ಸೋಲಾಪುರ,ಜ.22: ಇತ್ತೀಚೆಗೆ ವಿದ್ಯುತ್ ಚಾಲಿತ ಎಲೆಕ್ಟ್ರಿಕ್ ವಾಹನಗಳ ಬಳಕೆ ಪ್ರಮಾಣ ಹೆಚ್ಚುತ್ತಿದೆ. ಇದರ ವೆಚ್ಚವು ಪೆಟ್ರೋಲ್ ಮತ್ತು ಡೀಸೆಲ್ ವಾಹನಕ್ಕಿಂತ ಕಡಿಮೆಯಾಗಿದ್ದು ಹೆಚ್ಚಿನವರು ಇದನ್ನೇ ಆಯ್ದುಕೊಳ್ಳುತ್ತಾರೆ. ಆದರೆ ಇತ್ತೀಚೆಗೆ ಇಲೆಕ್ಟ್ರಾನಿಕ್ ವಾಹನಗಳು ಬೆಂಕಿಗೆ ಆಹುತಿಯಾದ ಘಟನೆಗಳು ಹೆಚ್ಚಾಗಿ ನಡೆದಿದ್ದು ಮಹಾರಾಷ್ಟ್ರದ ಸೋಲಾಪುರದಲ್ಲಿ ಓಲಾ ಸ್ಕೂಟರ್ ಒಂದಕ್ಕೆ ದಿಢೀರನೆ ಬೆಂಕಿ ಹಿಡಿದಿದೆ. ಈ ಭಯಾನಕ ಘಟನೆಯ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು (Viral Video) ಸ್ಕೂಟರ್ನಲ್ಲಿದ್ದ ವ್ಯಕ್ತಿ ಮತ್ತು ಪುಟ್ಟ ಮಗು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ದೃಶ್ಯ ನೋಡಿದ ನೆಟ್ಟಿಗರು ಆತಂಕ ವ್ಯಕ್ತ ಪಡಿಸಿದ್ದಾರೆ.
ಸೋಲಾಪುರದಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ನೋಡ ನೋಡುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್ ಗೆ ದಿಢೀರನೆ ಬೆಂಕಿ ಹತ್ತಿ ಉರಿದಿದೆ. ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಓಲಾ ಸ್ಕೂಟರ್ ಏರಲು ತಂದೆ ರೆಡಿಯಾಗಿದ್ದರು. ಈ ಸಂದರ್ಭದಲ್ಲಿ ಮಗು ಸ್ಕೂಟರ್‌ನ ಫುಟ್‌ಬೋರ್ಡ್ ಮೇಲೆ ಹತ್ತುತ್ತಿದ್ದಂತೆ ಸೀಟಿನ ಕೆಳಗಿನಿಂದ ದಟ್ಟವಾದ ಬಿಳಿ ಹೊಗೆ ಬರಲಾರಂಭಿಸಿದೆ.
ವಿಡಿಯೋ ನೋಡಿ:
ವಿಡಿಯೊದಲ್ಲಿ ರಸ್ತೆಯ ಪಕ್ಕದಲ್ಲಿ ನಿಂತಿರುವ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ತೋರಿಸುತ್ತವೆ. ಒಬ್ಬ ವ್ಯಕ್ತಿ ತನ್ನ ಪುಟ್ಟ ಮಗುವಿಗಾಗಿ ಕಾಯುತ್ತಿರುವುದನ್ನು ಕಾಣಬಹುದು. ಮಗು ಫುಟ್‌ಬೋರ್ಡ್ ಮೇಲೆ ಹತ್ತುತ್ತಿದ್ದಂತೆ ಸೀಟಿನ ಕೆಳಗಿನಿಂದ ಬಿಳಿ ಹೊಗೆ ಬರಲು ಪ್ರಾರಂಭಿಸುತ್ತದೆ ಇದನ್ನು ಗಮನಿಸಿದ ತಂದೆ ಮಗುವನ್ನು ಹಿಡಿದು ವಾಹನದಿಂದ ದೂರ ಸರಿಯುತ್ತಾರೆ. ಕೆಲವು ಕ್ಷಣಗಳ ನಂತರ ಕೆಲವೇ ಕ್ಷಣಗಳಲ್ಲಿ ಸ್ಕೂಟರ್‌ನ ಬ್ಯಾಟರಿ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡು ಧಗಧಗನೆ ಉರಿಯಲಾರಂಭಿಸಿದೆ.
Viral News: ಮಿಚೆಲ್ ಒಬಾಮಾ ಹೊಸ ಫೋಟೋಶೂಟ್ ವೈರಲ್; ತೂಕ ಇಳಿಕೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆ
ಕೂಡಲೇ ಸ್ಥಳೀಯರು ನೀರು ಹಾಕಿ ಬೆಂಕಿಯನ್ನು ನಂದಿಸಿದ್ದರಿಂದ ದೊಡ್ಡ ಮಟ್ಟದ ಅನಾಹುತ ತಪ್ಪಿದೆ. ಅದೃಷ್ಟವಶಾತ್ ತಂದೆ ಹಾಗೂ ಮಗುವಿಗೆ ಯಾವುದ ಗಾಯಗಳಿಲ್ಲದೆ ಪಾರಾಗಿದ್ದಾರೆ. EV ಸ್ಕೂಟರ್ ಗೆ ಬೆಂಕಿ ತಗುಲಿರುವ ಘಟನೆ ಇದೇ ಮೊದಲಲ್ಲ ಕಳೆದ ಕೆಲವು ವರ್ಷಗಳಿಂದ ಪುಣೆ ಮತ್ತು ಬೆಂಗಳೂರಿನಲ್ಲಿ ಇದೇ ರೀತಿಯ ಘಟನೆಗಳು ವರದಿಯಾಗಿವೆ. ಸದ್ಯ ಈ ಘಟನೆಗಳು ಎಲೆಕ್ಟ್ರಿಕ್ ವಾಹನಗಳ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿದೆ.
ಸೋಲಾಪುರ ಘಟನೆಯ ಬಗ್ಗೆ ಓಲಾ ಎಲೆಕ್ಟ್ರಿಕ್ ಇನ್ನೂ ನಿರ್ದಿಷ್ಟ ಹೇಳಿಕೆಯನ್ನು ನೀಡಿಲ್ಲ. ಆದಾಗ್ಯೂ, ಕಂಪನಿಯು ತನ್ನ ಬ್ಯಾಟರಿಗಳು ಅತ್ಯಂತ ಸುರಕ್ಷಿತವಾಗಿದ್ದು ಗುಣಮಟ್ಟವನ್ನು ಹೊಂದಿವೆ ಎಂದು ಕಂಪನಿಯು ಈ ಹಿಂದೆ ಹೇಳಿಕೆ ನೀಡಿದೆ.