ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಖರೀದಿಸುವ ಮುನ್ನ ಎಚ್ಚರ! ಪಾಚಿ ಕಟ್ಟಿ ನಿಂತ ಕೊಳಕು ನೀರಿನಲ್ಲೇ ತರಕಾರಿ ತೊಳೆದ ವ್ಯಾಪಾರಿ! ವಿಡಿಯೋ ನೋಡಿ

Viral Video: ಕೆಸರು ನೀರಿನಲ್ಲಿ ತರಕಾರಿ ತೊಳೆದ ವಿಡಿಯೊವೊಂದು ವೈರಲ್ ಆಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ಈ ಘಟನೆ ನಡೆದಿದ್ದು ನಿಂತ ನೀರಿನಲ್ಲಿ ಹಸಿರು ತರಕಾರಿಗಳ ಮೂಟೆ ಇಟ್ಟುಕೊಂಡು ವ್ಯಾಪಾರಿಯೊಬ್ಬ ತೊಳೆಯುತ್ತಿದ್ದಾನೆ. ಈ ವಿಡಿಯೊ ನೋಡಿದ ಅನೇಕರು ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ.

ಕೆಸರು ನೀರಿನಲ್ಲೇ ತರಕಾರಿ ತೊಳೆದ ವ್ಯಾಪಾರಿ

ನೋಯ್ಡಾ, ಜೂ.25: ಇಂದು ಮಾರುಕಟ್ಟೆಯಿಂದ ಆಹಾರಗಳನ್ನು ಖರೀದಿ ಮಾಡುವ ಮೊದಲು ಎಚ್ಚರಿಕೆಯಿಂದ ಪರಿಶೀಲಿಸ ಬೇಕಿದೆ. ಆಹಾರ ವಸ್ತುಗಳಿಕೆ ಕೆಮಿಕಲ್ ಹಾಕುವುದಲ್ಲದೆ ಸ್ವಚ್ಛತೆ ಯನ್ನು ಕೂಡ ಪಾಲಿಸುತ್ತಿಲ್ಲ‌. ಇದಕ್ಕೆ ಸಾಕ್ಷಿ ಎಂಬಂತೆ ಇದೀಗ ಕೆಸರು ನೀರಿನಲ್ಲಿ ತರಕಾರಿ ತೊಳೆದ ವಿಡಿಯೊವೊಂದು ವೈರಲ್ (Viral News) ಆಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ಈ ಘಟನೆ ನಡೆದಿದ್ದು ನಿಂತ ನೀರಿನಲ್ಲಿ ಹಸಿರು ತರಕಾರಿಗಳ ಮೂಟೆ ಇಟ್ಟುಕೊಂಡು ವ್ಯಾಪಾರಿಯೊಬ್ಬ ತೊಳೆಯುತ್ತಿದ್ದಾನೆ. ಈ ವಿಡಿಯೊ ನೋಡಿದ ಅನೇಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಈ ವಿಡಿಯೊವು ಆಹಾರ ನೈರ್ಮಲ್ಯ ಮತ್ತು ಸುರಕ್ಷತೆಯ ಕುರಿತು ಚರ್ಚೆಗಳನ್ನು ಮತ್ತೆ ಹುಟ್ಟುಹಾಕಿದೆ. ಉತ್ಪನ್ನಗಳು ಗ್ರಾಹಕರನ್ನು ತಲುಪುವ ಮೊದಲು ಸ್ವಚ್ಛತಾ ಮಾನದಂಡಗಳನ್ನು ನಿರ್ಲಕ್ಷ್ಯ ಮಾಡುತ್ತಿರುವ ಬಗ್ಗೆ ಅನೇಕರು ಆತಂಕ ವ್ಯಕ್ತಪಡಿಸಿದ್ದಾರೆ. ವೈರಲ್ ಆದ ವೀಡಿಯೊ ದಲ್ಲಿ, ಹಲವಾರು ತರಕಾರಿಗಳ ಮೂಟೆ ಗಳನ್ನು ಕೆಸರು ನೀರಿನಲ್ಲಿ ಅದ್ದಿ ತೊಳೆಯುವುದನ್ನು ಕಾಣಬಹುದು. ಕೊಳವು ತೆರೆದ ಹಿತ್ತಲಿನ ಪ್ರದೇಶದಲ್ಲಿದೆ, ಹತ್ತಿರದಲ್ಲಿ ಹಸುವನ್ನು ಕಟ್ಟಲಾಗಿದೆ.

