀರಾ! ಈತನ ನಿರೀಕ್ಷೆ ಕಂಡು ಕಾಲೆಳೆದ ನೆಟ್ಟಿಗರು!

Viral News: ಇಲ್ಲೊಬ್ಬ ಆದರ್ಶ ಪತ್ನಿಯ ಬಗ್ಗೆ ವಿಚಿತ್ರ ಷರತ್ತುವೊಂದನ್ನು ಸೋಷಿಯಲ್ ಮೀಡಿಯಾ ದಲ್ಲಿ ಶೇರ್ ಮಾಡಿಕೊಂಡಿದ್ದಾನೆ. ತಾನು ಮದುವೆಯಾಗುವ ಹುಡುಗಿಗೆ ಇಂತಹ ಗುಣಗಳಿದ್ದರೆ ಮಾತ್ರ ಮದುವೆ ಯಾಗುತ್ತೆನೆಂದು ಹೇಳಿಕೊಂಡಿದ್ದು ಯುವಕನ ಷರತ್ತು ಕಂಡು ನೆಟ್ಟಿಗರು ಟ್ರೋಲ್ ಮಾಡು ತ್ತಿದ್ದಾರೆ. ಇಂದಿನ ಆಧುನಿಕ ಯುಗದಲ್ಲಿ ಇಂತಹ ಹುಡುಗಿ ಸಿಗುವ ಕನಸು ಕಾಣಬೇಡ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.

ಇಂಟರ್ ನೆಟ್ ಚಿತ್ರ

ನವದೆಹಲಿ, ಆ.4: ಮದುವೆಯಾಗಲು ವಧು ಸಿಗುತ್ತಿಲ್ಲ ಎಂದು ಚಿಂತಿಸುವ ಅನೇಕ ಯುವಕರಿದ್ದಾರೆ. ಈ ನಡುವೆ ಇಲ್ಲೊಬ್ಬ ಆದರ್ಶ ಪತ್ನಿಯ ಬಗ್ಗೆ ವಿಚಿತ್ರ ಷರತ್ತುವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ (Viral News) ಮಾಡಿಕೊಂಡಿದ್ದಾನೆ. ತಾನು ಮದುವೆಯಾಗುವ ಹುಡುಗಿಗೆ ಇಂತಹ ಗುಣಗಳಿದ್ದರೆ ಮಾತ್ರ ಮದುವೆಯಾಗುತ್ತೆನೆಂದು ಹೇಳಿಕೊಂಡಿದ್ದು ಯುವಕನ ಷರತ್ತು ಕಂಡು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಇಂದಿನ ಆಧುನಿಕ ಯುಗದ ಲ್ಲಿ ಇಂತಹ ಹುಡುಗಿ ಸಿಗುವ ಕನಸು ಕಾಣಬೇಡ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.

ವೈರಲ್ ಪೋಸ್ಟ್ ಪ್ರಕಾರ, ಯುವಕನು ತಮ್ಮ ಪಟ್ಟಿಯಲ್ಲಿನ ಪ್ರತಿಯೊಂದು ಅವಶ್ಯಕತೆಗಳನ್ನು ಪೂರೈಸುವ ಮಹಿಳೆಯನ್ನು ಮಾತ್ರ ಮದುವೆಯಾಗುವುದಾಗಿ ಹೇಳಿದ್ದಾನೆ. ಈ ಪಟ್ಟಿಯಲ್ಲಿ ಯುವತಿಯ ನೋಟ, ಜೀವನಶೈಲಿ, ವೈಯಕ್ತಿಕ ಆಯ್ಕೆಗಳು ಮತ್ತು ನಡವಳಿಕೆಗೆ ಸಂಬಂಧಿಸಿದ ನಿರೀಕ್ಷೆಗಳನ್ನು ಬರೆದುಕೊಂಡಿದ್ದಾನೆ.



