ಬೆಂಗಳೂರು, ಫೆ. 7: ವಾಹನಗಳಲ್ಲಿ ತಮಾಷೆಯ ಸಾಲುಗಳನ್ನು ಬರೆದಿರುವುದನ್ನು ನೀವು ಕಂಡಿರ ಬಹುದು. ಅನೇಕ ಟ್ರಕ್, ಆಟೋ ಮತ್ತು ಬಸ್‌ಗಳಲ್ಲಿ ಬರೆದಿರುವ ಸಾಲುಗಳು ಅರ್ಥಪೂರ್ಣವಾಗಿ ಗಮನ ಸೆಳೆದರೆ ಇನ್ನು ಕೆಲವು ನಗೆಗಡಲಿನಲ್ಲಿ ತೆಲಿಸಿಬಿಡುತ್ತವೆ. ಇದೀಗ ಬೆಂಗಳೂರಿನ ಚಾಲಕರೊಬ್ಬರು ತಮ್ಮ ಆಟೋದ ಹಿಂದೆ ಬರೆದಿರುವ ಸಾಲುಗಳ ಮೂಲಕ ಎಲ್ಲರ ಗಮನ ಸೆಳೆ ದಿದ್ದಾರೆ. ಸದ್ಯ ಈ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral Video) ಆಗುತ್ತಿದೆ.
ಪ್ರೇಮಿಗಳ ದಿನಕ್ಕೆ ಮುಂಚಿತವಾಗಿ, ಪ್ರೇಮಿಗಳ ಬಗ್ಗೆ ಬೆಂಗಳೂರಿನ ಈ ಆಟೋ ಚಾಲಕ ಬರೆದಿರುವ ಸಾಲು ಗಮನ ಸೆಳೆದಿದೆ. ಆಟೋ ಹಿಂಭಾಗದಲ್ಲಿ ಸಂಜಯ್ ದತ್ ಫೋಟೊ ಹಾಕಿ, ಅದರ ಪಕ್ಕದಲ್ಲಿ ಪ್ರೀತಿ ಸುಳ್ಳಲ್ಲ, ಪ್ರೀತಿಸುವವರು ಸುಳ್ಳರು ಎಂದು ಬರೆದುಕೊಂಡಿದ್ದಾರೆ.
ವಿಡಿಯೊ ನೋಡಿ:
ಈ ಬರಹ ಆನ್‌ಲೈನ್‌ನಲ್ಲಿ ಗಮನ ಸೆಳೆದಿದ್ದು ನೆಟ್ಟಿಗರು ನಗುವ ಎಮೋಜಿಗಳೊಂದಿಗೆ ಕಮೆಂಟ್ ಮಾಡಿದ್ದಾರೆ. ಈ ಫೋಟೋ ಇನ್‌ಸ್ಟಾಗ್ರಾಮ್‌ನಲ್ಲಿ ಭಾರಿ ಸದ್ದು ಮಾಡುತ್ತಿದ್ದು ಒಬ್ಬರು "ಬೆಂಗಳೂರು ಆಟೋಗಳ ವೈಬ್ ಹೀಗೂ ಗಮನ ಸೆಳೆಯುತ್ತದೆʼʼ ಎಂದು ಬರೆದಿದ್ದಾರೆ. ಮತ್ತೊಬ್ಬರು ʼʼಅಣ್ಣಾ ಹೇಳಿದ್ದು ಸರಿ... ನೋಯಿಸಿದರೆ ಮಾತ್ರ ಹೀಗೆ ಪ್ರೀತಿಸಬಹುದುʼʼ ಎಂದಿದ್ದಾರೆ.
ಅಯ್ಯೊಯ್ಯೋ ಹಸಿಯಾಗಿ ಇದೆಲ್ಲಾ ತಿಂತಾರಾ? ರೈಲಿನಲ್ಲಿ ವಿಚಿತ್ರ ಆಹಾರ ಸೇವನೆ ಮಾಡಿದ ವ್ಯಕ್ತಿ!
ಇನ್ನೊಂದು ಆಟೋದಲ್ಲಿ ಕೂಡ ಹೃದಯಸ್ಪರ್ಶಿ ಬರಹ ಗಮನ ಸೆಳೆದಿದೆ. ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದ ಚಾಲಕ ಮಧ್ಯರಾತ್ರಿ ಸಂಚರಿಸುವ ಮಹಿಳಾ ಪ್ರಯಾಣಿಕರ ಭಯ ಹೋಗ ಲಾಡಿಸಲು ಇವರು ತಮ್ಮ ಆಟೋದಲ್ಲಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ʼʼನಾನು ತಂದೆ/ಸಹೋದರ ಕೂಡ... ನಿಮ್ಮ ಸುರಕ್ಷತೆ ಮುಖ್ಯ. ಆರಾಮವಾಗಿ ಕುಳಿತುಕೊಳ್ಳಿ" ಎಂದು ಬರೆದಿದ್ದಾರೆ. ರಾತ್ರಿಯಲ್ಲಿ ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರಿಗೆ ಧೈರ್ಯ ತುಂಬಲು ಚಾಲಕನ ಪ್ರಯತ್ನವನ್ನು ಹೆಚ್ಚಿನವರು ಶ್ಲಾಘಿಸಿದ್ದಾರೆ.