ವಿಡಿಯೋ ನೋಡಿ:



ಕೆಸರು ಹಾಗೂ ಪಾಚಿ ತುಂಬಿದ ನಿಂತ ನೀರಿನ ಹೊಂಡದಲ್ಲಿ ತರಕಾರಿಗಳನ್ನು ಮುಳುಗಿಸಿ ತೊಳೆ ಯುತ್ತಿದ್ದಾನೆ. ಅತ್ಯಂತ ಅಶುಚಿಯಾದ ವಾತಾವರಣ ಇದ್ದರೂ ತರಕಾರಿ ತೊಳೆಯುತ್ತಿದ್ದಾನೆ. ವೀಡಿಯೊವನ್ನು ರೆಕಾರ್ಡ್ ಮಾಡುತ್ತಿರುವ ವ್ಯಕ್ತಿ ಉತ್ಪನ್ನಗಳನ್ನು ಸ್ವಚ್ಛಗೊಳಿಸಲು ಬಳಸ ಲಾಗುವ ನೀರಿನ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು."ನೋಯ್ಡಾ ನಿವಾಸಿಗಳೇ, ಇವು ನಿಮ್ಮ ಪ್ರೋಟೀನ್ ಭರಿತ ತರಕಾರಿಗಳು. ನಿಮ್ಮ ತರಕಾರಿಗಳನ್ನು ಎಷ್ಟು ಶುದ್ಧ ನೀರಿನಲ್ಲಿ ತೊಳೆ ಯಲಾಗುತ್ತಿದೆ ನೋಡಿ" ಎಂದು ವಿಡಿಯೊದಲ್ಲಿ ಹೇಳಿದ್ದಾರೆ.

Viral News: ಕೇರಳಂ ಮೀರಿಸುವ ಹೊನ್ನಾವರ ಹಿನ್ನೀರು ಸ್ವರ್ಗ; ಭೇಟಿ ನೀಡುವಂತೆ ಪ್ರವಾಸಿಗರಿಗೆ ಆನಂದ್ ಮಹೀಂದ್ರಾ ಕರೆ

ಆದರೆ ತರಕಾರಿ ತೊಳೆಯುತ್ತಿದ್ದ ವ್ಯಕ್ತಿ ಮಾತ್ರ ಯಾವುದೇ ಹೆದರಿಕೆಯಿಲ್ಲದೆ ಕ್ಯಾಮೆರಾ ನೋಡಿ ನಗುತ್ತಿರುವುದು ಸಾರ್ವಜನಿಕರಿಗೆ ಮತ್ತಷ್ಟು ಕೋಪ ಉಂಟು ಮಾಡಿದೆ.​ ಮಾಹಿತಿಯ ಪ್ರಕಾರ, ಈ ವಿಡಿಯೋ ನೋಯ್ಡಾದ 'ಪಾರ್ಥಲಾ ಸೇತುವೆ ಬಳಿ ನಡೆದಿದೆ ಎಂದು ಹೇಳಲಾಗಿದೆ. ಬಳಕೆದಾರ ರೊಬ್ಬರು ಇಂತಹ ನೀರಿನಲ್ಲಿ ಆಹಾರವನ್ನು ತೊಳೆಯುವವನನ್ನು ತಕ್ಷಣ ಜೈಲಿಗೆ ಹಾಕಬೇಕು ಎಂದು ಬರೆದಿದ್ದಾರೆ. ಮತ್ತೊಬ್ಬರು ದೇಶದಲ್ಲಿ ಏನಾಗುತ್ತಿದೆ? ತನ್ನ ಜೀವನ ಚೆನ್ನಾಗಿದ್ದರೆ ಅಷ್ಟು ಸಾಕು ಎಂಬ ಮಾನೊಭಾವ ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ.