ಮುಂಬೈ, ಸೆ. 8: ಬಾಡಿಗೆ ಮನೆ ಅಂತ ಬಂದಾಗ ಕೆಲವೊಂದು ನಿಯಮಗಳು ಇರೋದು ಸಾಮಾನ್ಯ. ಮಾಲಕರು ಮತ್ತು ಬಾಡಿಗೆದಾರರ ನಡುವೆ ಲಿಖಿತ ಕರಾರು ಪತ್ರ ಕಡ್ಡಾಯ, ಮನೆಯ ವಸ್ತುಗಳನ್ನು ಬಾಡಿಗೆದಾರರೇ ಕಾಪಾಡಿಕೊಳ್ಳಬೇಕು ಹೀಗೆ ಹಲವು ರೂಲ್ಸ್‌ಗಳಿವೆ. ಆದರೆ ಇಲ್ಲೊಬ್ಬ ಬಾಡಿಗೆ ಮನೆಯ ಮಾಲಕ ಅನುಮತಿ ಇಲ್ಲದೆ ಯುವತಿಯರಿರುವ ಲಿವಿಂಗ್ ರೂಮ್‌ನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ. ಈ ಬಗ್ಗೆ ಯುವತಿಯರ ಗುಂಪೊಂದು ದೂರಿದ ಘಟನೆ (Viral News) ನಡೆದಿದೆ. ಮನೆಯನ್ನು ಬಾಡಿಗೆಗೆ ನೀಡಿ ತಮ್ಮ ಖಾಸಗಿತನಕ್ಕೆ ಧಕ್ಕೆ ತಂದಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಮುಂಬೈಯಲ್ಲಿ ಯುವತಿಯರ ಬಾಡಿಗೆ ಮನೆಗೆ ಪೂರ್ವಾನುಮತಿ ಪಡೆಯದೆ ಮಾಲಕ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ ಎಂದು ಆರೋಪಿಸಿರುವ ಸೋಷಿಯಲ್ ಮೀಡಿಯಾ ಪೋಸ್ಟ್ ವೈರಲ್ ಆಗಿದೆ. ಸದ್ಯ ಈ ಘಟನೆ ಬಾಡಿಗೆದಾರರ ಗೌಪ್ಯತೆ ಮತ್ತು ಸುರಕ್ಷತೆಯ ಬಗ್ಗೆ ಚರ್ಚೆಗೆ ಕಾರಣವಾಗಿದೆ.
ವೈರಲ್ ರೆಡ್ಡಿಟ್ ಪೋಸ್ಟ್:
Landlord installed a camera inside the living room, without asking. 7 Girls in a 3BHK.
by u/OkVehicle2991 in mumbai
ಮುಂಬೈಯ 3BHK ಫ್ಲ್ಯಾಟ್ ಒಂದರಲ್ಲಿ ಏಳು ಯುವತಿಯರು ವಾಸಿಸುತ್ತಿದ್ದಾರೆ. ಒಂದು ದಿನ ಬೆಳಗ್ಗೆ ದಿಢೀರನೆ ಬಂದ ಮನೆ ಮಾಲಕ, ಲಿವಿಂಗ್ ರೂಮ್‌ನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿರುವುದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಹೊರಗಡೆ ಬರುವಾಗ ಸರಿಯಾಗಿ ಬಟ್ಟೆ ಧರಿಸಿ ಎಂದು ಉಡಾಫೆಯಾಗಿ ಮಾತನಾಡಿದ್ದಾರೆ.
ಮಾಜಿ ಶಾಸಕನ ದರ್ಪ; ಸ್ಕೂಟರ್ ಸವಾರನ ಹೆಲ್ಮೆಟ್ ಕಿತ್ತು ನೆಲಕ್ಕೆ ಎಸೆದ ರಾಜ್‌ಕುಮಾರ್ ಪಾಟೀಲ್
ಯುವತಿಯರು ಇದನ್ನು ಪ್ರಶ್ನಿಸಿದಾಗ, "ಇದು ಪೊಲೀಸರ ನಿಯಮ" ಎಂದು ಹೇಳಿದ್ದಾರೆ. ಕೋಣೆಯಲ್ಲಿ ಅಧ್ಯಯನ ಮಾಡಲು ಅಥವಾ ಊಟ ಮಾಡಲು ಸೂಕ್ತ ಟೇಬಲ್ ಇಲ್ಲದ ಕಾರಣ ಯುವತಿಯರು ಲಿವಿಂಗ್ ರೂಮ್ ಅನ್ನೇ ಬಳಸುತ್ತಿದ್ದರು. ಮಾಲಕನ ಈ ನಡವಳಿಕೆಯಿಂದ ಯುವತಿಯರು ತೀವ್ರ ಮುಜುಗರಕ್ಕೆ ಒಳಗಾಗಿರುವ ಬಗ್ಗೆ ಬೇಸರ ಹೊರಹಾಕಿದ್ದಾರೆ.
ಕ್ಯಾಮೆರಾವನ್ನು ಮನೆಯ ಒಳಗಡೆ ಹಾಕುವ ಬದಲು ಗೇಟ್ ಅಥವಾ ಮನೆಯ ಹೊರಗೆ ಕ್ಯಾಾಳವಡಿಸುವಂತೆ ಸೂಚಿಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಆದರೆ ಮಾಲಕ ಆ ಆಯ್ಕೆಯನ್ನು ಅನುಸರಿಸಲು ಹಿಂಜರಿದಿದ್ದಾರೆ. "ಸುರಕ್ಷತೆಯ ನೆಪದಲ್ಲಿ ಖಾಸಗಿತನವನ್ನು ಕಸಿದುಕೊಳ್ಳುವುದು ಎಷ್ಟು ಸರಿ?" ಎಂದು ಯುವತಿಯರು ಪೋಸ್ಟ್ನಲ್ಲಿ ಪ್ರಶ್ನಿಸಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅನೇಕ ನೆಟ್ಟಿಗರು ಮಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ.