ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಿದ್ಯಾರ್ಥಿಗಳಂತೆ ಯೂನಿಫಾರ್ಮ್‌ ಧರಿಸಿ 50 ವರ್ಷಗಳ ನಂತರ ಶಾಲೆಗೆ ಮರಳಿದ ಗೆಳೆಯರು; ರೀ ಯೂನಿಯನ್‌ ವಿಡಿಯೊ ವೈರಲ್‌

Viral News: ಸುಮಾರು ಐವತ್ತು ವರ್ಷಗಳ ನಂತರ ಶಾಲಾ ಬ್ಯಾಚ್‌ನ ಆಪ್ತ ಗೆಳೆಯರು ಭೇಟಿಯಾದ ದೃಶ್ಯವೊಂದು ಎಲ್ಲರ ಮನ ಗೆದ್ದಿದೆ. ​ಅರ್ಧ ಶತಮಾನದ ನಂತರ ಮತ್ತೆ ಒಂದಾದ 1976ರ ಶಾಲಾ ಬ್ಯಾಚ್‌ನ ಆಪ್ತ ಗೆಳೆಯರು ಶಾಲಾ ಆವರಣಕ್ಕೆ ಭೇಟಿ ನೀಡಿ, ಬಾಲ್ಯದ ಕ್ಷಣವನ್ನು ಮರುಸೃಷ್ಟಿಸಿದರು. ಸದ್ಯ ಈ ಭಾವನಾತ್ಮಕ ವಿಡಿಯೊ ಭಾರಿ ವೈರಲ್ ಆಗಿದೆ.

50 ವರ್ಷಗಳ ನಂತರ ಮತ್ತೆ ಸಮವಸ್ತ್ರ ಧರಿಸಿ ಶಾಲೆಗೆ ಬಂದ ಸ್ನೇಹಿತರು

ನವದೆಹಲಿ, ಸೆ. 20: ಪ್ರತಿಯೊಬ್ಬರಿಗೂ ಬಾಲ್ಯದ ನೆನಪು ಅನ್ನೋದು ಸದಾ ಕಾಡುತ್ತಿರುತ್ತದೆ.‌ ಶಾಲಾ ದಿನಗಳಲ್ಲಿ ಮಾಡಿದ ಮೋಜು, ಮಸ್ತಿ ಹೆಚ್ಚಿನವರಿಗೆ ಅವಿಸ್ಮರಣೀಯವಾಗಿರುತ್ತದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಸುಮಾರು ಐವತ್ತು ವರ್ಷಗಳ ನಂತರ ಶಾಲಾ ಬ್ಯಾಚ್‌ನ ಆಪ್ತ ಗೆಳೆಯರು ಭೇಟಿಯಾದ ದೃಶ್ಯವೊಂದು ಎಲ್ಲರ ಮನ ಗೆದ್ದಿದೆ. ​ಅರ್ಧ ಶತಮಾನದ ನಂತರ ಮತ್ತೆ ಒಂದಾದ 1976ರ ಶಾಲಾ ಬ್ಯಾಚ್‌ನ ಆಪ್ತ ಗೆಳೆಯರು ಸಮವಸ್ತ್ರ ಧರಿಸಿ ಹಳೆಯ ಶಾಲಾ ಆವರಣಕ್ಕೆ ಭೇಟಿ ನೀಡಿ, ಬಾಲ್ಯದ ಕ್ಷಣವನ್ನು ಮರುಸೃಷ್ಟಿಸಿದ್ದಾರೆ. ಸದ್ಯ ಈ ಭಾವನಾತ್ಮಕ ವಿಡಿಯೊ ಭಾರಿ ವೈರಲ್ (Viral News) ಆಗಿದೆ.

