ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʼʼಥಾಯ್ಲೆಂಡ್‌ನಲ್ಲಿ ಮಹಿಳೆಯರ ಡ್ರೆಸ್ ಕೋಡ್ ಬಗ್ಗೆ ಟೀಕೆ ಮಾಡುವವರಿಲ್ಲʼʼ: ಅಲ್ಲಿನ ಜೀವನ ಶೈಲಿಗೆ ಭಾರತೀಯ ಮಹಿಳೆ ಮೆಚ್ಚುಗೆ

Viral Video: ಇತ್ತೀಚೆಗೆ ಥಾಯ್ಲೆಂಡ್‌ಗೆ ಭೇಟಿ ನೀಡಿದ ಭಾರತೀಯ ಮಹಿಳೆಯೊಬ್ಬರು ಅಲ್ಲಿನ ಭಿನ್ನ ಸಂಸ್ಕೃತಿ ಹಾಗೂ ಮಹಿಳೆಯರಿಗೆ ನೀಡಲಾಗಿರುವ ಸ್ವಾತಂತ್ರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಶ್ರೇಯಾ ಮಹೇಂದ್ರು ಎಂಬ ಮಹಿಳೆ ವೀಡಿಯೊಂದನ್ನು ಪೋಸ್ಟ್ ಮಾಡಿದ್ದು ಅದರಲ್ಲಿ ಅವರು ತಮ್ಮನ್ನು ಹೆಚ್ಚು ಅಚ್ಚರಿಗೊಳಿಸಿದ ಥಾಯ್ ಸಂಸ್ಕೃತಿಯ ವಿಚಾರಗಳನ್ನು ಪಟ್ಟಿ ಮಾಡಿದ್ದಾರೆ.

ಥಾಯ್ಲೆಂಡ್‌ನ ವಿಶೇಷತೆ ಬಗ್ಗೆ ವಿವರಿಸಿದ ಭಾರತೀಯ ಮಹಿಳೆ

ನವದೆಹಲಿ, ಜು. 28: ಪ್ರತಿಯೊಂದು ದೇಶದಲ್ಲೂ ಆಚರಣೆ, ಸಂಸ್ಕೃತಿ ವಿಭಿನ್ನವಾಗಿರುತ್ತದೆ. ಕೆಲವು ಪದ್ದತಿಗಳು ಕೆಲವೊಬ್ಬರಿಗೆ ಹೊಸತು ಎನ್ನುವ ಅನುಭವ ನೀಡಿದರೆ ಇನ್ನು ಕೆಲವರಿಗೆ ಅಚ್ಚರಿ ಎನಿಸಬಹುದು. ಅದೇ ರೀತಿ ಇತ್ತೀಚೆಗೆ ಥಾಯ್ಲೆಂಡ್‌ಗೆ ಭೇಟಿ ನೀಡಿದ ಭಾರತೀಯ ಮಹಿಳೆಯೊಬ್ಬರು ಅಲ್ಲಿನ ಭಿನ್ನ ಸಂಸ್ಕೃತಿ ಹಾಗೂ ಮಹಿಳೆಯರ ಸ್ವಾತಂತ್ರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶ್ರೇಯಾ ಮಹೇಂದ್ರು ಎಂಬ ಮಹಿಳೆ ವಿಡಿಯೊ ಪೋಸ್ಟ್ ಮಾಡಿದ್ದು (Viral News) ಅದರಲ್ಲಿ ಅವರು ತಮ್ಮನ್ನು ಹೆಚ್ಚು ಅಚ್ಚರಿಗೊಳಿಸಿದ ಥಾಯ್ ಸಂಸ್ಕೃತಿಯ ವಿಚಾರಗಳನ್ನು ಪಟ್ಟಿ ಮಾಡಿದ್ದಾರೆ.

ಅವರನ್ನು ಸೆಳೆದ ಮೊದಲ ವಿಚಾರ ಏನಪ್ಪ ಅಂದ್ರೆ ದೇಶ ಕಟ್ಟುವಲ್ಲಿ ಮಹಿಳೆಯರು ವಹಿಸುವ ಪ್ರಮುಖ ಪಾತ್ರ. ಇಲ್ಲಿ ಮಹಿಳೆಯರೇ ಹೆಚ್ಚು ವ್ಯವಹಾರಗಳನ್ನು ನಡೆಸುತ್ತಿದ್ದಾರೆ. ಸಣ್ಣ ವ್ಯವಹಾರಗಳು, ಆಹಾರ ಮಳಿಗೆಗಳು, ಟೆಕ್ ಕಂಪನಿಗಳು ಹೀಗೆ ಎಲ್ಲ ಕಡೆ ಶೇಕಡಾ 60ಕ್ಕೂ ಹೆಚ್ಚು ಮಹಿಳಾ ಉದ್ಯೋಗಿಗಳೇ ಇಲ್ಲಿದ್ದಾರೆ ಎಂದು ಖುಷಿ ವ್ಯಕ್ತ ಪಡಿಸಿದ್ದಾರೆ. ಥಾಯ್ಲೆಂಡ್‌ನಲ್ಲಿ ಮಹಿಳೆಯರೇ ಎಲ್ಲ ಕ್ಷೇತ್ರವನ್ನು ಮುನ್ನಡೆಸುತ್ತಿರುವುದು ಶ್ರೇಯಾ ಅವರನ್ನು ಗಮನ ಸೆಳೆದ ಮೊದಲ ವಿಚಾರ.

