ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Fact Check: ಭಾರತದ ರಫೇಲ್ ಜೆಟ್‌ಗಳನ್ನು ಪಾಕಿಸ್ತಾನ ನಾಶಪಡಿಸಿದೆ ಎಂದ ಪ್ರಧಾನಿ ಮೋದಿ; ವಿಡಿಯೊ ಅಸಲಿಯತ್ತೇನು?

ಪಾಕಿಸ್ತಾನವು ಭಾರತದ ರಫೇಲ್ ಜೆಟ್‌ಗಳನ್ನು ನಾಶ ಪಡಿಸಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿರುವ ವಿಡಿಯೊಗಳು ಪಾಕಿಸ್ತಾನದ ಪ್ರಚಾರ ಖಾತೆಗಳಲ್ಲಿ ಹಂಚಿಕೊಳ್ಳಲಾಗಿದ್ದು, ಇದು ಡೀಪ್ ಫೇಕ್ ವಿಡಿಯೊ ಎಂದು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ ಹೇಳಿದೆ. ಈ ವಿಡಿಯೊದಲ್ಲಿ ಫ್ರಾನ್ಸ್‌ನ ಪ್ರಧಾನಿ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಪ್ರಧಾನಿ ಮೋದಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿ ಮಾತನಾಡುತ್ತಿರುವುದನ್ನು ಕಾಣಬಹುದು.

ಸಂಗ್ರಹ ಚಿತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಫ್ರಾನ್ಸ್‌ನ ಪ್ರಧಾನಿ ಎಮ್ಯಾನುಯೆಲ್ ಮ್ಯಾಕ್ರನ್ (French Prime Minister Emmanuel Macron) ಅವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿ, ಭಾರತದ ರಫೇಲ್ ಜೆಟ್‌ಗಳನ್ನು (Rafale jets) ಪಾಕಿಸ್ತಾನ (pakistan) ನಾಶಪಡಿಸಿದೆ ಎಂದು ಹೇಳಿರುವ ವಿಡಿಯೊವೊಂದು (Viral video) ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದು ಡೀಪ್ ಫೇಕ್ ವಿಡಿಯೊ (deep fake video) ಎಂದು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PBI) ಹೇಳಿದೆ. ಪಾಕಿಸ್ತಾನದ ಪ್ರಚಾರ ಖಾತೆಗಳಲ್ಲಿ ಈ ವಿಡಿಯೊಗಳನ್ನು ಹಂಚಿಕೊಳ್ಳಲಾಗಿದೆ. ಇದೊಂದು ಸುಳ್ಳು ಸುದ್ದಿ. ಡಿಜಿಟಲ್ ಮೂಲಕ ಇದನ್ನು ತಯಾರಿ ಮಾಡಲಾಗಿದೆ. ಪಾಕಿಸ್ತಾನದ ತಪ್ಪು ಮಾಹಿತಿ ಅಭಿಯಾನದ ಭಾಗವಾಗಿದೆ ಎಂದು ಪಿಐಬಿ ಹೇಳಿದೆ.

ಪ್ರಧಾನಿ ನರೇಂದ್ರ ಮೋದಿಯವರ ವೈರಲ್ ವಿಡಿಯೊ ಡೀಪ್‌ಫೇಕ್ ಎಂದು ಪಿಬಿಐ ಹೇಳಿದೆ. ಫ್ರಾನ್ಸ್‌ ಪ್ರಧಾನಿ ಎಮ್ಯಾನುಯೆಲ್ ಮ್ಯಾಕ್ರನ್ ಜೊತೆಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನವು ಭಾರತದ ರಫೇಲ್ ಜೆಟ್‌ಗಳನ್ನು ನಾಶಪಡಿಸಿದೆ ಎಂದು ಹೇಳಿರುವುದು ಸುಳ್ಳು. ಇದನ್ನು ಕೃತಕ ಬುದ್ದಿ ಮತ್ತೆಯನ್ನು ಬಳಸಿ ಮಾಡಲಾಗಿದೆ. ಇದು ಪಾಕಿಸ್ತಾನದ ತಪ್ಪು ಮಾಹಿತಿ ಅಭಿಯಾನದ ಭಾಗವಾಗಿದೆ ಎಂದು ತಿಳಿಸಿದೆ.



