ನವದೆಹಲಿ: ರೈಲಿನ ಶೌಚಾಲಯದಲ್ಲಿ (Train Toilet) ವ್ಯಕ್ತಿಯೊಬ್ಬ ಹೊರಗೆ ಬಂದು ಸೆಕೆಂಡುಗಳ ನಂತರ ಯುವತಿ ಹೊರಬರುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ಶೌಚಾಲಯದೊಳಗಿನಿಂದ ಯುವಕ ಹೊರಬಂದ ನಂತರ ಯುವತಿ ಹೊರಬಂದಿದ್ದಾಳೆ. ಈ ವಿಡಿಯೊ ಇದೀಗ ಭಾರಿ ಆಕ್ರೋಶ ಹಾಗೂ ಹಾಸ್ಯವನ್ನು ಹುಟ್ಟುಹಾಕಿದೆ. ಆದರೆ, ಈ ವಿಡಿಯೊದ(Viral Video) ಸತ್ಯಾಸತ್ಯತೆಯನ್ನು ದೃಢೀಕರಿಸಲಾಗಿಲ್ಲ.
ವಿಡಿಯೊದ ನಿಖರವಾದ ಸ್ಥಳ, ದಿನಾಂಕ ಮತ್ತು ಸಮಯ ಇನ್ನೂ ಖಚಿತವಾಗಿಲ್ಲ. ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೊ ಭಾರಿ ವೈರಲ್ ಆಗಿದೆ. ವಿಡಿಯೊದಲ್ಲಿ ಮಾಸ್ಕ್ ಧರಿಸಿದ ವ್ಯಕ್ತಿಯೊಬ್ಬ ಶೌಚಾಲಯದಿಂದ ಹೊರಬಂದಿದ್ದಾನೆ. ನಂತರ ಬಾಗಿಲು ಮುಚ್ಚುತ್ತದೆ. ಕೆಲವೇ ಸೆಕೆಂಡುಗಳಲ್ಲಿ ಯುವಕ ಹೊರಬಂದ ಶೌಚಾಲಯದಿಂದ ಯುವತಿ ಹೊರಬಂದಿದ್ದಾಳೆ. ಯುವತಿಯು ಕೋಚ್‍ನ ಶೌಚಾಲಯದ ಬಾಗಿಲಿನಂದ ಹೊರಬರುತ್ತಿರುವಲ್ಲಿಗೆ ವಿಡಿಯೊ ಮುಗಿಯುತ್ತದೆ. ಪ್ರಯಾಣಿಕರೊಬ್ಬರು ರಹಸ್ಯವಾಗಿ ಈ ದೃಶ್ಯವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೊ ವೀಕ್ಷಿಸಿ:
ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಆಕ್ರೋಶ ಮತ್ತು ಹಾಸ್ಯ ಎರಡನ್ನೂ ಹುಟ್ಟುಹಾಕಿದೆ. ಕೆಲವು ಬಳಕೆದಾರರು ನೈತಿಕತೆ ಮತ್ತು ಸಾರ್ವಜನಿಕ ನಡವಳಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರೆ, ಇತರರು ಮೀಮ್ಸ್ ಮತ್ತು ಜೋಕ್‌ಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ. ಇದಕ್ಕಿಂತ ನಾಚಿಕೆಗೇಡು ಮತ್ತೊಂದಿಲ್ಲ ಎಂದು ಕೆಲವರು ಪ್ರತಿಕ್ರಿಯಿಸಿದ್ದರೆ, ಇನ್ನು ಕೆಲವರು ವೈಲ್ಡ್ ಕಾರ್ಡ್ ಎಂಟ್ರಿ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಭಾರತೀಯ ರೈಲ್ವೆ ಈಗ OYO ಹೋಟೆಲ್‌ಗಳಾಗಿ ಮಾರ್ಪಟ್ಟಿದೆ ಎಂದು ಕೆಲವರು ತಮಾಷೆ ಮಾಡಿದ್ದಾರೆ.
ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವಿಡಿಯೊ ಸ್ಕ್ರಿಪ್ಟೆಡ್ ಆಗಿರಬಹುದು ಎಂದು ಹೇಳಿದ್ದಾರೆ. ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಲೈಕ್ಸ್, ವೀವ್ಸ್ ಪಡೆದುಕೊಳ್ಳಲು ಎಂತಹ ಹಂತಕ್ಕೂ ಹೋಗಬಹುದು ಎಂದು ವ್ಯಂಗ್ಯವಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ಝುಯ್ಯನೆ... ಗಾಳಿಯಲ್ಲಿ ತೇಲಿ ಬಂದು ಫುಡ್ ಡೆಲಿವರಿ ಮಾಡ್ತಾರೆ ಇವ್ರು! ವಿಡಿಯೊ ಫುಲ್ ವೈರಲ್