1976ರ ಬ್ಯಾಚ್‌ನ ಸ್ನೇಹಿತರ ಗುಂಪಿನ ಶಾಲಾ ಪುನರ್ಮಿಲನ ಕಾರ್ಯಕ್ರಮವಾಗಿ ಆರಂಭವಾದದ್ದು ಬಾಲ್ಯಕ್ಕೆ ಮರಳುವ ಒಂದು ಭಾವುಕ ಪಯಣವಾಗಿ ಬದಲಾಯಿತು. ಶಾಲಾ ದಿನಗಳನ್ನು ಮುಗಿಸಿ ದಶಕಗಳೇ ಕಳೆದಿದ್ದರೂ, ಈ ಸ್ನೇಹಿತರು ಅದೇ ಆವರಣಕ್ಕೆ ಮರಳಿದರು. ಈ ಬಾರಿ ಅವರು ಶಾಲಾ ಮಕ್ಕಳಂತೆ ಸಮವಸ್ತ್ರ ಧರಿಸಿ, ಬೆನ್ನಿಗೊಂದು ಬ್ಯಾಗ್ ಮತ್ತು ಬಣ್ಣಬಣ್ಣದ ನೀರಿನ ಬಾಟಲಿಗಳನ್ನು ಹಿಡಿದುಕೊಂಡು ಬಂದಿದ್ದರು.

ವಿಡಿಯೊ ನೋಡಿ:



ಬೆನ್ನಿಗೊಂದು ಬ್ಯಾಗ್ ಮತ್ತು ಬಣ್ಣಬಣ್ಣದ ನೀರಿನ ಬಾಟಲಿಗಳನ್ನು ಹಿಡಿದು ಶಾಲಾ ಮಕ್ಕಳಂತೆ ಬಟ್ಟೆ ಧರಿಸಿದ್ದ ಅವರು, 'ಪಿಟ್ಟು' (ಏಳು ಕಲ್ಲುಗಳ ಆಟ) ಆಡಿದ್ದಾರೆ. ಅದರ ಜತೆ ಶಾಲಾ ಆವರಣದಲ್ಲಿ 'ರೈಲು' ನೃತ್ಯವನ್ನೂ ಮಾಡಿದ್ದು ರಾಕೇಶ್ ನಗರ್ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊ ಹಂಚಿಕೊಂಡಿದ್ದಾರೆ.

ಈ ಟ್ಯಾಕ್ಸಿಯಲ್ಲಿದೆ ಮಿನಿ ಮಾರ್ಟ್; ನೀವು ಪ್ರಯಾಣ ಮಾಡ್ತಾ ಉಚಿತ ಶಾಪಿಂಗ್‌ ಕೂಡ ಮಾಡಬಹುದು

ವೃದ್ಧಾಪ್ಯದಲ್ಲೂ ತಮ್ಮ ಬಾಲ್ಯದ ದಿನಗಳನ್ನು ಅನುಭವಿಸಲು ಅವರು ಶಾಲಾ ಸಮವಸ್ತ್ರ ಧರಿಸಿದ್ದರು. ಅದರಲ್ಲೂ ಬೆನ್ನಿಗೆ ಬ್ಯಾಗ್ ಹಾಕಿ, ಕುತ್ತಿಗೆಗೆ ಬಣ್ಣ ಬಣ್ಣದ ನೀರಿನ ಬಾಟಲಿಗಳನ್ನು ನೇತಾಡಿಸಿಕೊಂಡು ಶಾಲೆಗೆ ಆಗಮಿಸಿದ್ದು ಎಲ್ಲರ ಗಮನ ಸೆಳೆಯುವಂತಿತ್ತು.ಈ ಸುಂದರ ಕ್ಷಣಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದು ''1976ರ ಬ್ಯಾಚ್‌ನ ನನ್ನ ಬಾಲ್ಯದ ಸ್ನೇಹಿತರು” ಎಂಬ ಶೀರ್ಷಿಕೆಯೊಂದಿಗೆ ರಾಕೇಶ್ ನಗರ್ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಈ ವಿಡಿಯೊವನ್ನು ವೀಕ್ಷಿಸಿದ ಸಾವಿರಾರು ಜನರು ಭಾವುಕರಾಗಿದ್ದು, ತಮ್ಮ ಶಾಲಾ ದಿನಗಳಿಗೆ ಮರಳಿದ್ದಾರೆ. ಬಳಕೆದಾರರೊಬ್ಬರು, ʼʼಜೀವನದ ಅತಿ ದೊಡ್ಡ ಸಂಪತ್ತು ಎಂದರೆ ಬಾಲ್ಯʼʼ ಎಂದು ಬರೆದುಕೊಂಡಿದ್ದಾರೆ.