ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇನ್ಮುಂದೆ ಇಂಧನ ಬೆಲೆ ಏರಿಕೆಯ ಚಿಂತೆಯೇ ಬೇಡ; ಭಾರತದಲ್ಲಿ ತಯಾರಾಯ್ತು ಪೆಟ್ರೋಲ್ ಇಲ್ಲದೆ ಚಲಿಸುವ ಬೈಕ್

Viral Video: ಪೆಟ್ರೋಲ್ ಇಲ್ಲದೆ ಚಲಿಸಬಲ್ಲ ವಿಶೇಷ ಬೈಕ್‌ ಅನ್ನು ಒಡಿಶಾದ ಯುವಕನೊಬ್ಬ ಆವಿಷ್ಕರಿಸಿದ್ದಾನೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಇಂಧನ ಕೊರತೆ, ಬೆಲೆ ಏರಿಕೆಯ ಸಮಸ್ಯೆಯಿಂದ ಪಾರಾಗಲಕು ಈ ಆವಿಷ್ಕಾರ ನೆರವಾಗಲಿದೆ ಎನ್ನುವ ನಿರೀಕ್ಷೆ ಮೂಡಿದೆ.

ಪೆಟ್ರೋಲ್ ರಹಿತ ಬೈಕ್ ನಿರ್ಮಿಸಿ ಮನಗೆದ್ದ ಒಡಿಶಾದ ವ್ಯಕ್ತಿ

ಭುವನೇಶ್ವರ, ಮೇ 26: ದೇಶದಲ್ಲಿ ಇಂಧನ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅದರಲ್ಲೂ ಜನಸಾಮಾನ್ಯರಿಗೆ, ಮದ್ಯಮ ವರ್ಗದವರಿಗೆ ಪೆಟ್ರೋಲ್ ಹಾಗೂ ಡೀಸೆಲ್‌ಗೆ ಹಣ ವ್ಯಯಿಸುವುದು ತಲೆ ನೋವಾಗಿ ಬಿಟ್ಟಿದೆ. ಹೀಗಾಗಿ ಹೆಚ್ಚಿನವರು ಇಲೆಕ್ಟ್ರಿಕ್ ವಾಹನದತ್ತ ಮುಖ ಮಾಡಿದ್ದಾರೆ. ಈ ನಡುವೆ ಪೆಟ್ರೋಲ್ ಇಲ್ಲದೆ ಚಲಿಸುವ ಬೈಕ್‌ ಅನ್ನು ಒಡಿಶಾ ವ್ಯಕ್ತಿಯೊಬ್ಬ ಆವಿಷ್ಕರಿಸಿದ್ದಾನೆ. ಹೌದು ಈ ವಿಶೇಷ ಬೈಕ್‌ ಪೆಟ್ರೊಲ್ ಇಲ್ಲದೆ ಚಲಿಸುತ್ತದೆ! ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗುತ್ತಿದೆ.

ಒಡಿಶಾದ ವ್ಯಕ್ತಿಯೊಬ್ಬ ಪೆಟ್ರೋಲ್ ರಹಿತ ಬೈಕ್ ನಿರ್ಮಿಸುವ ಮೂಲಕ ಆನ್‌ಲೈನ್‌ನಲ್ಲಿ ಗಮನ ಸೆಳೆದಿದ್ದಾನೆ. ಅನೇಕರು ಈ ಕ್ರಿಯೇಟಿವಿಟಿಗೆ ಆಶ್ಚರ್ಯಚಕಿತರಾಗಿದ್ದು, ಅದರ ಹಿಂದಿನ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಆತ ಸಾಮಾನ್ಯ ಸೈಕಲ್ ಅನ್ನು ಮಾರ್ಪಾಡು ಮಾಡಿದ್ದು, ಅದು ನೋಡಲು ಬೈಕ್‌ನಂತೆ ಕಾಣುತ್ತದೆ.

ವಿಡಿಯೊ ನೋಡಿ:



ಆ ವ್ಯಕ್ತಿ ಸೈಕಲ್ ಅನ್ನು ಬೈಕ್‌ನಂತೆ ಬದಲಾಯಿಸಿದ್ದಾನೆ. ವಾಹನವು ಅಗಲವಾದ ಸೀಟ್, ಬೈಕ್ ಶೈಲಿಯ ಹ್ಯಾಂಡಲ್‌ ಬಾರ್‌ ಮತ್ತು ಬೈಕ್ ಅನ್ನು ಹೋಲುವ ಬಾಡಿಯನ್ನು ಹೊಂದಿದೆ. ಆತ ಪೆಟ್ರೋಲ್ ಬಳಸದೆ ರಸ್ತೆಯಲ್ಲಿ ಸರಾಗವಾಗಿ ಸವಾರಿ ಮಾಡುವುದನ್ನು ವಿಡಿಯೊ ತೋರಿಸುತ್ತದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಇದನ್ನು "ದೇಸಿ ಸೃಜನಶೀಲತೆʼʼ ಎಂದು ಬಣ್ಣಿಸಿದ್ದಾರೆ‌‌. ಈ ಕಲ್ಪನೆಯ ಹಿಂದಿನ ಕೌಶಲ್ಯಗಳನ್ನು ಶ್ಲಾಘಿಸಿದ್ದಾರೆ.

ವಧುವಿನ ಲೆಹೆಂಗಾ ಹಿಡಿದುಕೊಂಡು ಸಪ್ತಪದಿ ತುಳಿಯಲು ಮುಂದಾದ ಸ್ನೇಹಿತೆಯರು

ಆತ ಸೈಕಲ್‌ನ ವಿವಿಧ ಪಾರ್ಟ್‌ಗಳನ್ನು ಬದಲಾಯಿಸಿ ಈ ಮಾರ್ಪಾಡು ಮಾಡಿದ್ದಾನೆ. ಕ್ಲಿಪ್‌ನಲ್ಲಿ, ಆ ವ್ಯಕ್ತಿಯು ಕಸ್ಟಮೈಸ್ ಮಾಡಿದ ವಾಹನವನ್ನು ರಸ್ತೆಯಲ್ಲಿ ಆರಾಮವಾಗಿ ಓಡಿಸುತ್ತಿರುವುದನ್ನು ಕಾಣಬಹುದು. ಸುತ್ತಲಿನ ಜನರು ಇದನ್ನು ಕುತೂಹಲದಿಂದ ನೋಡುತ್ತಿದ್ದಾರೆ. "ಈ ಬೈಕ್ ಪೆಟ್ರೋಲ್ ಇಲ್ಲದೆ ಚಲಿಸುತ್ತದೆ. ಒಡಿಶಾದ ಕಟಕ್‌ನಲ್ಲಿದೆ" ಎಂಬ ಶೀರ್ಷಿಕೆ ಮೂಲಕ ವಿಡಿಯೊ ಶೇರ್ ಮಾಡಲಾಗಿದೆ.

ಒಬ್ಬರು "ಈ ಇಂಧನ ಬೆಲೆ ಏರಿಕೆಯ ಸಮಯದಲ್ಲಿ ಬೈಕ್ ಚಲಾವಣೆಯ ಅನುಭವ ಪಡೆಯಬಹುದು" ಎಂದು ಬರೆದಿದ್ದಾರೆ. ಮತ್ತೊಬ್ಬರು, ʼʼವ್ಯಕ್ತಿಯ ಕ್ರಿಯೇಟಿವಿಟಿ ಚೆನ್ನಾಗಿದೆʼʼ ಎಂದು ಮೆಚ್ಚುಗೆ ಸೂಚಿಸಿದ್ದಾರೆ.