Viral Video: ಸಿಕ್ಕಾಪಟ್ಟೆ ವೈರಲ್ ಆಯ್ತು ಈತನ ರೆಸ್ಯೂಮ್; ಅಂಥದ್ದೇನಿದೆ ಇದರಲ್ಲಿ?
ಇಲ್ಲೊಬ್ಬ ವ್ಯಕ್ತಿ ಉದ್ಯೋಗ ಹುಡುಕಾಟಕ್ಕಾಗಿ ರೆಡಿ ಮಾಡಿದ ರೆಸ್ಯೂಮ್‍ನಲ್ಲಿ , “ನನ್ನ ಪೂರ್ಣ ಸಾಮರ್ಥ್ಯವನ್ನು ಬಹಿರಂಗಪಡಿಸಲು ನನ್ನನ್ನು ನೇಮಿಸಿಕೊಳ್ಳಿ" ಎಂಬ ಬುದ್ಧಿವಂತಿಕೆಯ ಸಾಲೊಂದನ್ನು ಪ್ರಿಂಟ್ ಮಾಡಿಸಿದ್ದಾನೆ. ಈ ರೆಸ್ಯೂಮ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನಸೆಳೆದು ವೈರಲ್(Viral Video) ಆಗಿದೆ.


ಯಾವುದೇ ಕಂಪನಿಗಳಲ್ಲಿ ಉದ್ಯೋಗವನ್ನು ಪಡೆದುಕೊಳ್ಳಲು ನಮ್ಮ ಎಲ್ಲಾ ಮಾಹಿತಿ ಇರುವ ರೆಸ್ಯೂಮ್ ಕೊಡಬೇಕಾಗುತ್ತದೆ. ಅದರ ಆಧಾರದ ಮೇಲೆ ಕಂಪನಿಗಳು ಕೆಲಸ ನೀಡುತ್ತವೆ. ಹೀಗಿರುವಾಗ ಇಲ್ಲೊಬ್ಬ ವ್ಯಕ್ತಿ ಉದ್ಯೋಗ ಹುಡುಕಾಟಕ್ಕೆ ವಿಶಿಷ್ಟವಾದ ವಿಧಾನದಲ್ಲಿ ರೆಸ್ಯೂಮ್ ಅನ್ನು ರೆಡಿ ಮಾಡಿದ್ದಾನೆ. ಅದರಲ್ಲಿ ಆತ ಬುದ್ಧಿವಂತಿಕೆಯ ಸಾಲೊಂದನ್ನು ಪ್ರಿಂಟ್ ಮಾಡಿಸಿದ್ದಾನೆ. ಈ ರೆಸ್ಯೂಮ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನಸೆಳೆದು ವೈರಲ್(Viral Video) ಆಗಿದೆ. ಹಾಗಾದ್ರೆ ಆ ರೆಸ್ಯೂಮ್‌ನಲ್ಲಿ ಏನಿದೆ ಎಂಬ ಕುತೂಹಲ ನಿಮಗೂ ಇದೆಯಾ...? ಅದರ ಮಾಹಿತಿ ಇಲ್ಲಿದೆ ನೋಡಿ.
ವೈರಲ್ ಆದ ರೆಸ್ಯೂಮ್‍ನಲ್ಲಿ ಅರ್ಧದಷ್ಟು ಮಾತ್ರ ಪ್ರಿಂಟ್ ಮಾಡಲಾಗಿದೆ. ಅದರಲ್ಲಿ ಅರ್ಜಿದಾರರ ಮುಖದ ಒಂದು ಭಾಗ ಮತ್ತು ಕೆಲವೊಂದು ಮಾಹಿತಿಗಳನ್ನು ಮಾತ್ರ ರೆಸ್ಯೂಮ್‌ನಲ್ಲಿ ಪ್ರಿಂಟ್ ಮಾಡಲಾಗಿತ್ತು. ಪೇಜ್‍ನ ಉಳಿದ ಭಾಗವು ಖಾಲಿಯಾಗಿತ್ತು, ಮಧ್ಯದಲ್ಲಿ ಮಾತ್ರ "ನನ್ನ ಪೂರ್ಣ ಸಾಮರ್ಥ್ಯವನ್ನು ಬಹಿರಂಗಪಡಿಸಲು ನನ್ನನ್ನು ನೇಮಿಸಿಕೊಳ್ಳಿ" ಎಂದು ದಪ್ಪ ಅಕ್ಷರದಲ್ಲಿ ಬರೆಯಲಾಗಿತ್ತು.
