ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಶಾಲಾ ಬಾಲಕನ ಬೆನ್ನಟ್ಟಿದ ಸಾಕು ನಾಯಿಗಳು; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ!

Viral Video: ಗ್ವಾಲಿಯರ್‌ನ ಶತಾಬ್ದಿಪುರಂ ಕಾಲೋನಿಯಲ್ಲಿ ಸುಮಾರು ಒಂದು ಡಜನ್ ಸಾಕು ನಾಯಿಗಳು ಬಾಲಕನೊಬ್ಬನ ಮೇಲೆ ದಾಳಿ ನಡೆಸಿದೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಯಾಗಿದ್ದು ನೆಟ್ಟಿಗರು ಆತಂಕ ವ್ಯಕ್ತ ಪಡಿಸಿದ್ದಾರೆ. ಬಾಲಕನು ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದಾಗ ಡಿ-ಬ್ಲಾಕ್‌ನಲ್ಲಿ ಈ ಘಟನೆ ನಡೆದಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಬಾಲಕ ಪಾರಾಗಿದ್ದಾನೆ. ಸದ್ಯ ಈ ವಿಡಿಯೊ ಭಾರೀ ವೈರಲ್ ಆಗುತ್ತಿದೆ..

ಶಾಲಾ ಬಾಲಕನ ಬೆನ್ನಟ್ಟಿದ ಸಾಕು ನಾಯಿಗಳು

ಗ್ವಾಲಿಯರ್,ಡಿ‌. 9: ಇತ್ತೀಚೆಗೆ ಬೀದಿನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ವಿಶೇಷವಾಗಿ 2025ರಲ್ಲಿ ಲಕ್ಷಾಂತರ ನಾಯಿ ಕಡಿತ ಪ್ರಕರಣಗಳು ಮತ್ತು ರೇಬಿಸ್‌ನಿಂದ ಸಾವು- ನೋವುಗಳು ಕೂಡ ವರದಿ ಯಾಗಿವೆ. ಇದೀಗ ಗ್ವಾಲಿಯರ್‌ನ ಶತಾಬ್ದಿಪುರಂ ಕಾಲೋನಿಯಲ್ಲಿ ಸುಮಾರು ಒಂದು ಡಜನ್ ಸಾಕು ನಾಯಿಗಳು ಬಾಲಕನೊಬ್ಬನ ಮೇಲೆ ದಾಳಿ ನಡೆಸಿದೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಯಾಗಿದ್ದು ನೆಟ್ಟಿಗರು ಆತಂಕ ವ್ಯಕ್ತ ಪಡಿಸಿದ್ದಾರೆ. ಬಾಲಕನು ಶಾಲೆಯಿಂದ ಮನೆಗೆ ಹಿಂತಿರುಗುತ್ತಿ ದ್ದಾಗ ಡಿ-ಬ್ಲಾಕ್‌ನಲ್ಲಿ ಈ ಘಟನೆ ನಡೆದಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಬಾಲಕ ಪಾರಾಗಿದ್ದಾನೆ. ಸದ್ಯ ಈ ವಿಡಿಯೊ ಭಾರೀ ವೈರಲ್ (Viral Video) ಆಗುತ್ತಿದೆ

ಗ್ವಾಲಿಯರ್‌ನ ಶತಾಬ್ದಿಪುರಂ ಕಾಲೋನಿಯಲ್ಲಿ ಬಾಲಕನು ತನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದನು. ಈ ಸಂದರ್ಭದಲ್ಲಿ ನೆರೆಮನೆಯ ಮಹಿಳೆಯೊಬ್ಬರು ಸಾಕಿದ ಸುಮಾರು 12 ಸಾಕು ನಾಯಿಗಳು ಒಟ್ಟಾಗಿ ಬಾಲಕನನ್ನು ಬೆನ್ನಟ್ಟಿವೆ. ಗಾಬರಿಗೊಂಡ ಬಾಲಕ ತನ್ನ ಪ್ರಾಣ ಉಳಿಸಿ ಕೊಳ್ಳಲು ವೇಗವಾಗಿ ಓಡಿದ್ದಾನೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಭಯಭೀತನಾದ ಬಾಲಕನನ್ನು ನಾಯಿಗಳು ಬೆನ್ನಟ್ಟುತ್ತಿರುವ ದೃಶ್ಯ ನೋಡ ಬಹುದು. ಅದೃಷ್ಟವಶಾತ್, ಅವನು ಓಡಿಹೋಗುವ ಮೂಲಕ ತನ್ನನ್ನು ತಾನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾದ್ದಾನೆ.

ವಿಡಿಯೋ ನೋಡಿ:



ಮಾಹಿತಿಯ ಪ್ರಕಾರ, ನಾಯಿಗಳು ನೆರೆಹೊರೆಯಲ್ಲಿ ವಾಸಿಸುವ ಮಹಿಳೆಗೆ ಸೇರಿದ್ದು ಎಂದು ತಿಳಿದು ಬಂದಿದೆ. ಮಗುವಿನ ಕುಟುಂಬವು ಮಹಿಳೆಯನ್ನು ಪ್ರಶ್ನೆ ಮಾಡಿದಾಗ ಎರಡೂ ಕಡೆಯವರ ನಡುವೆ ವಾಗ್ವಾದ ನಡೆಯಿತು. ಈ ವಿಚಾರ ವಿಕೋಪಕ್ಕೆ ಹೋದಾಗ ಎರಡು ಕಡೆಯವರು ಮಹಾರಾಜಪುರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಈ ವಿಷಯವನ್ನು ತನಿಖೆ ಮಾಡಿದ್ದಾರೆ.

Viral Video: ಮರೆಯಾದ ಮಾನವೀಯತೆ! ರಸ್ತೆಬದಿಯಲ್ಲಿ ಬಿದ್ದಿದ್ದ ವ್ಯಕ್ತಿಯ ಶೂ ಕದ್ದ ಕಸ ಆಯುವ ವ್ಯಕ್ತಿ

ಬಳಿಕ ‌ಪರಸ್ಪರ ಮಾತುಕತೆಯ ಮೂಲಕ ಪ್ರಕರಣವನ್ನು ಪೊಲೀಸ್ ಠಾಣೆಯಲ್ಲೇ ಇತ್ಯರ್ಥ ಪಡಿಸಲಾಗಿದ್ದು, ಯಾವುದೇ ಕಾನೂನು ಕ್ರಮ ಕೈಗೊಳ್ಳದಿರಲು ನಿರ್ಧರಿಸಲಾಗಿದೆ. ಸದ್ಯ ಸಾಕು ನಾಯಿಗಳ ನೋಂದಣಿ ಕಡ್ಡಾಯವಾಗಿದ್ದರೂ, ಇಂತಹ ಘಟನೆಗಳು ಮರುಕಳಿಸುತ್ತಿರುವುದು ಸಾರ್ವಜನಿಕರಲ್ಲಿ ತೀರ ಆತಂಕ ಮೂಡಿಸಿದೆ.ಈ ಹಿಂದೆಯೂ ಸಾಕು ನಾಯಿಗಳು ದಾಳಿ ಮಾಡಿರುವ ಘಟನೆ ವರದಿಯಾಗಿದೆ.