ಬೆಂಗಳೂರು: ಪಾಕಿಸ್ತಾನದ ಪತ್ರಕರ್ತೆಯೊಬ್ಬರು (Pakistani journalist) ಭಾರತದ ಗಡಿ (Indian border) ದಾಟುವುದು ಸುಲಭ ಎಂದು ಹೇಳಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral video) ಆಗಿದ್ದು, ಇದಕ್ಕೆ ಅನೇಕ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಸೂರ್ ಬಳಿಯ ಗಂಡಾ ಸಿಂಗ್ ಬಳಿ (Ganda Singh Border) ಗಡಿ ದಾಟಿ ಸುಲಭವಾಗಿ ಭಾರತಕ್ಕೆ ಹೋಗಬಹುದು ಎಂದು ಪಾಕಿಸ್ತಾನ ಪತ್ರಕರ್ತೆ ಸನಾ ಖಾದಿರ್ ಹೇಳಿರುವ ವಿಡಿಯೋ ಇನ್‌ಸ್ಟಾಗ್ರಾಮ್ ನಲ್ಲಿ ಕಾಣಿಸಿಕೊಂಡಿದೆ. ಇದು ತಪ್ಪು ಮಾಹಿತಿ ಎಂದು ಹೇಳಿ ಅನೇಕ ನೆಟ್ಟಿಗರು ಆಕೆಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಸೂರ್‌ನ ಗಂಡಾ ಸಿಂಗ್ ಗಡಿಯ ಬಳಿ ಭಾರತಕ್ಕೆ ಸುಲಭವಾಗಿ ಹೋಗಿ ಬರುತ್ತೇನೆ ಎಂದು ಪಾಕಿಸ್ತಾನದ ಪತ್ರಕರ್ತೆ ಸನಾ ಖಾದಿರ್ ಹೇಳಿರುವ ವಿಡಿಯೋ ಇನ್‌ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿದೆ. ಇದು ಸಾಮಾಜಿಕ ಮಾಧ್ಯಮದಲ್ಲಿ ಕಳವಳವನ್ನು ಉಂಟು ಮಾಡಿತು. ಆದರೆ ಅನೇಕ ನೆಟ್ಟಿಗರು ಇದು ಸುಳ್ಳು ಮಾಹಿತಿ ಎಂದು ಹೇಳಿ ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸನಾ ಅವರು ಪಾಕಿಸ್ತಾನದೊಳಗೆ ಇದ್ದರು. ಅವರು ಭಾರತದ ಗಡಿ ಭಾಗದಿಂದ ತುಂಬಾ ದೂರವೇ ಉಳಿದಿದ್ದರು. ಅವರು ಸುಳ್ಳು ಸುದ್ದಿಯನ್ನು ಹರಡುತ್ತಿದ್ದಾರೆ ಎಂದು ನೆಟ್ಟಿಗರು ಹೇಳಿದ್ದಾರೆ.
ವಿಡಿಯೋದಲ್ಲಿ ಏನಿದೆ?
ತನಿಖಾ ಪತ್ರಕರ್ತೆ ಸನಾ ಖಾದಿರ್ ಅವರು ಪಾಕಿಸ್ತಾನದ ಕಸೂರ್ ಬಳಿಯ ಗಂಡಾ ಸಿಂಗ್ ಬಳಿ ತಾನು ಗಡಿ ದಾಟುತ್ತಿರುವುದಾಗಿ ಹೇಳಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಇದು ವೈರಲ್ ಆಗಿದ್ದು, ಇದರಲ್ಲಿ ಅವರು ತಾನು ತುಂಬಾ ಸುಲಭವಾಗಿ ಭಾರತಕ್ಕೆ ಕಾಲಿಟ್ಟಿರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೇ ಈ ವಿಡಿಯೋದಲ್ಲಿ ಅವರು ಭಾರತಕ್ಕೆ ಹೆಜ್ಜೆ ಹಾಕುವುದನ್ನು ತೋರಿಸಿದ್ದಾರೆ.
ಸನಾ ಖಾದಿರ್ ಅವರು ಎರಡೂ ರಾಷ್ಟ್ರಗಳ ಗಡಿಯಲ್ಲಿ ನಿಂತಿರುವುದಾಗಿ ಹೇಳಿದ್ದು, ಇಲ್ಲಿ ಕೆಲವೇ ಬಿದಿರು ಕಂಬಗಳು, ಬಟ್ಟೆಯ ದಾರವನ್ನು ಕಟ್ಟಿರುವುದನ್ನು ತೋರಿಸಲಾಗಿದೆ. ತಾನು ಭಾರತದ ಗಡಿಯಲ್ಲಿದ್ದೇನೆ ಎಂದು ಹೇಳಿರುವುದನ್ನು ಕಾಣಬಹುದು.
ಇದರಲ್ಲಿ ಅವರು ಪಾಕಿಸ್ತಾನವು ಹೆಚ್ಚು ಅಭಿವೃದ್ಧಿ ಹೊಂದಿದೆ. ಭಾರತದ ಗಡಿ ಭಾಗವು ಇನ್ನೂ ಅಭಿವೃದ್ಧಿ ಹಂತದಲ್ಲಿದೆ ಎಂದು ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಅನೇಕರು ಭಾರತದ ಗಡಿ ದಾಟುವುದು ಅಷ್ಟು ಸುಲಭವೇ ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಹಲವಾರು ಇದು ಸುಳ್ಳು ಸುದ್ದಿ. ಈ ವಿಡಿಯೋದಲ್ಲಿ ಅವರ ಹಿಂದೆ ಗಡಿ ದ್ವಾರವಿದೆ. ಅಂದರೆ ಅವರು ಪಾಕಿಸ್ತಾನದಲ್ಲಿ ನಿಂತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಅವರು ಭಾರತ ಮತ್ತು ಪಾಕಿಸ್ತಾನ ಗಡಿಯಿಂದ ಹಲವಾರು ಮೀಟರ್ ದೂರದಲ್ಲಿದ್ದಾರೆ. ಅವರು ತೋರಿಸಿರುವ ಗಡಿ ಮತ್ತು ನಿರ್ಮಾಣ ಸ್ಥಳ ಎರಡೂ ಪಾಕಿಸ್ತಾನದ ಒಳಗೆ ಇದೆ ಎಂದು ನೆಟ್ಟಿಗರು ಸ್ಪಷ್ಟನೆಯನ್ನು ಕೂಡ ನೀಡಿದ್ದಾರೆ.
ಸನಾ ಖಾದಿರ್ ಅವರು ಮೇ 9ರಂದು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಸುಮಾರು 5,000 ಕ್ಕೂ ಹೆಚ್ಚು ಲೈಕ್‌ಗಳು ಮತ್ತು 600 ಕ್ಕೂ ಹೆಚ್ಚು ಕಾಮೆಂಟ್‌ಗಳನ್ನು ಪಡೆದಿದೆ. ಸನಾ ಅವರು ಇನ್‌ಸ್ಟಾಗ್ರಾಮ್ ನಲ್ಲಿ 38,000ಕ್ಕೂ ಹೆಚ್ಚು ಫಾಲೋವರ್‌ಗಳನ್ನೂ ಹೊಂದಿದ್ದಾರೆ.