ನವದೆಹಲಿ, ಜು. 28: ಇತ್ತೀಚೆಗೆ ಸಾರ್ವಜನಿಕ ವಸ್ತುಗಳನ್ನು ತಮ್ಮದೇ ಆಸ್ತಿಯಂತೆ ಬಳಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಚಲಿಸುವ ರೈಲಿನ ಏಸಿ ಕೋಚ್ ಒಳಗೆ ಪ್ರಯಾಣಿಕನೊಬ್ಬ ದೀಪ, ಅಗರಬತ್ತಿ ಹಚ್ಚಿ ಪೂಜೆ ಮಾಡಿರುವ ದೃಶ್ಯವೊಂದು (Viral News) ಕಂಡುಬಂದಿದೆ. ಹವಾನಿಯಂತ್ರಿತ ಕೋಚ್ ಒಳಗೆ ಇಂತಹ ಅಪಾಯಕಾರಿ ವಸ್ತುಗಳನ್ನು ಬಳಸುವುದು ಸುರಕ್ಷತೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಈತನನ್ನು ಪ್ರಯಾಣದಿಂದಲೇ ನಿಷೇಧಿಸಬೇಕು ಎಂದು ನೆಟ್ಟಿಗರ ಆಗ್ರಹ ಕೇಳಿ ಬಂದಿದೆ.
ವ್ಯಕ್ತಿ ಕೋಚ್‌ನ ಮೇಲಿನ ಬರ್ತ್‌ನಲ್ಲಿ ಕುಳಿತು ಧೂಪದ್ರವ್ಯ ಮತ್ತು ಎಣ್ಣೆ ದೀಪವನ್ನು ಬೆಳಗಿಸುತ್ತಿರುವುದು ಕಂಡುಬಂದಿದೆ. ಇದನ್ನು ಕಂಡ ಸಹಪ್ರಯಾಣಿಕ ಇಲ್ಲಿ ಬೆಂಕಿ ಹಚ್ಚುವುದು ಅಪಾಯಕಾರಿ ಎಂದು ಮನವರಿಕೆ ಮಾಡಿದರೂ ನಿರ್ಲಕ್ಷಿಸಿ ದೀಪ ಮತ್ತು ಅಗರಬತ್ತಿಗಳನ್ನು ಹಚ್ಚಿದ್ದಾನೆ. ನೂರಾರು ಮಂದಿ ಪ್ರಯಾಣಿಸುವ ಸಾರ್ವಜನಿಕ ಸಾರಿಗೆಯೊಳಗೆ ಈ ರೀತಿ ಬೆಂಕಿ ಹಚ್ಚಿ ತನ್ನಿಷ್ಟದಂತೆ ನಡೆದುಕೊಳ್ಳುವುದು ಎಷ್ಟು ಸರಿ? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ವಿಡಿಯೊ ನೋಡಿ:
ಜಾರ್ಖಂಡ್ ರೈಲ್ವೆ ಎಂಬ ಪೇಜ್‌ನಲ್ಲಿ ಶೇರ್ ಮಾಡಿದ ವಿಡಿಯೊದಲ್ಲಿ ಬನಿಯನ್ ಹಾಗೂ ಪಂಚೆ ಹಾಕಿರುವ ವ್ಯಕ್ತಿ ಏಸಿ ಕೋಚ್‌ನ ಸೀಟಿನ ಮೇಲೆ ಕೈ ಮುಗಿಯುತ್ತಾ ಕುಳಿತಿರುವುದು ಕಂಡು ಬಂದಿದೆ. ನಂತರ ಸಾರ್ವಜನಿಕರ ಮುಂದೆಯೇ ದೀಪ ಹಾಗೂ ಅಗರಬತ್ತಿಗಳನ್ನು ಹಚ್ಚಿದ್ದಾನೆ. ಇದನ್ನು ಗಮನಿಸಿದ ಸಹ ಪ್ರಯಾಣಿಕ ವಿಡಿಯೊ ರೆಕಾರ್ಡ್ ಮಾಡುತ್ತಾ ಪಂಡಿತ್ ಜಿ ಎಂದು ಪದೇ ಪದೆ ಕರೆಯುವ ಮೂಲಕ ಅಪಾಯದ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದಾರೆ.
ʼʼನಂಗೂ ಅಡ್ಮಿಷನ್ ಕೊಡಿʼʼ; ಬಾಯ್ಸ್ ಹಾಸ್ಟೆಲ್ ಮೆಸ್‌ಗೆ ನುಗ್ಗಿದ ಮೊಸಳೆ
ಆದರೆ ಆ ಒಮ್ಮೆಯೂ ತಿರುಗದೆ ತನ್ನ ಪ್ರಾರ್ಥನೆಯಲ್ಲಿ ಮುಳುಗಿದ್ದ. ಆತನನ್ನು ಮತ್ತೊಮ್ಮೆ ಕರೆದು ಧೂಪ ದ್ರವ್ಯದ ಹೊಗೆ ಆಕಸ್ಮಿಕ ಬೆಂಕಿಗೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದ. ಆದರೆ ಪೂಜೆಯಲ್ಲಿ ಮುಳುಗಿದ್ದ ಆ ವ್ಯಕ್ತಿ ಮಾತ್ರ ಇವೆಲ್ಲದಕ್ಕೂ ಕಿವಿಗೊಡದೆ ತನ್ನ ಪಾಡಿಗೆ ತಾನು ಪೂಜೆ ಮುಂದುವರಿಸಿದ್ದಾನೆ. ನಂತರ ವಿಡಿಯೊ ಮಾಡಿದ ವ್ಯಕ್ತಿ ಪಕ್ಕದಲ್ಲಿದ್ದವರನ್ನು ಈತ ನಿಮ್ಮ ಜತೆ ಬಂದವನೇ ಎಂದು ಕೇಳಿದಾಗ ತನಗೂ ಈತನಿಗೂ ಸಂಬಂಧ ಇಲ್ಲ ಎಂದಿದ್ದಾರೆ.
ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ಸುರಕ್ಷತೆಯ ಬಗ್ಗೆ ತೀವ್ರ ಚರ್ಚೆ ಆರಂಭವಾಗಿದೆ ಒಬ್ಬರು, ʼʼಪ್ರತಿಯೊಬ್ಬರಿಗೂ ತಮ್ಮ ಧರ್ಮ, ನಂಬಿಕೆಯನ್ನು ಆಚರಿಸುವ ಹಕ್ಕಿದೆ. ಆದರೆ ಸಾರ್ವಜನಿಕರ ಜೀವಕ್ಕೆ ಕುತ್ತು ತರುವಷ್ಟು ಅಲ್ಲʼʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು, ʼʼರೈಲ್ವೆ ಇಲಾಖೆ ತಕ್ಷಣವೇ ಈತನನ್ನು ಗುರುತಿಸಿ ಕಠಿಣ ಕ್ರಮ ಕೈಗೊಳ್ಳಬೇಕುʼʼ ಎಂದು ಮನವಿ ಮಾಡಿದ್ದಾರೆ.