ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

'ಭಾರತೀಯರು ಮಾನಸಿಕವಾಗಿ ಬಡವರು’: ಬೆಂಗಳೂರಿನ ರೆಸ್ಟೊರೆಂಟ್‌ನಲ್ಲಿ ಫ್ರೀ ಊಟಕ್ಕೆ ಮುಗಿಬಿದ್ದ ಜನರ ವಿಡಿಯೋ ವೈರಲ್‌

Viral Video: ಬೆಂಗಳೂರಿನ ರೆಸ್ಟೋರೆಂಟ್ ವೊಂದರಲ್ಲಿ ಉಚಿತ ಆಹಾರದ ಆಫರ್ ನೀಡಿದ್ದಕ್ಕೆ ಜನ ತುಂಬಿಹೋಗಿರುವ ಘಟನೆಯೊಂದು ನಡೆದಿದೆ‌. ರೆಸ್ಟೋರೆಂಟ್‌ ನಲ್ಲಿ 'ಉಚಿತ ಆಹಾರ'ಕ್ಕಾಗಿ ಜನರು ದೀರ್ಘ ಸರತಿ ಸಾಲಿನಲ್ಲಿ ನಿಂತಿರುವ ವಿಡಿಯೊ ವೈರಲ್ ಆಗಿದೆ..

ಉಚಿತ ಆಹಾರಕ್ಕಾಗಿ ಬೆಂಗಳೂರಿನ ರೆಸ್ಟೊರೆಂಟ್ ನಲ್ಲಿ ಮುಗಿಬಿದ್ದ ಜನ

ಬೆಂಗಳೂರು,ಜು.3: ಸಾಮಾನ್ಯವಾಗಿ ಯಾವುದೇ ಬ್ರಾಂಡೆಡ್ ಕಂಪನಿಯಲ್ಲಿ ಬಟ್ಟೆ, ಅಥವಾ ಯಾವುದೇ ವಸ್ತುವಿಗೆ ಆಫರ್ ಬಿಟ್ಟಾಗ ಜನ ಮುಗಿದು ಬಿದ್ದು ಖರೀದಿ ಮಾಡುವುದನ್ನು ನೀವು ಗಮನಿಸರಬಹುದು‌. ಆದರೆ ಬೆಂಗಳೂರಿನ ರೆಸ್ಟೋರೆಂಟ್ ವೊಂದರಲ್ಲಿ ಉಚಿತ ಆಹಾರದ ಆಫರ್ ನೀಡಿದ್ದಕ್ಕೆ ಜನ ತುಂಬಿಹೋಗಿರುವ ಘಟನೆಯೊಂದು ನಡೆದಿದೆ‌. ರೆಸ್ಟೋರೆಂಟ್‌ ನಲ್ಲಿ 'ಉಚಿತ ಆಹಾರ'ಕ್ಕಾಗಿ ಜನರು ದೀರ್ಘ ಸರತಿ ಸಾಲಿನಲ್ಲಿ ನಿಂತಿರುವ ವಿಡಿಯೊ ವೈರಲ್ (Viral News) ಆಗಿದೆ.

ರೆಸ್ಟೋರೆಂಟ್‌ವೊಂದು ತಮ್ಮ ಔಟ್‌ಲೆಟ್‌ಗೆ ಭೇಟಿ ನೀಡುವ ಎಲ್ಲರಿಗೂ ಮೂರು ದಿನಗಳ ಉಚಿತ ಆಹಾರವನ್ನು ನೀಡುತ್ತಿದೆ ಎಂದು ಹಂಚಿಕೊಂಡಿತ್ತು‌. ಹೀಗಾಗಿ ಕಟ್ಟಡದ ಹೊರಗೆ ಜನರು ಭಾರಿ ಸಂಖ್ಯೆಯಲ್ಲಿ ಕಾಯುತ್ತಿದ್ದರು, ದಾರಿಹೋಕರು ಏನು ನಡೆಯುತ್ತಿದೆ ಎಂದು ಆಶ್ಚರ್ಯ ಪಡುತ್ತಿದ್ದರು‌. ಈ ಘಟನೆಯನ್ನು ಅಲ್ಲೇಹಾದುಹೋಗುವ ವ್ಯಕ್ತಿಯೊಬ್ಬರು ಘಟನೆಯನ್ನು ಸೆರೆಹಿಡಿದಿದ್ದಾರೆ.