ಕಡ್ಡಾಯವಾಗಿ ಕನ್ಯೆಯೂ ನೈಸರ್ಗಿಕವಾಗಿ ಸುಂದರಿರಬೇಕು, ಎಂದಿಗೂ ಮೇಕಪ್ ಮಾಡಬಾರದು, ಹಾಗೂ 5. 2 ಪರಿಪೂರ್ಣ ಎತ್ತರ, 45 ಕೆಜಿ ನಿಖರವಾದ ತೂಕ ಹೊಂದಿರಬೇಕು. ಎಲ್ಲಾ ಪಾಕಪದ್ಧತಿಗಳ ಅಡುಗೆ ತಿಳಿದಿರುವ, ಸೋಷಿಯಲ್ ಮೀಡಿಯಾ ಬಳಸದ ಯುವತಿಯಾಗಬೇಕೆಂದು ಬರೆದಿದ್ದಾನೆ. ಅಷ್ಟೇ ಅಲ್ಲದೆ ಯುವತಿಗೆ ಯಾವುದೇ ಗಂಡು ಸ್ನೇಹಿತರಿರಬಾರದು, ಹೊರಗೆ ಹೋಗುವ ಮುನ್ನ ತನ್ನ ಅನುಮತಿ ಕೇಳಬೇಕು ಮತ್ತು ತನ್ನ ಲೈವ್ ಲೊಕೇಶನ್ ಅನ್ನು 24/7 ಶೇರ್ ಮಾಡಿಕೊಳ್ಳಬೇಕು ಅಂದಿದ್ದಾನೆ. ಗಂಡನ ಹೆತ್ತವರನ್ನು ಸ್ವಂತ ಹೆತ್ತವರಂತೆ ನೋಡಿಕೊಳ್ಳಬೇಕು ಎನ್ನುವ ಷರತ್ತನ್ನು ತಿಳಿಸಿದ್ದಾನೆ.

Viral Video: "ಅತ್ಯಂತ ಮುರ್ಖತನದ ನಿರ್ಧಾರ"; 1.9 ಕೋಟಿ ರುಪಾಯಿಯ ಮೈಕ್ರೋಸಾಫ್ಟ್ ಉದ್ಯೋಗ ತ್ಯಜಿಸಿ ಅವಲತ್ತುಕೊಂಡ ಯುವಕ

ಈ ಪೋಸ್ಟ್ ನೋಡಿದ ಬಳಕೆದಾರರು ಯುವಕನ ಮನಸ್ಥಿತಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಯಾವುದೇ ಹುಡುಗಿ ನಿಮ್ಮಂತಹ ನಿಯಂತ್ರಣ ಹೊಂದಿರುವ, ಸ್ತ್ರೀದ್ವೇಷಿ ಮತ್ತು ಕಟ್ಟುನಿಟ್ಟಿನ ಪುರುಷನನ್ನು ಬಯಸುವುದಿಲ್ಲ ಎಂದು ಕಿಡಿಕಾರಿದ್ದಾರೆ. ಅವರ ಲೋಕೇಶನ್ ಹುಡುಕುವುದು, ಸ್ವತಂತ್ರ ನೀಡದೆ ಇರುವುದು‌, ಪ್ರತಿಯೊಂದಕ್ಕು ಅನುಮತಿ ಕೇಳುವುದು ಇಂದು ಆಕೆಗೆ ಬಂಧನ, ಪ್ರೀತಿಯಲ್ಲ ಎಂದು ಆತನನ್ನು ಟೀಕಿಸಿದ್ದಾರೆ.

ಬಳಕೆದಾರರೊಬ್ಬರು "ನಿಮಗೆ ಹೆಂಡತಿಗಿಂತ ಹೆಚ್ಚಾಗಿ ಮನೆ ಕೆಲಸ ಮಾಡುವ ಆಳೊಬ್ಬಳು ಬೇಕಾಗಿದ್ದಾಳೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇಂತಹ ಹುಡುಗಿ ಈ ಭೂಮಿಯ ಮೇಲೆ ಸಿಗಲು ಸಾಧ್ಯವಿಲ್ಲ, ನೀವು ಮದುವೆಯ ಕನಸು ಬಿಟ್ಟುಬಿಡಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.