ʼʼಆಗಬೇಕಾದ್ದು ಆಗೋಯ್ತುʼʼ: ಗೆಳತಿಯನ್ನು ಕೊಂದಿದ್ದೇಕೆ ಎಂದು ಪ್ರಶ್ನಿಸಿದಾಗ ಪ್ರಾಯಶ್ಚಿತವೇ ಇಲ್ಲದೆ ನಕ್ಕ ಯುವಕನ ಮನಸ್ಥಿತಿಗೆ ಬೆಚ್ಚಿಬಿದ್ದ ದೇಶ

ಪ್ರಧಾನಿ ನರೇಂದ್ರ ಮೋದಿ ಅವರ ಡೀಪ್ ಫೇಕ್ ವಿಡಿಯೊವನ್ನು ಪಾಕಿಸ್ತಾನ ಪ್ರಚಾರ ಖಾತೆಗಳು ಆನ್‌ಲೈನ್‌ನಲ್ಲಿ ಪ್ರಸಾರ ಮಾಡುತ್ತಿವೆ. ಇದರಲ್ಲಿ ಪಾಕಿಸ್ತಾನ ಭಾರತದ ರಫೇಲ್ ಜೆಟ್‌ಗಳನ್ನು ನಾಶಪಡಿಸಿದೆ ಎಂದು ಸುಳ್ಳು ಹೇಳಲಾಗಿದೆ. ಇದು ಸಾರ್ವಜನಿಕರನ್ನು ದಾರಿತಪ್ಪಿಸಲು ಮಾಡಿರುವ ತಂತ್ರ. ಇಂತಹ ವಿಡಿಯೊಗಳನ್ನು ಉದ್ದೇಶಪೂರ್ವಕವಾಗಿ ಪ್ರಸಾರ ಮಾಡಲಾಗುತ್ತಿದೆ ಎಂದು ಪಿಐಬಿ ತಿಳಿಸಿದೆ.

ಉಡುಪಿಯಲ್ಲಿ ಪಾದಚಾರಿಗೆ ಡಿಕ್ಕಿ ಹೊಡೆದು ಮೈಮೇಲೆ ಹರಿದ ಕ್ರೇನ್; ಬೆಚ್ಚಿಬೀಳಿಸುವ ವಿಡಿಯೊ ಇಲ್ಲಿದೆ

ಇಂತಹ ವಿಡಿಯೊಗಳು ಕಂಡು ಬಂದರೆ ತಕ್ಷಣ ವರದಿ ಮಾಡುವಂತೆ ಪಿಬಿಐ ಸೂಚಿಸಿದೆ. ಕಳೆದ ವಾರದ ಆರಂಭದಲ್ಲಿ ಆಧಾರ್ ಕಾರ್ಡ್‌ ಹೊಂದಿರುವವರಿಗೆ ಮಾಸಿಕ 50,000 ರೂ.ಗಿಂತ ಕಡಿಮೆ ಆದಾಯ ಹೊಂದಿರುವ ಮಹಿಳೆಯರಿಗೆ ಕೇಂದ್ರ ಸರ್ಕಾರವು ಉಚಿತ ಸ್ಕೂಟರ್‌ಗಳನ್ನು ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿರುವ ನಕಲಿ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಕೃತಕ ಬುದ್ದಿ ಮತ್ತೆ ಬಳಸಿ ಮಾಡಿರುವ ಈ ವಿಡಿಯೊ ನಕಲಿ ಎಂದು ಪಿಐಬಿಯ ಸತ್ಯ-ಪರಿಶೀಲನಾ ಘಟಕವು ಸ್ಪಷ್ಟಪಡಿಸಿತ್ತು.

ವಿದ್ಯಾ ಇರ್ವತ್ತೂರು

View all posts by this author