ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರೈಲ್ವೆ ಸ್ಟೇಷನ್‌ನಂತಾದ ಬೆಂಗಳೂರು ವಿಮಾನ ನಿಲ್ದಾಣ; ಕಾಂಕ್ರೀಟ್ ಬೆಂಚ್‌ ಮೇಲೆ ಮಲಗಿದ ಪ್ರಯಾಣಿಕರು

Viral Video: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಆಧುನಿಕ ತಂತ್ರಜ್ಞಾನ ಒಳಗೊಂಡು ಎಲ್ಲರ ಗಮನ ಸೆಳೆಯುವ ತಾಣ. ಆದರೆ ಈಗ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 (T2) ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಇದು ''ರೈಲು ನಿಲ್ದಾಣವೋ ಅಥವಾ ರೈಲ್ವೆ ಸ್ಟೇಷನ್?" ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

ಬೆಂಗಳೂರು ವಿಮಾನ ನಿಲ್ದಾಣದ ಕಾಂಕ್ರಿಟ್‌ ಬೆಂಚ್‌ ಮೇಲೆ ಮಲಗಿದ ಪ್ರಯಾಣಿಕರು

ಬೆಂಗಳೂರು, ಜೂ. 17: ಇಂದು ಬಹುತೇಕರು ಅತೀ ವೇಗದ ಪ್ರಯಾಣಕ್ಕಾಗಿ ಫ್ಲೈಟ್ ಅನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಅದರಲ್ಲೂ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಅತ್ಯಂತ ಸುಂದರ ಹಾಗೂ ಎಲ್ಲರನ್ನು ಗಮನ ಸೆಳೆಯುವ ತಾಣ ಎನಿಸಿಕೊಂಡಿದೆ. ಆದರೆ ಇದೀಗ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 (T2) ಈಗ ಸೋಷಿಯಲ್ ಮೀಡಿಯಾದಲ್ಲಿ (Viral News) ಭಾರಿ ಚರ್ಚೆಗೆ ಕಾರಣವಾಗಿದೆ. ಇದು ರೈಲು ನಿಲ್ದಾಣವೋ ಅಥವಾ ರೈಲ್ವೆ ಸ್ಟೇಷನ್? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

ವಿಮಾನ ನಿಲ್ದಾಣದಲ್ಲಿ ಗಾರ್ಡನ್‌ನಲ್ಲಿ ಅಳವಡಿಸಿರುವ ಸಿಮೆಂಟ್ ಆಸನಗಳ ಮೇಲೆ ಪ್ರಯಾಣಿಕರು ಒಟ್ಟಾರೆಯಾಗಿ ಮಲಗಿರುವ ದೃಶ್ಯ ವೈರಲ್ ಆಗಿದೆ. "ಇದು ಏರ್‌ಪೋರ್ಟ್ ಅಥವಾ ರೈಲ್ವೆ ಸ್ಟೇಷನ್?" ಎನ್ನುವ ಗೊಂದಲ ನೆಟ್ಟಿಗರನ್ನು ಕಾಡಿದೆ. ವಿಡಿಯೊದ ಮೊದಲ ಕೆಲವು ಸೆಕೆಂಡುಗಳು ಹಚ್ಚ ಹಸಿರಿನ ಸಸ್ಯಗಳು, ಬಿದಿರು ಗಿಡಗಳು, ಕಾರಂಜಿಗಳು ಮತ್ತು ವಿಮಾನ ನಿಲ್ದಾಣಕ್ಕೆ ಪ್ರಶಾಂತ ಅನುಭವವನ್ನು ನೀಡುವ ಸ್ಥಳಗಳನ್ನು ಒಳಗೊಂಡ ಟರ್ಮಿನಲ್‌ನ ಸೌಂದರ್ಯವನ್ನು ಸೆರೆ ಹಿಡಿದಿವೆ.

ವಿಡಿಯೊ ನೋಡಿ:



ಮುಂದಿನ ದೃಶ್ಯದಲ್ಲೇ, ಏರ್‌ಪೋರ್ಟ್‌ನ ಡಿಪಾರ್ಚರ್ ವಲಯದ ಹೊರಗಿನ ಕಾಂಕ್ರೀಟ್ ಬೆಂಚ್‌ನ ಮೇಲೆ ಹಲವು ಪ್ರಯಾಣಿಕರು ಲಗೇಜ್ ಬ್ಯಾಗ್‌ಗಳನ್ನೇ ತಲೆದಿಂಬು ಮಾಡಿಕೊಂಡು ವಿಶ್ರಾಂತಿ ಪಡೆಯುತ್ತಿರುವುದು ಕಂಡು ಬಂದಿದೆ. ಕೆಲವರು ಮರಗಳ ನೆರಳಿನಲ್ಲಿ ಮಲಗಿರುವುದನ್ನು ಸಹ ಕಾಣಬಹುದು. “ನೀವು ಎಷ್ಟೇ ಅಂತಾರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣವನ್ನು ಆಕರ್ಷಿಕವಾಗಿ ನಿರ್ಮಿಸಿದರೂ, ನಾವು ಇನ್ನೂ ದೇಸಿಯಾಗಿಯೇ ನೋಡುತ್ತೇವೆ" ಎಂದು ಶೀರ್ಷಿಕೆ ನೀಡಿ ಈ ವಿಡಿಯೊ ಶೇರ್ ಮಾಡಲಾಗಿದೆ

ಶೆಡ್‌ನೊಂದಿಗೆ ಆಕಾಶಕ್ಕೆ ಹಾರಿದ ವ್ಯಕ್ತಿಯ ವಿಡಿಯೊ ವೈರಲ್‌

ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ನಡವಳಿಕೆ ಮತ್ತು ವಿಶ್ರಾಂತಿ ಸೌಲಭ್ಯಗಳ ಕೊರತೆಯ ಬಗ್ಗೆ ಇದೀಗ ಚರ್ಚೆ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೆಟ್ಟಿಗರೊಬ್ಬರು, ʼʼವಿಮಾನ ನಿಲ್ದಾಣಗಳು ಜನದಟ್ಟಣೆಯಿಂದ ಕೂಡಿರಬಹುದು. ಹೀಗಾಗಿವಿಶ್ರಾಂತಿ ಪಡೆಯುತ್ತಿದ್ದಾರೆʼʼ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು, ʼʼವಯಸ್ಸಾದವರು, ಅನಾರೋಗ್ಯ ಪೀಡಿತರು ಹೆಚ್ಚು ಸಮಯ ಕುಳಿತುಕೊಳ್ಳಲು ಸಾಧ್ಯವಿಲ್ಲ. ಇದರಿಂದ ಯಾವುದೇ ತಪ್ಪು ಇಲ್ಲʼʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ.