ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಈ ದೇಶಕ್ಕೆ ವಿಮಾನ ನಿಲ್ದಾಣವಿಲ್ಲ, ಸ್ವಂತ ಕರೆನ್ಸಿಯೂ ಇಲ್ಲ; ಆದರೂ, ಇಲ್ಲಿನ ಜನ ಆಗರ್ಭ ಶ್ರೀಮಂತರು!

Richest country: ಸ್ವಿಟ್ಜರ್ಲೆಂಡ್ ಮತ್ತು ಆಸ್ಟ್ರಿಯಾ ನಡುವೆ ಗುಪ್ತ ರತ್ನದಂತೆ ಅಡಗಿರುವ ಈ ದೇಶದಲ್ಲಿ ಸ್ವಂತ ವಿಮಾನ ನಿಲ್ದಾಣವಿಲ್ಲ, ಕರೆನ್ಸಿ ಇಲ್ಲ, ಅಷ್ಟೇ ಅಲ್ಲ ಸ್ವಂತ ಭಾಷೆ ಕೂಡ ಇಲ್ಲ. ಆದರೂ, ಇದು ಭೂಮಿಯ ಮೇಲಿನ ಅತ್ಯಂತ ಶ್ರೀಮಂತ ಮತ್ತು ಸುರಕ್ಷಿತ ದೇಶಗಳಲ್ಲಿ ಒಂದಾಗಿದೆ. ಯುರೋಪಿಯನ್ ವಂಡರ್‌ಲ್ಯಾಂಡ್‌ನ ವಿಡಿಯೊವೊಂದು ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ.

ಸ್ವಿಟ್ಜರ್ಲೆಂಡ್ ಮತ್ತು ಆಸ್ಟ್ರಿಯಾ ನಡುವೆ ಗುಪ್ತ ರತ್ನದಂತೆ ಅಡಗಿರುವ ಈ ದೇಶದಲ್ಲಿ ಸ್ವಂತ ವಿಮಾನ ನಿಲ್ದಾಣವಿಲ್ಲ, ಕರೆನ್ಸಿ ಇಲ್ಲ, ಅಷ್ಟೇ ಅಲ್ಲ ಸ್ವಂತ ಭಾಷೆ ಕೂಡ ಇಲ್ಲ. ಆದರೂ, ಇದು ಭೂಮಿಯ ಮೇಲಿನ ಅತ್ಯಂತ ಶ್ರೀಮಂತ ಮತ್ತು ಸುರಕ್ಷಿತ ದೇಶಗಳಲ್ಲಿ ಒಂದಾಗಿದೆ. ನೈಸರ್ಗಿಕ ಸೌಂದರ್ಯ, ಭವ್ಯವಾದ ಕೋಟೆಗಳು ಮತ್ತು ಕೇವಲ ಏಳು ಜನ ಅಪರಾಧಿಗಳು ಜೈಲಿನಲ್ಲಿದ್ದಾರೆ ಎಂಬಷ್ಟು ಕಡಿಮೆ ಅಪರಾಧ ಪ್ರಮಾಣವಿದೆ. ಲಿಚ್ಟೆನ್‌ಸ್ಟೈನ್‌ ಎಂಬ ಯುರೋಪಿಯನ್ ವಂಡರ್‌ಲ್ಯಾಂಡ್‌ನ ಪೋಸ್ಟ್‌ವೊಂದು ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್(Viral Video) ಆಗಿದೆ.

ಲಿಚ್ಟೆನ್‌ಸ್ಟೈನ್‌ನ ಮಧ್ಯಕಾಲೀನ ಕೋಟೆಗಳು ಮತ್ತು ಹಿಮದಿಂದ ಆವೃತವಾದ ಆಲ್ಪ್ಸ್ ಪರ್ವತಗಳನ್ನು ಹೊಂದಿರುವ ಸುಮಾರು 30,000 ಜನಸಂಖ್ಯೆಯನ್ನು ಹೊಂದಿದೆ. ಲಿಚ್ಟೆನ್‌ಸ್ಟೈನ್ ಬಗ್ಗೆ ಎಂದಾದರೂ ಕೇಳಿದ್ದೀರಾ? ಬಹುಶಃ ಹೆಚ್ಚಿನ ಜನರು ಈ ದೇಶದ ಬಗ್ಗೆ ಕೇಳಿರಲಿಕ್ಕಿಲ್ಲ. ಆದರೆ, ಸ್ವಿಟ್ಜರ್ಲೆಂಡ್ ಮತ್ತು ಆಸ್ಟ್ರಿಯಾ ನಡುವೆ ಇರುವ ಈ ಸಣ್ಣ ರಾಷ್ಟ್ರವು ಅಸಾಧಾರಣವಾಗಿ ವಿಶಿಷ್ಟವಾಗಿದೆ.

ಈ ದೇಶದಲ್ಲಿ ಯಾವುದೇ ವಿಮಾನ ನಿಲ್ದಾಣವಿಲ್ಲ. ಯಾವುದೇ ಕರೆನ್ಸಿ ಇಲ್ಲ. ಇಲ್ಲಿಯವರು ಸ್ವಿಸ್ ಫ್ರಾಂಕ್ ಅನ್ನು ಬಳಸುತ್ತಾರೆ. ತಮ್ಮದೇ ಆದ ಅಧಿಕೃತ ಭಾಷೆಯನ್ನು ಸಹ ಹೊಂದಿಲ್ಲ. ಆದರೂ, ಇದು ಭೂಮಿಯ ಮೇಲಿನ ಅತ್ಯಂತ ಶ್ರೀಮಂತ ಮತ್ತು ಸುರಕ್ಷಿತ ದೇಶಗಳಲ್ಲಿ ಒಂದಾಗಿದೆ. ಅಭಿವೃದ್ಧಿ ಹೊಂದಲು ಗಾತ್ರ ಅಥವಾ ನಿಮ್ಮ ಸ್ವಂತ ನಿಯಮಗಳು ಅಗತ್ಯವಿಲ್ಲ ಎಂಬುದನ್ನು ಲಿಚ್ಟೆನ್‌ಸ್ಟೈನ್ ಸಾಬೀತುಪಡಿಸುತ್ತದೆ.



ಯುರೋಪಿನ ಅತ್ಯಂತ ಶ್ರೀಮಂತ ದೇಶ

ಲಿಚ್ಟೆನ್‌ಸ್ಟೈನ್ ಅತ್ಯಂತ ಸಿರಿವಂತ ದೇಶ. ಬ್ರಿಟನ್ ರಾಜನಿಗಿಂತಲೂ ಶ್ರೀಮಂತ. ಇಲ್ಲಿನ ಸ್ಥಳೀಯರು ಯಾವುದೇ ಕೆಲಸ ಮಾಡದೆ ಜೀವನ ನಡೆಸಲು ಸಾಕಷ್ಟು ಹಣವನ್ನು ಹೊಂದಿದ್ದಾರೆ. ಇಲ್ಲಿ ಅಪರಾಧ ಪ್ರಕರಣ ಕಡಿಮೆಯಿದ್ದರೂ ಸುಮಾರು 100 ಪೊಲೀಸ್ ಅಧಿಕಾರಿಗಳಿದ್ದಾರೆ. ಜನರು ರಾತ್ರಿ ವೇಳೆಯಲ್ಲಿ ತಮ್ಮ ಮನೆಯ ಬಾಗಿಲುಗಳನ್ನು ಲಾಕ್ ಮಾಡಬೇಕು ಎಂಬ ಬಗ್ಗೆ ಚಿಂತಿಸುವುದಿಲ್ಲ.

ಲೀಚ್ಟೆನ್‌ಸ್ಟೈನ್‌ನ ಸೌಂದರ್ಯ ಮತ್ತು ವಿಶಿಷ್ಟ ಜೀವನಶೈಲಿಗೆ ನೆಟ್ಟಿಗರು ಪ್ರಭಾವಿತರಾಗಿದ್ದಾರೆ. ಇದು ಕನಸಿನಂತೆ ಕಾಣುತ್ತದೆ ಎಂದು ಒಬ್ಬ ಬಳಕೆದಾರರು ಹೇಳಿದ್ದಾರೆ. ಪ್ರಪಂಚದಾದ್ಯಂತ ಜೀವನ ಹೀಗಿದ್ದರೆ ಎಷ್ಟು ಚೆನ್ನಾಗಿರುತ್ತದೆ ಎಂದು ಮಗದೊಬ್ಬ ಬಳಕೆದಾರ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Viral Video: ಪಾರಿವಾಳದ ಜೀವ ಉಳಿಸಲು ಈ ಬಾಲಕ ಮಾಡಿದ್ದೇನು ಗೊತ್ತಾ? ಹೃದಯವಿದ್ರಾವಕ ವಿಡಿಯೊ ವೈರಲ್

ತನ್ನ ನಿವೃತ್ತಿ ವೇಳೆ ಈ ದೇಶದಲ್ಲಿರಲು ಇಷ್ಟಪಡಬಹುದು ಎಂದು ತೋರುತ್ತದೆ ಎಂದು ವ್ಯಕ್ತಿಯೊಬ್ಬರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಲೀಚ್ಟೆನ್‌ಸ್ಟೈನ್‌ಗೆ ಭೇಟಿ ನೀಡಿದ ಪ್ರಯಾಣಿಕನೊಬ್ಬ, ತಾನು ಕೆಲವು ವರ್ಷಗಳ ಹಿಂದೆ ಈ ಸ್ಥಳಕ್ಕೆ ಭೇಟಿ ನೀಡಿದ್ದೆ. ಜಿನೀವಾದಿಂದ ಇಲ್ಲಿಗೆ ಕಾರಿನಲ್ಲಿ ಪ್ರಯಾಣಿಸಿದೆವು. ಈ ಸ್ಥಳ ಬಹಳ ಸುಂದರವಾಗಿದೆ ಎಂದು ಬಳಕೆದಾರರೊಬ್ಬರು ತಿಳಿಸಿದ್ದಾರೆ.