ವಿಡಿಯೋ ನೋಡಿ:



ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡ ವ್ಯಕ್ತಿ ಆರ್ಥಿಕ ಬಡತನಕ್ಕಿಂತ ಭಾರತೀಯರು “ಮಾನಸಿಕವಾಗಿ ಬಡವರು “ಇಷ್ಟು ಉದ್ದವಾದ ಸಾಲು ಏಕೆ ಇದೆ ಎಂದು ಒಮ್ಮೆ ಊಹಿಸಿ ಎಂದು ಹೇಳಿದರು. ​ಬೆಂಗಳೂರಿನ ಖ್ಯಾತ 'ಬಾಬಾಯಿ ಟಿಫನ್ಸ್' ರೆಸ್ಟೋರೆಂಟ್‌ನ ಹೊಸ ಶಾಖೆ ಇತ್ತೀಚೆಗೆ ಆರಂಭ ವಾಗಿತ್ತು. ಇದನ್ನು ಪ್ರಚಾರ ಮಾಡುವುದಕ್ಕಾಗಿ ಜೂನ್ 29 ರಿಂದ ಜುಲೈ 1 ರವರೆಗೆ 3 ದಿನಗಳ ಕಾಲ ಗ್ರಾಹಕರಿಗೆ ಉಚಿತ ಆಹಾರದ ಆಫರ್ ನೀಡಲಾಗಿತ್ತು.

Viral Video: ಸ್ವಿಟ್ಜರ್‌ಲ್ಯಾಂಡ್‌ನ 7 ಲಕ್ಷ ರುಪಾಯಿ ಭಾರತದ 40 ಸಾವಿರ ರುಪಾಯಿಗೆ ಸಮ: ದುಬಾರಿ ಜೀವನದ ಬಗ್ಗೆ ವಿವರಿಸಿದ ದಂಪತಿ

ಜನರು ಉತ್ತಮ ಆಹಾರಕ್ಕಾಗಿ ಅಲ್ಲ, "ಉಚಿತ ಆಹಾರಕ್ಕಾಗಿ" ಸಾಲುಗಟ್ಟಿ ನಿಂತಿದ್ದಾರೆ ಎಂದು ಪೋಸ್ಟ್‌ನ ಶೀರ್ಷಿಕೆಯಲ್ಲಿ, ಅವರು ಬರೆದಿದ್ದಾರೆ, "ಭಾರತವು ವಿಚಿತ್ರ ದೇಶ, ಇಲ್ಲಿ ಜನರು ಆರ್ಥಿಕವಾಗಿ ಬಡವರಲ್ಲ ಆದರೆ ಮಾನಸಿಕವಾಗಿ ಬಡವರು. ಸಾಲಿನಲ್ಲಿ ನಿಂತಿರುವ ಅನೇಕ ಜನರು ಶ್ರೀಮಂತ ಕುಟುಂಬ ಗಳಿಂದ ಬಂದವರಂತೆ ಕಾಣುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ

​ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು ಇದು ನಮ್ಮ ಭಾರತದಲ್ಲಿ ಮಾತ್ರ ನಡೆಯುವುದಿಲ್ಲ, ಇಟಲಿ, ವಿಯೆಟ್ನಾಂ ಮತ್ತು ಇತರ ದೇಶಗಳಲ್ಲಿ ಜನಪ್ರಿಯ ತಿನಿಸುಗಳಿಗಾಗಿ ನಿಂತಿರುವ ಜನರನ್ನು ನಾನು ನೋಡಿದ್ದೇನೆ ಅಂದರು. ಇನ್ನೊಬ್ಬರು ಉಚಿತ ಎಂದಾಗ ಜನ ಎಷ್ಟು ಗಂಟೆಯೂ ಕಾಯಲು ಸಿದ್ದರಿದ್ದಾರೆ ಎಂದು ಬರೆದಿದ್ದಾರೆ..