ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮುಖಕ್ಕೆ ಅಂಟಿಕೊಂಡ ಆಕ್ಟೋಪಸ್: ಕೊನೆಗೂ ಪ್ರಾಣ ಉಳಿಸಿಕೊಂಡ ಮೀನುಗಾರ! ಬೆಚ್ಚಿಬೀಳಿಸುವ ವಿಡಿಯೊ ವೈರಲ್‌

Viral Video: ಸಮುದ್ರದ ಜಲಚರವೊಂದು ಮೀನುಗಾರರೊಬ್ಬರಿಗೆ ಮರೆಯಲಾಗದ ಭಯಾನಕ ಅನುಭವ ನೀಡಿದೆ. ಜುಲೈ 10ರಂದು ಫಿಲಿಪೈನ್ಸ್‌ನ ಪಲವಾನ್‌ನ ಪೋರ್ಟೊ ಪ್ರಿನ್ಸೆಸಾ ದ್ವೀಪದ ಬಳಿ ಈ ಘಟನೆ ನಡೆದಿದೆ. ಮೀನುಗಾರರೊಬ್ಬರು ಆಕ್ಟೋಪಸ್ ಹಿಡಿಯಲು ಪ್ರಯತ್ನಿಸುವಾಗ ಏಕಾಏಕಿ ದಾಳಿ ಮಾಡಿದೆ. ವೈರಲ್ ವಿಡಿಯೊದಲ್ಲಿ ಮೀನುಗಾರ ತನ್ನ ಮುಖಕ್ಕೆ ಅಂಟಿಕೊಂಡಿದ್ದ ಆಕ್ಟೋಪಸ್ ಬಿಡಿಸಿಕೊಳ್ಳಲು ಹರಸಾಹಸ ಪಡುವ ದೃಶ್ಯ ಕಂಡುಬಂದಿದೆ.

ಮೀನುಗಾರನ ಮೇಲೆ ಸಮುದ್ರದಲ್ಲಿ ಏಕಾಏಕಿ ದಾಳಿ ಮಾಡಿದ ಆಕ್ಟೋಪಸ್

ಫಿಲಿಪೈನ್ಸ್, ಆ. 15: ಸಮುದ್ರ ತೀರದಲ್ಲಿ ಮೀನುಗಾರನಿಗೆ ಅಘಾತಕಾರಿ ಘಟನೆಯೊಂದು ಎದುರಾಗಿದೆ. ಸಮುದ್ರದ ಜಲಚರವೊಂದು ಮರೆಯಲಾಗದ ಭಯಾನಕ ಅನುಭವ ನೀಡಿದೆ. ಜುಲೈ 10ರಂದು ಪಲವಾನ್‌ನ ಪೋರ್ಟೊ ಪ್ರಿನ್ಸೆಸಾ ದ್ವೀಪದ ಬಳಿ ಈ ಘಟನೆ ನಡೆದಿದೆ. ಮೀನುಗಾರರೊಬ್ಬರು ಆಕ್ಟೋಪಸ್ ಹಿಡಿಯಲು ಪ್ರಯತ್ನಿಸುವಾಗ ಏಕಾಏಕಿ ದಾಳಿ ಮಾಡಿದೆ. ವೈರಲ್ (Viral News) ವಿಡಿಯೊದಲ್ಲಿ, ಮೀನುಗಾರ ತನ್ನ ಮುಖಕ್ಕೆ ಅಂಟಿಕೊಂಡಿದ್ದ ಆಕ್ಟೋಪಸ್ ಅನ್ನು ಬಿಡಿಸಿಕೊಳ್ಳಲು ಹರಸಾಹಸ ಪಡುವ ದೃಶ್ಯ ಕಂಡುಬಂದಿದೆ.

ಫಿಲಿಪೈನ್ಸ್‌ನಲ್ಲಿ ಮೀನುಗಾರಿಕೆಯ ದೃಶ್ಯವೊಂದು ಭಯಾನಕ ಹೋರಾಟವಾಗಿ ಮಾರ್ಪಟ್ಟಿತು. ಆಕ್ಟೋಪಸ್ ಇದ್ದಕ್ಕಿದ್ದಂತೆ ಮೀನುಗಾರನ ಮುಖದ ಸುತ್ತಲೂ ಸುತ್ತಿಕೊಂಡಿದ್ದು ತನ್ನ ಶಕ್ತಿಯುತ ಕಾಲುಗಳಿಂದ ಆತನ ಚರ್ಮವನ್ನು ಗಟ್ಟಿಯಾಗಿ ಮುಚ್ಚಿಕೊಂಡಿತು.

