ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Viral Video: ಟಿಕೆಟ್ ರಹಿತವಾಗಿ ಪ್ರಯಾಣಿಸಲು ರೈಲಿನ ಶೌಚಾಲಯದಲ್ಲಿ ಕುಳಿತ ಪ್ರಯಾಣಿಕರು

ರೈಲಿನಲ್ಲಿ ಜನ ಸಾಗರವೇ ತುಂಬಿರುತ್ತದೆ. ಆದರೆ ಇದೀಗ ಕಾಯ್ದಿರಿಸಿದ ಬೋಗಿಯಲ್ಲೂ ಟಿಕೆಟ್ ರಹಿತವಾಗಿ ಪ್ರಯಾಣಿಸಿದವರ ವಿಡಿಯೊವೊಂದು ವೈರಲ್ ಆಗಿದೆ. ಟಿಕೆಟ್ ಪಡೆಯದ ಹಲವು ಪ್ರಯಾಣಿಕರು ಕಾಯ್ದಿರಿಸಿದ ಬೋಗಿಯೊಳಗೆ ಪ್ರವೇಶಿಸಿ ವಾಶ್ ರೂಮ್‌ಗಳ ಸುತ್ತಲಿನ ಜಾಗವನ್ನು ಆಕ್ರಮಿಸಿಕೊಂಡಿದ್ದಾರೆ. ಇದರಿಂದಾಗಿ ಉಳಿದ ಪ್ರಯಾಣಿಕರು ತೊಂದರೆ ಅನುಭವಿಸಿದರು ಎಂದು ವಿಡಿಯೊದಲ್ಲಿ ವಿವರಿಸಲಾಗಿದೆ.

ರೈಲಿನ ಶೌಚಾಲಯದಲ್ಲಿ ಕುಳಿತ ಪ್ರಯಾಣಿಕರು

ಪಾಟ್ನಾ, ಜೂ. 17: ಪ್ರಸ್ತುತ ರೈಲು ಪ್ರಯಾಣಕ್ಕೆ ಬಹುತೇಕರು ಆದ್ಯತೆ ನೀಡುತ್ತಾರೆ. ವೇಗವಾಗಿ ತಲುಪುವುದರ ಜತೆಗೆ ವೆಚ್ಚವು ಕಡಿಮೆ. ಹೀಗಾಗಿ ರೈಲಿನಲ್ಲಿ ಜನ ಸಾಗರವೇ ತುಂಬಿ ಹೋಗಿರುತ್ತದೆ. ಆದರೆ ಇದೀಗ ಇಷ್ಟೆಲ್ಲ ಜನರ ಮಧ್ಯೆಯೂ ಕಾಯ್ದಿರಿಸಿದ ಬೋಗಿಯಲ್ಲೂ ಟಿಕೆಟ್ ರಹಿತವಾಗಿ ಪ್ರಯಾಣಿಸಿದವರ ವಿಡಿಯೊವೊಂದು ವೈರಲ್ (Viral News) ಆಗಿದೆ. ಟಿಕೆಟ್ ಪಡೆಯದೆ ಹಲವು ಪ್ರಯಾಣಿಕರು ಕಾಯ್ದಿರಿಸಿದ ಬೋಗಿಯೊಳಗೆ ಪ್ರವೇಶಿಸಿ ವಾಶ್ ರೂಮ್‌ಗಳ ಸುತ್ತಲಿನ ಜಾಗವನ್ನು ಆಕ್ರಮಿಸಿಕೊಂಡಿದ್ದಾರೆ. ಇದರಿಂದ ಉಳಿದ ಪ್ರಯಾಣಿಕರಿಗೆ ಓಡಾಡಲು ಕಷ್ಟವಾಗುತ್ತಿತ್ತು ಎಂದು ವಿಡಿಯೊದಲ್ಲಿ ದೂರಲಾಗಿದೆ.

ಬಿಹಾರಕ್ಕೆ ಹೋಗುವ ರೈಲಿನಲ್ಲಿ ಈ ಘಟನೆ ಕಂಡು ಬಂದಿದೆ. ಸದ್ಯ ಈ ವಿಡಿಯೊವು ಭಾರತೀಯ ರೈಲ್ವೆಯಲ್ಲಿನ ಜನ ದಟ್ಟಣೆ ಮತ್ತು ಅನಧಿಕೃತ ಪ್ರಯಾಣದ ಬಗ್ಗೆ ಕಳವಳವನ್ನು ಹುಟ್ಟು ಹಾಕಿದೆ. ವಿಡಿಯೊವು ಪ್ರಯಾಣಿಕರೊಬ್ಬರು ಕಿಕ್ಕಿರಿದ ಕೋಚ್ ಮೂಲಕ ವಾಶ್ ರೂಮ್ ಕಡೆಗೆ ಸಾಗುವುದರೊಂದಿಗೆ ಪ್ರಾರಂಭವಾಗುತ್ತದೆ. ಶೌಚಾಲಯದ ಒಳಗೆ ಮತ್ತು ಸುತ್ತಲೂ ಹಲವರು ಕುಳಿತಿರುವುದು ಕಂಡು ಬಂದಿದೆ.

