ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಧಮ್‌ ಮಾರೋ ಧಮ್:‌ ಐತಿಹಾಸಿಕ ಲೋಹಗಢ ಕೋಟೆಯಲ್ಲಿ ಧೂಮಪಾನ; ದೆಹಲಿ ಪ್ರವಾಸಿಗರನ್ನು ತರಾಟೆಗೆ ತಗೆದುಕೊಂಡ ಸ್ಥಳೀಯರು

Viral Video: ಐತಿಹಾಸಿಕ ಸ್ಥಳದಲ್ಲೇ ಪ್ರವಾಸಿಗರ ಗುಂಪೊಂದು ಧೂಮಪಾನ ಮಾಡಿದ್ದು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಮಹಾರಾಷ್ಟ್ರದ ಲೋಹಗಢ ಕೋಟೆಯಲ್ಲಿ ಈ ಘಟನೆ ನಡೆದಿದ್ದು, ಪ್ರವಾಸಿಗರ ನಾಗರಿಕ ಪ್ರಜ್ಞೆಯ ಬಗ್ಗೆ ನೆಟ್ಟಿಗರು ಕಿಡಿಕಾರಿದ್ದಾರೆ. ಧೂಮಪಾನ ನಿಷೇಧ ಎಂದು ತಿಳಿದಿದ್ದರೂ ಕ್ಯಾರೇ ಎನ್ನದೆ ಈ ಕೃತ್ಯ ಎಸಗಿದ್ದಾರೆ.

ಮಹಾರಾಷ್ಟ್ರದ ಲೋಹಗಢ ಕೋಟೆಯಲ್ಲಿ ಧೂಮಪಾನ ಮಾಡಿದ ಪ್ರವಾಸಿಗರು

ಮುಂಬೈ, ಜು. 30: ಪ್ರಸಿದ್ಧ ಐತಿಹಾಸಿಕ ಸ್ಥಳದಲ್ಲೇ ಪ್ರವಾಸಿಗರ ಗುಂಪೊಂದು ಧೂಮಪಾನ ಮಾಡಿದ್ದು, ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಮಹಾರಾಷ್ಟ್ರದ ಲೋಹಗಢ ಕೋಟೆಯಲ್ಲಿ ಈ ಘಟನೆ ನಡೆದಿದ್ದು ನಾಗರಿಕ ಪ್ರಜ್ಞೆಯ ಬಗ್ಗೆ ನೆಟ್ಟಿಗರು ಕಿಡಿಕಾರಿದ್ದಾರೆ. ಧೂಮಪಾನ ನಿಷೇಧ ಎಂದು ತಿಳಿದಿದ್ದರೂ ಕ್ಯಾರೇ ಎನ್ನದೆ ಈ ಕೃತ್ಯ ಎಸಗಿದ್ದಾರೆ. ಈ ಘಟನೆಯ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದೆ.

ಈ ಪ್ರವಾಸಿಗರು ದೆಹಲಿಯಿಂದ ಬಂದಿದ್ದರು ಎನ್ನಲಾಗಿದೆ. ಪ್ರವಾಸಿಗರು ಕೋಟೆಯ ಒಳಗಡೆ ಧೂಮಪಾನ ಮಾಡುತ್ತಿದ್ದಾಗ ಸ್ಥಳೀಯ ವ್ಯಕ್ತಿಯೊಬ್ಬರು ಅವರನ್ನು ತಡೆದು ಪ್ರಶ್ನಿಸಿದ್ದಾರೆ. ಈ ಕೋಟೆಯು ರಾಜ್ಯದ ಪುರಾತತ್ವ ಸಮೀಕ್ಷೆ (ASI) ಸಂರಕ್ಷಿತ ಪರಂಪರೆಯ ತಾಣಗಳಲ್ಲಿ ಒಂದಾಗಿದೆ. ಇಂತಹ ಪ್ರದೇಶದಲ್ಲಿ ತಂಬಾಕು ಉತ್ಪನ್ನಗಳು, ಮದ್ಯ ಮತ್ತು ಇತರ ಮಾದಕ ವಸ್ತುಗಳನ್ನು ಹೊಂದಿರುವುದು ಅಥವಾ ಸೇವಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಹಾಗಿದ್ದರೂ ಪ್ರವಾಸಿಗರ ಗುಂಪೊಂದು ನಿರ್ಲಕ್ಷ್ಯ ಎಸಗಿ ಧೂಮಪಾನ ಮಾಡಿದೆ.

