Viral Video: ವೀಸಾ ಇಲ್ಲದೇ ಭಾರತಕ್ಕೆ ಬಂದಿಳಿದ ಪಾಕಿಸ್ತಾನಿ ಉದ್ಯಮಿ; ಏನಿದು ವಿಡಿಯೊ...?
ಪಾಕಿಸ್ತಾನದ ಉದ್ಯಮಿ ವಕಾಸ್ ಹಸನ್ ಪಾಕಿಸ್ತಾನಿ ಪಾಸ್‌ಪೋರ್ಟ್ ಹೊಂದಿದ್ದು, ಆದರೆ ವೀಸಾ ಇಲ್ಲದೇ ಇಂಡಿಗೋ ವಿಮಾನದಲ್ಲಿ ಭಾರತಕ್ಕೆ ಬಂದಿದ್ದಾನೆ. ಈ ಬಗ್ಗೆ ವಿಡಿಯೊ ಮಾಡಿ ಆತ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ತಿಳಿಸಿದ್ದು, ಇದು ಅನೇಕರನ್ನು ಅಚ್ಚರಿಗೊಳಿಸಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಹಾಗಾದ್ರೆ ವೀಸಾ ಇಲ್ಲದೇ ಆತ ಹೇಗೆ ಭಾರತಕ್ಕೆ ಬಂದ? ಎಂಬ ಮಾಹಿತಿ ಇಲ್ಲಿದೆ ನೋಡಿ.


ಮುಂಬೈ: ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಪಾಸ್‍ಪೋರ್ಟ್ ಹೊಂದಿದ್ದರೂ, ವೀಸಾ ಇಲ್ಲದೇ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹೋಗಲು ಸಾಧ್ಯವಿಲ್ಲ. ಅದರಲ್ಲೂ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷಗಳು ಮತ್ತು ಭದ್ರತಾ ಸಮಸ್ಯೆಗಳಿಂದಾಗಿ ಪಾಕಿಸ್ತಾನಿ ನಾಗರಿಕರಿಗೆ ವೀಸಾ ಅರ್ಜಿ ಸಲ್ಲಿಸುವ ಕಾರ್ಯವಿಧಾನ ತುಂಬಾ ಕಠಿಣವಾಗಿದೆ. ಹಾಗಾಗಿ ಎರಡು ರಾಷ್ಟ್ರಗಳ ನಡುವೆ ವಿಮಾನ ಪ್ರಯಾಣವು ಅಸಾಮಾನ್ಯವಾಗಿದೆ. ಹೀಗಿರುವಾಗ ಪಾಕಿಸ್ತಾನದ ಉದ್ಯಮಿಯೊಬ್ಬ ಇಂಡಿಗೋ ವಿಮಾನದಲ್ಲಿ ಭಾರತಕ್ಕೆ ಬಂದಿದ್ದಾನೆ. ಈ ಬಗ್ಗೆ ವಿಡಿಯೊ ಮಾಡಿ ಆತ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ತಿಳಿಸಿದ್ದು, ಇದು ಅನೇಕರನ್ನು ಅಚ್ಚರಿಗೊಳಿಸಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ಪಾಕಿಸ್ತಾನದ ಉದ್ಯಮಿ ವಕಾಸ್ ಹಸನ್ ಇಂಡಿಗೊ ವಿಮಾನದಲ್ಲಿ ಭಾರತಕ್ಕೆ ಪ್ರಯಾಣಿಸುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾನೆ. ಪಾಕಿಸ್ತಾನಿ ಪಾಸ್‌ಪೋರ್ಟ್ ಹೊಂದಿರುವವರು ವೀಸಾ ಇಲ್ಲದೆ ವಿಮಾನದ ಮೂಲಕ ಭಾರತಕ್ಕೆ ಪ್ರಯಾಣಿಸಬಹುದು ಎಂದು ಇತ ಹೇಳಿದ್ದು, ಈಗ ಈ ವಿಡಿಯೊ ಎಲ್ಲೆಡೆ ವೈರಲ್ ಆಗಿದೆ. ಆದರೀಗ ಆತ ಇದರ ನಿಜಾಂಶವನ್ನು ಇಲ್ಲಿ ಬಹಿರಂಗಪಡಿಸಿದ್ದಾನೆ. ಸಿಂಗಾಪುರದಿಂದ ಸೌದಿ ಅರೇಬಿಯಾಕ್ಕೆ ಬರುವ ವೇಳೆ ಮುಂಬೈನಲ್ಲಿ ಆರು ಗಂಟೆಗಳ ಲೇಓವರ್ ಇರುತ್ತದೆ. ಆ ಸಮಯದಲ್ಲಿ ಹಸನ್ ಅಲ್ಲಿ ಇಳಿದು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ. ಹಾಗೂ ವಿಡಿಯೊದಲ್ಲಿ ಪಾಕಿಸ್ತಾನಿ ಪ್ರಯಾಣಿಕರು ಅಂತಹ ಲೇಓವರ್‌ಗಳಲ್ಲಿ ಮಾತ್ರ ವಿಮಾನ ನಿಲ್ದಾಣದಲ್ಲಿ ಉಳಿಯಬಹುದು ಎಂದು ಹೇಳಿದ್ದಾನೆ.
ಪಾಕಿಸ್ತಾನದ ಉದ್ಯಮಿ ವಕಾಸ್ ಹಸನ್ ವಿಡಿಯೊ ಇಲ್ಲಿದೆ ನೋಡಿ
ಮುಂಬೈ ವಿಮಾನ ನಿಲ್ದಾಣದಲ್ಲಿದ್ದಾಗ, ಹಸನ್ ಅಲ್ಲಿನ ಸೌಲಭ್ಯಗಳನ್ನು ಪಡೆದುಕೊಂಡಿದ್ದಾನಂತೆ ಹಾಗೇ ಸ್ಥಳೀಯ ತಿಂಡಿಯಾದ ವಡಾ ಪಾವ್ ಅನ್ನು ತಿಂದು ಖುಷಿ ವ್ಯಕ್ತಪಡಿಸಿದ್ದಾನೆ. ಹಾಗೇ ಭಾರತೀಯ ವಿಮಾನಯಾನ ಸಂಸ್ಥೆಯಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಪ್ರಯಾಣದ ವೆಚ್ಚ ಕಡಿಮೆ ಇರುವುದರಿಂದ ಅದನ್ನು ಆಯ್ಕೆ ಮಾಡಿಕೊಂಡಿರುವುದಾಗಿ ಕೂಡ ಹೇಳಿದ್ದಾನೆ.
ಈ ಸುದ್ದಿಯನ್ನೂ ಓದಿ:Pakistan Spy Arrest: ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡುತ್ತಿದ್ದ ವ್ಯಕ್ತಿ ಬೆಂಗಳೂರಿನಲ್ಲಿ ಬಂಧನ
ಹಸನ್ ಮಾಡಿದ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದಕ್ಕೆ ಅನೇಕರು ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವು ನೆಟ್ಟಿಗರು ಭಾರತ ಮತ್ತು ಪಾಕಿಸ್ತಾನದ ನಡುವಿನ ಪ್ರಯಾಣ ನಿರ್ಬಂಧಗಳ ಸಡಿಲಿಗೊಳಿಸುವ ಕ್ರಮವನ್ನು ಸ್ವಾಗತಿಸಿದ್ದಾರೆ, ಎರಡೂ ಕಡೆಯ ಜನರು ಪರಸ್ಪರ ಭೇಟಿ ನೀಡಲು ಸಾಧ್ಯವಾಗುತ್ತದೆ ಎಂಬ ನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ. ಆದರೆ ಇತರರು ಹೊರಗೆ ಕಾಲಿಡಲು ಸಹ ಅವಕಾಶ ನೀಡದ ದೇಶದ ವಿಮಾನ ನಿಲ್ದಾಣದಲ್ಲಿ ಇರಲು ಯಾರು ಇಷ್ಟಪಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.