Bro intentionally printed half a resume and wrote: ‘Hire me to unlock full potential.’ Man submitted a demo version of himself.😂
byu/eloanmask infunny
ರೆಸ್ಯೂಮ್‌ನ ಮೇಲಿನ ಅರ್ಧಭಾಗದಲ್ಲಿ "ನಿಮ್ಮ ಕಂಪನಿಯ ಭಾಗವಾಗುವ ಮೂಲಕ, ನಾನು ನನ್ನ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಬಹುದು ಮತ್ತು ಹೆಚ್ಚಿನ ಜ್ಞಾನವನ್ನು ಪಡೆಯಬಹುದು ಮತ್ತು ಉದ್ಯೋಗಿಯಾಗಿ ನನ್ನ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬಹುದು" ಎಂದು ವಿವರಿಸಿದ ಮಾಹಿತಿಯನ್ನು ಒಳಗೊಂಡಿತ್ತು. ಅಂದರೆ ಇಲ್ಲಿ ಅರ್ಹತೆಗಳು ಅಥವಾ ಅನುಭವವನ್ನು ಪಟ್ಟಿ ಮಾಡುವ ಬದಲು, ದಾಖಲೆಯು ಕುತೂಹಲಕಾರಿ ಟ್ಯಾಗ್‌ಲೈನ್‌ನೊಂದಿಗೆ ಕೊನೆಗೊಂಡಿತು.
ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ ಅನೇಕರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಕೆಲವು ನೆಟ್ಟಿಗರು ಆ ವ್ಯಕ್ತಿಯ ಸೃಜನಶೀಲತೆಯಲ್ಲಿನ ಪ್ರತಿಭೆಯನ್ನು ಮೆಚ್ಚಿದ್ದಾರೆ.
Viral News: ರೆಸ್ಯೂಮ್ ಬೇಡ, ವಾರ್ಷಿಕ 40 ಲಕ್ಷ ರೂ ಪ್ಯಾಕೇಜ್; ಉದ್ಯೋಗ ಆಫರ್ ನೀಡಿದ ಬೆಂಗಳೂರಿನ AI ಕಂಪನಿ
ರೆಸ್ಯೂಮ್ ಇಲ್ಲದೇ ಕೆಲಸ!
ಕೆಲಸದ ಸಂದರ್ಶನಕ್ಕೆ ರೆಸ್ಯೂಮ್ ತೆಗೆದುಕೊಂಡು, ಅದರ ಆಧಾರ ಮೇಲೆ ವ್ಯಕ್ತಿಗೆ ಜಾಬ್ ಕೊಡುವುದು ಸಾಮಾನ್ಯ ಸಂಗತಿ. ಆದರೆ ಬೆಂಗಳೂರು ಮೂಲದ ಕೃತಕ ಬುದ್ಧಿಮತ್ತೆ (AI) ಕಂಪನಿಯೊಂದು ತನ್ನ ಕಂಪನಿಗೆ ಕೆಲಸಕ್ಕೆ ಬರುವವರಿಗೆ ರೆಸ್ಯೂಮ್ ಇಲ್ಲದೆ ಕೆಲಸ ಕೊಡುವುದಾಗಿ ಘೋಷಿಸಿದೆ. ಸದ್ಯ ಇದು ಎಲ್ಲಡೆ ವೈರಲ್ ಆಗಿದೆ. ಸ್ಮಾಲೆಸ್ಟ್ AI ನ ಸಂಸ್ಥಾಪಕ ಸುದರ್ಶನ್ ಕಾಮತ್ ಇತ್ತೀಚೆಗೆ ವಾರ್ಷಿಕ 40 ಲಕ್ಷ ರೂ. ಸಂಬಳದೊಂದಿಗೆ ಸಾಫ್ಟ್‌ವೇರ್ ಎಂಜಿನಿಯರ್ ಉದ್ಯೋಗಾವಕಾಶವನ್ನು ಘೋಷಿಸಿದ್ದಾರೆ. ಈ ಕೆಲಸಕ್ಕೆ ರೆಸ್ಯೂಮೆ ಸಲ್ಲಿಸುವ ಅಗತ್ಯವಿಲ್ಲ ಅಥವಾ ನಿರ್ದಿಷ್ಟ ಶೈಕ್ಷಣಿಕ ಹಿನ್ನೆಲೆಯನ್ನು ಹೊಂದಿರಬೇಕಾಗಿಲ್ಲ ಎಂದು ಹೇಳಿದ್ದಾರೆ.