ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಪ್ರೀತಿಸಿ ಮದ್ವೆಯಾದ ಜೋಡಿಗೆ ಇದೆಂಥಾ ಶಿಕ್ಷೆ? ನೊಗಕ್ಕೆ ಕಟ್ಟಿ ಉಳಮೆ ಮಾಡಿಸಿದ ಜನ- ವಿಡಿಯೊ ನೋಡಿ

ರಾಯಗಡ ಜಿಲ್ಲೆಯ ಕಂಜಮಝಿರಾ ಗ್ರಾಮದ ಜೋಡಿಯೊಂದು ಇತ್ತೀಚೆಗೆ ಪ್ರೀತಿಸಿ ವಿವಾಹವಾಗಿದ್ದರು. ಇಬ್ಬರಿಬ್ಬರೂ ಸಂಬಂಧಿಕರೇ ಆಗಿರುವುದರಿಂದ ಇವರ ಮದುವೆಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಸ್ಥಳೀಯ ಪದ್ಧತಿಗಳ ಪ್ರಕಾರ ಅಂತಹ ವಿವಾಹವನ್ನು ನಿಷಿದ್ಧವೆಂದು ಪರಿಗಣಿಸಲಾಗುತ್ತಂತೆ. ಹೀಗಾಗಿ ಈ ದಂಪತಿಗೆ ಶಿಕ್ಷೆ ವಿಧಿಸಲು ಗ್ರಾಮಸ್ಥರು ಮುಂದಾಗಿದ್ದಾರೆ. ಇದರ ಪ್ರಕಾರ ಈ ಜೋಡಿಯನ್ನು ಜನರೆಲ್ಲ ಸೇರಿ ಬಲವಂತವಾಗಿ ನೊಗಕ್ಕೆ ಕಟ್ಟಿ ಹೊಲ ಉಳುವಂತೆ ಮಾಡಿದ್ದಾರೆ.

ಪಟನಾ: ಸಮಾಜದ ನಿಯಮ ಮತ್ತು ಕುಟುಂಬದ ವಿರುದ್ಧ ಹೋಗಿ ಮದುವೆಯಾದ ಜೋಡಿಗೆ ಗ್ರಾಮಸ್ಥರೆಲ್ಲ ಸೇರಿಕೊಂಡು ವಿಚಿತ್ರ ಶಿಕ್ಷೆಯೊಂದನ್ನು ನೀಡಿರುವ ಘಟನೆ ವರದಿಯಾಗಿದೆ. ಈ ಜೋಡಿಯನ್ನು ಜೋಡೆತ್ತುಗಳಂತೆ ನೊಗಕ್ಕೆ ಕಟ್ಟಿ ಉಳುಮೆ ಮಾಡಿಸಿರುವ ಆಘಾತಕಾರಿ ಘಟನೆ ಒಡಿಶಾದಲ್ಲಿ ನಡೆಸಿದೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌(Viral Video) ಆಗಿದೆ. ವಿಡಿಯೊ ನೋಡಿದ ನೆಟ್ಟಿಗರು ಭಾರೀ ಆಕ್ರೋಶ ಹೊರ ಹಾಕಿದ್ದಾರೆ. ಅಷ್ಟಕ್ಕೂ ನಡೆದಿದ್ದೇನು? ಏನಿದು ವಿಲಕ್ಷಣ ಘಟನೆ? ಇಲ್ಲಿದೆ ಫುಲ್‌ ಡಿಟೇಲ್ಸ್‌

ಮಾಧ್ಯಮ ವರದಿಗಳ ಪ್ರಕಾರ, ರಾಯಗಡ ಜಿಲ್ಲೆಯ ಕಂಜಮಝಿರಾ ಗ್ರಾಮದ ಈ ಜೋಡಿ ಇತ್ತೀಚೆಗೆ ಪ್ರೀತಿಸಿ ವಿವಾಹವಾಗಿದ್ದರು. ಇಬ್ಬರಿಬ್ಬರೂ ಸಂಬಂಧಿಕರೇ ಆಗಿರುವುದರಿಂದ ಇವರ ಮದುವೆಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಸ್ಥಳೀಯ ಪದ್ಧತಿಗಳ ಪ್ರಕಾರ ಅಂತಹ ವಿವಾಹವನ್ನು ನಿಷಿದ್ಧವೆಂದು ಪರಿಗಣಿಸಲಾಗುತ್ತಂತೆ. ಹೀಗಾಗಿ ಈ ದಂಪತಿಗೆ ಶಿಕ್ಷೆ ವಿಧಿಸಲು ಗ್ರಾಮಸ್ಥರು ಮುಂದಾಗಿದ್ದಾರೆ. ಇದರ ಪ್ರಕಾರ ಈ ಜೋಡಿಯನ್ನು ಜನರೆಲ್ಲ ಸೇರಿ ಬಲವಂತವಾಗಿ ನೊಗಕ್ಕೆ ಕಟ್ಟಿ ಹೊಲ ಉಳುವಂತೆ ಮಾಡಿದ್ದಾರೆ. ಉದ್ರಿಕ್ತ ಗುಂಪು ಈ ಜೋಡಿ ಹೊಲ ಉಳುವಂತೆ ಮಾಡಿದರೂ ಅಲ್ಲಿದ್ದ ಜನ ಮಾತ್ರ ನೋಡಿಕೊಂಡು ಸುಮ್ಮನೆ ನಿಂತಿದ್ದಾರೆ. ಯಾರೊಬ್ಬರೂ ವಿರೋಧ ವ್ಯಕ್ತಪಡಿಸದೇ ಇರುವುದು ಅಚ್ಚರಿಯ ಸಂಗತಿ.

ಇದರ ವಿಡಿಯೊ ಇಲ್ಲಿದೆ ನೋಡಿ



ಈ ಸುದ್ದಿಯನ್ನೂ ಓದಿ: Viral Video: ಸಿಕ್ಕಾಪಟ್ಟೆ ವೈರಲ್ ಆಯ್ತು ಈತನ ರೆಸ್ಯೂಮ್; ಅಂಥದ್ದೇನಿದೆ ಇದರಲ್ಲಿ?

ಬಿದಿರು ಮತ್ತು ಮರದ ದಿಮ್ಮಿಗಳಿಂದ ಮಾಡಿದ ನೊಗವನ್ನು ದಂಪತಿಗಳ ಹೆಗಲ ಮೇಲೆ ಬಿಗಿಯಲಾಗಿತ್ತು.ಇನ್ನು ವೈರಲ್‌ ಆಗಿರುವ ವಿಡಿಯೊದಲ್ಲಿಇಬ್ಬರು ಪುರುಷರು ದಂಪತಿಗೆ ಕೋಲುಗಳಿಂದ ಹೊಡೆಯುವುದನ್ನು ಸಹ ಕಾಣಬಹುದು. ಈ ಸಾರ್ವಜನಿಕ ಅವಮಾನದ ನಂತರ, ದಂಪತಿಗಳನ್ನು ಗ್ರಾಮದ ದೇವಾಲಯಕ್ಕೆ ಕರೆದೊಯ್ದು ಅವರ ನೈತಿಕ ಉಲ್ಲಂಘನೆಯನ್ನು "ಶುದ್ಧೀಕರಿಸಲು" ಶುದ್ಧೀಕರಣ ವಿಧಿವಿಧಾನಗಳನ್ನು ನಡೆಸುವಂತೆ ಒತ್ತಾಯಿಸಲಾಗಿದೆ ಎಂದು ವರದಿಯಾಗಿದೆ. ತನಿಖೆ ನಡೆಸಲು ಒಂದು ತಂಡ ಗ್ರಾಮಕ್ಕೆ ಭೇಟಿ ನೀಡಿದ್ದು, ಶೀಘ್ರದಲ್ಲೇ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಎಸ್. ಸ್ವಾತಿ ಕುಮಾರ್ ಶುಕ್ರವಾರ ತಿಳಿಸಿದ್ದಾರೆ.