ವಿಡಿಯೊ ನೋಡಿ:



ಜೆಸ್ಸರ್ ಸೆರ್ವಾಂಟೆಸ್ ಎಂಬ ಮೀನುಗಾರ ಪೋರ್ಟ್ ಪ್ರಿನ್ಸೆಸಾ ದ್ವೀಪದ ಬಳಿ ಮೀನುಗಾರಿಕೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಸಮುದ್ರದಿಂದ ಆಕ್ಟೋಪಸ್ ಅನ್ನು ಮೇಲಕ್ಕೆ ಎತ್ತಿದ್ದಾರೆ. ತಕ್ಷಣವೇ ಆಕ್ಟೋಪಸ್ ದಾಳಿ ಮಾಡಿದೆ. ಜೆಸ್ಸರ್ ಸೆರ್ವಾಂಟೆಸ್ ಹಿಡಿತದಿಂದ ತಪ್ಪಿಸಿಕೊಂಡು ಅವರ ಮುಖ ಹಾಗೂ ತಲೆಯನ್ನು ಕಾಲುಗಳಿಂದ ಗಟ್ಟಿಯಾಗಿ ಹಿಡಿದುಕೊಂಡಿದೆ.

ಆಕ್ಟೋಪಸ್‌ನ ಹೀರೊತ್ತಿಗೆಗಳು ಅವರ ಚರ್ಮಕ್ಕೆ ಗಟ್ಟಿಯಾಗಿ ಅಂಟಿಕೊಂಡಿವೆ. ಅದನ್ನು ತೆಗೆಯುವುದು ಅತ್ಯಂತ ಕಷ್ಟವಾಗಿತ್ತು. ಒಂದು ಹಂತದಲ್ಲಿ ಅದು ಮೀನುಗಾರನ ಬಾಯಿಯನ್ನೇ ಸಂಪೂರ್ಣವಾಗಿ ಮುಚ್ಚಿದ್ದರಿಂದ, ಉಸಿರಾಡಲು ಸಾಧ್ಯವಾಗದೆ ಪ್ರಾಣಕ್ಕೆ ಅಪಾಯ ಸಂಭವಿಸುವ ಸಾಧ್ಯತೆ ಇತ್ತು.

ಮಳೆಯಿಂದ ಜಲಾವೃತಗೊಂಡ ಮದುವೆ ಮಂಟಪ: ವಧುವನ್ನು ಎತ್ತಿಕೊಂಡು ಹೆಜ್ಜೆಹಾಕಿದ ವರ

ಕೊನೆಗೆ ಆಕ್ಟೋಪಸ್ ತನ್ನ ಹಿಡಿತವನ್ನು ಬಿಡಲು ನಿರಾಕರಿಸಿದಾಗ, ಸೆರ್ವಾಂಟೆಸ್ ಬಿದಿರಿನ ತುಂಡನ್ನು ಬಳಸಿದ್ದಾರೆ. ತನ್ನ ಚರ್ಮ ಸಡಿಲಗೊಳಿಸಲು ಮತ್ತು ಅದನ್ನು ತನ್ನ ಮುಖದಿಂದ ಎಳೆಯಲು ಆಕ್ಟೋಪಸ್‌ ಅನ್ನು ಪದೇ ಪದೆ ಹೊಡೆದಿದ್ದಾರೆ. ಬಳಿಕ ಆಕ್ಟೋಪಸ್ ತನ್ನ ಹಿಡಿತವನ್ನು ಸಡಿಲಿಸಿದೆ. ತಕ್ಷಣವೇ ಅವರು ಅದನ್ನು ಮತ್ತೆ ಸಮುದ್ರಕ್ಕೆ ಎಸೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸೆರ್ವಾಂಟೆಸ್ ಆಕ್ಟೋಪಸ್‌ನಿಂದ ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದ್ದು, ಭಯಾನಕವಾಗಿದ. ಆಕ್ಟೋಪಸ್‌ಗಳು ಬುದ್ಧಿವಂತಿಕೆಗೆ ಹೆಸರಾಗಿದ್ದು ನೂರಾರು ಸಕ್ಕರ್‌ಗಳಿಂದ ಕೂಡಿರುತ್ತವೆ. ಇವು ಯಾವುದೇ ವಸ್ತುಗಳನ್ನು ಕುಶಲತೆಯಿಂದ ನಿರ್ವಹಿಸಲು ಹಾಗೂ ದಾಳಿಯಿಂದ ರಕ್ಷಿಸಲು ಸಹಾಯ ಮಾಡುತ್ತವೆ.