ವಿಡಿಯೊ ನೋಡಿ:



ವೈರಲ್ ಆದ ದೃಶ್ಯದಲ್ಲಿ ಕೋಟೆಯೊಳಗೆ ಪ್ರವಾಸಿಗರು ಧೂಮಪಾನ ಮಾಡುತ್ತಿರುವುದನ್ನು ಕಂಡು ಸ್ಥಳೀಯರು ಅವರನ್ನು ಪ್ರಶ್ನಿಸುತ್ತಿರುವುದು ಕಂಡುಬಂದಿದೆ. ಧೂಮಪಾನದಿಂದ ಅಸಮಾಧಾನಗೊಂಡ ಸ್ಥಳೀಯ "ಇಲ್ಲಿ ಧೂಮಪಾನ ಮಾಡಲು ನಿಮಗೆ ಯಾರು ಹೇಳಿದರು?" ಎಂದು ಕೇಳಿದ್ದಾರೆ. ​ಇದಕ್ಕೆ ಉತ್ತರ ನೀಡಿದ ಪ್ರವಾಸಿಗರು "ಇಲ್ಲಿ ಧೂಮಪಾನ ನಿಷೇಧಿಸಲಾಗಿದೆ ಎಂಬ ಯಾವುದೇ ಮಾಹಿತಿ ಅಥವಾ ಫಲಕ ಇಲ್ಲ, ಹೀಗಾಗಿ ನಮಗೆ ಈ ನಿಯಮ ತಿಳಿದಿರಲಿಲ್ಲ" ಎಂದು ಸಮರ್ಥಿಸಿಕೊಂಡಿದ್ದಾರೆ.

ಪೊಲೀಸ್ ಠಾಣೆಯಲ್ಲೇ ಕಾನ್ಸ್‌ಟೇಬಲ್‌ಗಳ ರೊಮ್ಯಾನ್ಸ್‌

ಅಸಮಾಧಾನಗೊಂಡ ಸ್ಥಳೀಯ ವ್ಯಕ್ತಿ, ʼʼಇದಕ್ಕೆ ಮಾಹಿತಿ ಬೇಕಾಗಿಲ್ಲ. ನಿಮಗೆ ಕನಿಷ್ಠ ಜ್ಞಾನ ಇರಬೇಕು. ಈ ಕೋಟೆ ದೇವಸ್ಥಾನವಿದ್ದಂತೆʼʼ ಎಂದು ತರಾಟೆಗೆ ತೆಗೆದುಕೊಂಡರು. ಕೊನೆಯಲ್ಲಿ, ಕೋಟೆಯೊಳಗೆ ಇನ್ನು ಮುಂದೆ ಧೂಮಪಾನ ಮಾಡದಂತೆ ನೋಡಿಕೊಳ್ಳಲು ಸ್ಥಳೀಯರು ಅವರ ಸಿಗರೇಟ್ ಪ್ಯಾಕೆಟ್ ಅನ್ನು ತೆಗೆದುಕೊಂಡಿದ್ದಾರೆ. ಧೂಮಪಾನ ಮಾಡುವುದು ಕಂಡುಬಂದರೆ, ಪೊಲೀಸರಿಗೆ ದೂರು ನೀಡುವುದಾಗಿಯೂ ಎಚ್ಚರಿಸಿದ್ದಾರೆ.

ಈ ವಿಡಿಯೊ ಆನ್‌ಲೈನ್‌ನಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಐತಿಹಾಸಿಕ ಸ್ಮಾರಕವನ್ನು ರಕ್ಷಿಸಲು ಜವಾಬ್ದಾರಿ ವಹಿಸಿಕೊಂಡಿದ್ದಕ್ಕೆ ಅನೇಕರು ಸ್ಥಳೀಯ ವ್ಯಕ್ತಿಯನ್ನು ಹೊಗಳಿದ್ದಾರೆ. ಒಬ್ಬರು, ʼʼಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಕಾನೂನುಬಾಹಿರವಾಗಿರುವುದರಿಂದ ಅದಕ್ಕೆ ಪ್ರತ್ಯೇಕ ಬೋರ್ಡ್ ಬೇಕಾಗಿಲ್ಲʼʼ ಎಂದು ತಿಳಿಸಿದ್ದಾರೆ.