ಬೆಂಗಳೂರು,ಜು.15: ಸಿಲಿಕಾನ್ ಸಿಟಿ ಅಂದಾಗ ಇಲ್ಲಿನ ಜೀವನ ಶೈಲಿಗೆಯೇ ದುಪ್ಪಟ್ಟು ಹಣ ವಿಧಿಸಬೇಕಾಗುತ್ತದೆ. ಅದರಲ್ಲೂ ರೂಮ್ ಬಾಡಿಗೆ ಪಾವತಿ ಮಾಡುವುದು ಒಂದು ಸವಾಲಿನ ಕೆಲಸ ವಾಗಿದ್ದು ದುಡಿದ ಅರ್ಧ ಭಾಗದಷ್ಟು ಇದಕ್ಕೆ ಹಣ ವ್ಯಯಿಸಬೇಕಾಗುತ್ತದೆ. ಇದೀಗ ಬೆಂಗಳೂರಿನ ಯುವತಿಯೊಬ್ಬಳು ಬಾಡಿಗೆ ಮನೆಯ ಮಾಲೀಕ ಡೆಪಾಸಿಟ್ ಹಣ ವಾಪಸ್ಸು ನೀಡಿಲ್ಲವೆಂದು ಆಕ್ರೋಶ ಹೊರಹಾಕಿದ ಪೋಸ್ಟ್ ವೊಂದು ವೈರಲ್ (Viral News) ಆಗಿದೆ. ಮನೆ ಬಾಡಿಗೆ ಪಡೆಯುವಾಗ 'ಸೆಕ್ಯೂರಿಟಿ ಡೆಪಾಸಿಟ್' ಅಂದ್ರೆ ಮುಂಗಡ ಹಣ ಪ್ರತಿಯೊಬ್ಬರು ನೀಡುತ್ತಾರೆ.ಆದರೆ ಇದನ್ನು ವಾಪಸ್ ಪಡೆಯುವುದು ಒಂದು ಸವಾಲಿನ ಕೆಲಸವಾಗಿದ್ದು ಯುವತಿ ಇದೇ ವಿಚಾರವಾಗಿ ಬೇಸರಹೊರಹಾಕಿದ್ದಾಳೆ.
ಬೆಂಗಳೂರಿನ ಬಾಡಿಗೆ ಮನೆಯ ಮಾಲೀಕರು 70,000 ಭದ್ರತಾ ಠೇವಣಿಯಲ್ಲಿ ಕೇವಲ 18,000 ಮಾತ್ರ ಹಿಂದಿರುಗಿಸಿದ್ದಾರೆ ಎಂದು ಯುವತಿ ಹೇಳಿಕೊಂಡಿದ್ದಾಳೆ. ಪೋಸ್ಟ್ ಪ್ರಕಾರ, ಮಹಿಳೆ ಕೆಲಸಕ್ಕಾಗಿ ಬೆಂಗಳೂರಿಗೆ ತೆರಳಿದ್ದಾಗ ಇಬ್ಬರು ಸ್ನೇಹಿತರೊಂದಿಗೆ 3BHK ಅಪಾರ್ಟ್ಮೆಂಟ್ ಅನ್ನು ಬಾಡಿಗೆಗೆ ಪಡೆದಿದ್ದರು. ಮೂವರು ಒಟ್ಟಾಗಿ ಸೇರಿ 2.10 ಲಕ್ಷ ಭದ್ರತಾ ಠೇವಣಿ ಪಾವತಿಸಿದರು, ಅಂದರೆ ಪ್ರತಿಯೊಬ್ಬರು 70,000 ಮೊತ್ತವನ್ನು ನೀಡಿದ್ದಾರೆ.
ಆದರೆ ಕೆಲವೇ ತಿಂಗಳುಗಳು ಕಳೆದ ನಂತರ, ಮನೆ ಮಾಲೀಕ ಮನೆ ಮಾರಾಟ ಮಾಡುವುದಾಗಿ ತಿಳಿಸಿದ್ದು ಖಾಲಿ ಮಾಡಲು ತಿಳಿಸಿದ್ದಾನೆ. ಆದರೆ ಮನೆ ಖಾಲಿ ಮಾಡುವಾಗ ಯುವತಿ ಕೇವಲ 18,000 ಮಾತ್ರ ಡೆಪಾಸಿಟ್ ಹಣ ಪಡೆದಿದ್ದು, ಅವರ ಠೇವಣಿಯ ಪಾಲಿನಿಂದ ಸುಮಾರು 52,000 ಕಡಿತಗೊಳಿಸಲಾಗಿದೆ.
ಕಡಿತಗಳ ಬಗ್ಗೆ ಪ್ರಶ್ನಿಸಿದಾಗ, ಮನೆ ಮಾಲೀಕರು ಪೇಂಟಿಂಗ್ ಶುಲ್ಕ, ದುರಸ್ತಿ ವೆಚ್ಚ ಮತ್ತು ಒಂದು ತಿಂಗಳ ಬಾಡಿಗೆಗೆ ಮೊತ್ತವನ್ನು ಸರಿಹೊಂದಿಸಲಾಗಿದೆ. ಮತ್ತೊಬ್ಬ ಬಾಡಿಗೆದಾರರು ಸಿಗುವವರೆಗೆ ಫ್ಲಾಟ್ ಖಾಲಿಯಾಗಿರುತ್ತದೆ ಎಂದು ಹೇಳಿ ಕೊಂಡಿದ್ದಾರೆ. ಇದರ ಬಗ್ಗೆ ಯುವತಿ ವಾಟ್ಸಾಪ್‌ನಲ್ಲಿ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿ, ವಿವರಣೆ ಕೇಳುತ್ತಿದ್ದಂತೆ ಮನೆ ಮಾಲೀಕ ನಂಬರ್ ಅನ್ನೇ ಬ್ಲಾಕ್ ಮಾಡಿದ್ದಾನೆ. ಸದ್ಯ ಬೇರೆ ದಾರಿಯಿಲ್ಲದೆ ಯುವತಿ ಮಾಲೀಕನಿಗೆ ಲೀಗಲ್ ನೋಟಿಸ್ ಕಳುಹಿಸಿದ್ದು ಕೋರ್ಟ್ ಮೆಟ್ಟಿಲೇರಲು ಸಿದ್ಧತೆ ನಡೆಸಿದ್ದಾಳೆ.
ಸದ್ಯ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬಳಕೆದಾರರು, "ನಾನು ಬೆಂಗಳೂರಿನಲ್ಲಿದ್ದೆ ಎಲ್ಲಾ ಮನೆ ಮಾಲೀಕರು ವಂಚನೆಗಳಲ್ಲಿ ಮೊದಲಿಗರು,ಹಾಗಾಗಿ ಮನೆಗೆ ಕಾಲಿಡುವ ಮೊದಲೇ ಮನೆಯ ಮೂಲೆ ಮೂಲೆಗಳ ವಸ್ತುಗಳನ್ನು ರೆಕಾರ್ಡ್ ಮಾಡಿಟ್ಟುಕೊಳ್ಳಿ ಅಂದರು. ಮತ್ತೊಬ್ಬರು ಇಷ್ಟೊಂದು ಹಣ ವಸೂಲಿ ಮಾಡುವುದೇ? ಎಂದು ಕಿಡಿಕಾರಿದ್ದಾರೆ.