ವಿಡಿಯೊ ನೋಡಿ:



ʼʼರೈಲಿನ ಕಾಯ್ದಿರಿಸಿದ ಬೋಗಿಯ ಶೌಚಾಲಯವನ್ನು ಟಿಕೆಟ್ ರಹಿತ ಪ್ರಯಾಣಿಕರು ಆಕ್ರಮಿಸಿಕೊಂಡಿದ್ದಾರೆʼʼ ಎಂದು ಬರೆದುಕೊಂಡಿರುವ ಸರ್ಫರಾಜ್ ಜೈನ್ ಈ ವಿಡಿಯೊ ಶೇರ್ ಮಾಡಿದ್ದಾರೆ. ʼʼಕಾಯ್ದಿರಿಸಿದ ಬೋಗಿಯೊಳಗೆ ಬಂದ ಹಲವು ಅನಧಿಕೃತ ಪ್ರಯಾಣಿಕರು, ವಾಶ್‌ರೂಮ್ ಮತ್ತು ಶೌಚಾಲಯದ ಕಿರಿದಾದ ಜಾಗವನ್ನೇ ತಮ್ಮ ಆಸನವನ್ನಾಗಿ ಮಾಡಿಕೊಂಡಿದ್ದಾರೆʼʼ ಎಂದು ತಿಳಿಸಿದ್ದಾರೆ.

ನಾಯಿಯ ಪಾಲನೆಗೆ ತಿಂಗಳಿಗೆ 15,000 ರೂ. ಖರ್ಚು! ಬೆಂಗಳೂರಿನ ದಂಪತಿ ಶ್ವಾನ ಪ್ರೇಮ

ವಿಡಿಯೊ ರೆಕಾರ್ಡ್ ಮಾಡಿದ ವ್ಯಕ್ತಿಯು ಆ ಪ್ರದೇಶದಲ್ಲಿ ಕುಳಿತವರನ್ನು ಪ್ರಶ್ನಿಸಿದಾಗ ಅವರು ಯಾವುದೇ ಪಶ್ಚಾತಾಪವಿಲ್ಲದೆ ವರ್ತಿಸಿದ್ದಾರೆ. "ನಿಮಗೆ ನಿಜವಾಗಿಯೂ ಹೋಗಲು ಇದೆಯೇ?" ಎಂದು ಮರುಪ್ರಶ್ನಿಸಿ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ. ʼʼಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ. ದಯವಿಟ್ಟು ತಕ್ಷಣ ಆರ್‌ಪಿಎಫ್ ಕಳುಹಿಸಿ ಕ್ರಮ ಕೈಗೊಳ್ಳಿ" ಎಂದು ಸರ್ಫರಾಜ್ ಜೈನ್ ರೈಲ್ವೆ ಇಲಾಖೆಯನ್ನು ಟ್ಯಾಗ್ ಮಾಡಿದ್ದಾರೆ.

ಈ ವಿಡಿಯೊ ಆನ್‌ಲೈನ್‌ನಲ್ಲಿ ಟೀಕೆಗೆ ಗುರಿಯಾದಾಗ ಎಚ್ಚೆತ್ತ ಭಾರತೀಯ ರೈಲ್ವೆಯ ಅಧಿಕೃತ ಗ್ರಾಹಕ ಸೇವಾ ಖಾತೆಯಾದ 'ರೈಲ್ವೆ ಸೇವಾ' ತಕ್ಷಣವೇ ಪ್ರತಿಕ್ರಿಯೆ ನೀಡಿದೆ. ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಅನುಕೂಲವಾಗುವಂತೆ ರೈಲು ಸಂಖ್ಯೆ, ಪಿಎನ್‌ಆರ್ (PNR) ಮತ್ತು ಪ್ರಯಾಣಿಕರ ಸಂಪರ್ಕ ವಿವರಗಳನ್ನು ತಿಳಿಸಲು ಕೋರಿದೆ.