ವಿಡಿಯೊ ನೋಡಿ:



ಎರಡನೇಯದಾಗಿ ದೇವಾಲಯಗಳಿಗೆ ಭೇಟಿ ನೀಡುವ ಬಗ್ಗೆ. ಯಾವುದೇ ನೈತಿಕಗಿರಿಯನ್ನು ಎದುರಿಸದೆ ದೇವಾಲಯದ ಹೊರಾಂಗಣಕ್ಕೆ ಜನರು ಶಾರ್ಟ್ಸ್ ಮತ್ತು ಚಪ್ಪಲಿಗಳನ್ನು ಧರಿಸಿ ಪ್ರವೇಶಿಸಬಹುದು‌. ಇದಕ್ಕೆ ಯಾರು ಆಕ್ಷೇಪವನ್ನು ವ್ಯಕ್ತ ಪಡಿಸುವುದಿಲ್ಲ, ಆದರೆ ಒಳಗೆ ಹೋಗುವಾಗ ಶಾರ್ಟ್ಸ್ ಮತ್ತು ಪಾದರಕ್ಷೆಗಳನ್ನು ಧರಿಸುವಂತಿಲ್ಲ ಎಂದರು.

ಸಿಜೆಪಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು 1 ಲಕ್ಷ ರುಪಾಯಿ ಖರ್ಚು ಮಾಡಿ ಆಸ್ಟ್ರೇಲಿಯಾದಿಂದ ಬಂದ ಬಿ.ಟೆಕ್ ಪದವೀಧರ!

ಮೂರನೇಯ ಸಾಂಸ್ಕೃತಿಕ ವ್ಯತ್ಯಾಸವೆಂದರೆ ಥಾಯ್ಲೆಂಡ್‌ನಲ್ಲಿ ರೆಡ್‌ ಲೈಟ್‌ ಏರಿಯಾ. ಅಲ್ಲಿನ ರೆಡ್ ಲೈಟ್ ಏರಿಯಾಗಳು ಅಡಗಿಸಿ ಇಟ್ಟಂತೆ ಇರುವುದಿಲ್ಲ. ಎಲ್ಲರಿಗೂ ಗೋಚರವಾಗುವಂತೆ ಎದ್ದು ತೋರುತ್ತದೆ. ಇದು ಕೂಡ ತನಗೆ ಅಚ್ಚರಿ ನೀಡಿದ ವಿಚಾರ ಎಂದು ಶೇರ್ ಮಾಡಿಕೊಂಡಿದ್ದಾರೆ.

ಅದೇ ರೀತಿ ಇಲ್ಲಿನ ​ಉಡುಪಿನ ಸ್ವಾತಂತ್ರ್ಯ ಮತ್ತು ಅದ್ಭುತ ಸುರಕ್ಷತೆ ಬಗ್ಗೆ ನಿಜಕ್ಕೂ ಖುಷಿ ತರಿಸಿದೆ ಎಂದಿದ್ದಾರೆ. ʼʼಇಲ್ಲಿ ನೀವು ಏನು ಬೇಕಾದರೂ ಧರಿಸಬಹುದು. ಕ್ರಾಪ್ ಟಾಪ್‌ಗಳು, ಶಾರ್ಟ್ ಸ್ಕರ್ಟ್‌ಗಳು, ಶಾಟ್ ಟಾಪ್‌ಗಳು...ಯಾರೂ ನಿಮ್ಮನ್ನು ದಿಟ್ಟಿಸಿ ನೋಡುವುದಿಲ್ಲ, ಚುಡಾಯಿಸುವುದಿಲ್ಲ. ಸುರಕ್ಷತೆಯ ಬಗ್ಗೆ ಭಯವಿಲ್ಲದೆ ಸಂಪೂರ್ಣ ಸ್ವಾತಂತ್ರ್ಯವನ್ನು ಅನುಭವಿಸಬಹುದುʼʼ ಎಂದಿದ್ದಾರೆ.

ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಅನೇಕರು ಥಾಯ್ಲೆಂಡ್‌ನ ಸುರಕ್ಷತೆಯ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ನೆಟ್ಟಿಗರೊಬ್ಬರು, ʼʼಬ್ಯಾಂಕಾಕ್‌ನಲ್ಲಿ ಮಧ್ಯರಾತ್ರಿ 1 ಗಂಟೆಯ ನಂತರ ಒಂಟಿಯಾಗಿ ಸವಾರಿ ಮಾಡುವಾಗ ಎಂದಿಗೂ ಅಸುರಕ್ಷಿತ ಭಾವನೆ ಮೂಡಿಲ್ಲʼʼ ಎಂದಿದ್ದಾರೆ.