ಇಂದೋರ್: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಅಥವಾ ಕಿರುಕುಳ ಪ್ರಕರಣಗಳು ಹೆಚ್ಚುತ್ತಿವೆ. ಇದೀಗ ವಿಕೃತ ಕಾಮಿಯೊಬ್ಬ ಮಹಿಳೆಯ ಮೃತದೇಹದ ಮೇಲೆ ಲೈಂಗಿಕ ದೌರ್ಜನ್ಯ (Physical Assault) ಎಸಗಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಕಳೆದ ವರ್ಷ ಏಪ್ರಿಲ್‌ನಲ್ಲಿ ನಡೆದಿದ್ದರೂ, ಈ ಹೇಯ ಕೃತ್ಯದ ಸಿಸಿಟಿವಿ ದೃಶ್ಯಾವಳಿಗಳು ಇತ್ತೀಚೆಗೆ ಪತ್ತೆಯಾಗಿವೆ. ವರದಿಗಳ ಪ್ರಕಾರ, ಮಹಿಳೆಯ ಶವವನ್ನು ಶವಾಗಾರದೊಳಗೆ ಇರಿಸಿದಾಗ, ಆರೋಪಿಯು ಆವರಣದ ಒಳನುಗ್ಗಿ, ಶವವನ್ನು ಯಾರ ಕಣ್ಣಿಗೂ ಬೀಳದಂತೆ ಎಳೆದುಕೊಂಡು ಹೋಗುವ ದೃಶ್ಯದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.
ಏಪ್ರಿಲ್ 18, 2024 ರಂದು, ಖಾಕ್ನಾರ್ ಸಮುದಾಯ ಆರೋಗ್ಯ ಕೇಂದ್ರದ ಅಡಿಯಲ್ಲಿ ಸರ್ಕಾರಿ ಸಂಯೋಜಿತ ಶವಾಗಾರಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ನುಗ್ಗಿದ್ದಾನೆ ಎಂದು ದೃಶ್ಯಾವಳಿಗಳು ಬಹಿರಂಗಪಡಿಸಿವೆ. ನಂತರ ಆತನನ್ನು ಭೌರಘಾಟ್ ಪ್ರದೇಶದ ತಂಗಿಯಪತ್ ಗ್ರಾಮದ 25 ವರ್ಷದ ನೀಲೇಶ್ ಭಿಲಾಲ ಎಂದು ಗುರುತಿಸಲಾಗಿದೆ. ಈಗ ಎಕ್ಸ್‌ನಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿರುವ ವಿಡಿಯೊದ ಪ್ರಕಾರ, ಆರೋಪಿಯು ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ನಿಗದಿಪಡಿಸಲಾಗಿದ್ದ ಸ್ಟ್ರೆಚರ್‌ನಿಂದ ಎಳೆದೊಯ್ದಿದ್ದಾನೆ.
ಶವವನ್ನು ಪಕ್ಕಕ್ಕೆ ತೆಗೆದುಕೊಂಡು ಹೋಗಿ ಸಿಸಿಟಿವಿಯಿಂದ ದೂರ ಸರಿದ ಆ ವ್ಯಕ್ತಿ ಮಹಿಳೆಯ ಶವದ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ನಂತರ, ಅವನು ಶವವನ್ನು ಸ್ಟ್ರೆಚರ್ ಬಳಿ ನೆಲದ ಮೇಲೆ ಎಳೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಈ ವರ್ಷ, ಅಕ್ಟೋಬರ್‌ನಲ್ಲಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ವೈದ್ಯಕೀಯ ಅಧಿಕಾರಿಯೊಬ್ಬರು. ಡಾ. ಆದಿಯಾ ದಾವರ್ ಸ್ಥಳೀಯ ಪೊಲೀಸ್ ಠಾಣೆಗೆ ದೂರು ದಾಖಲಿಸಿದರು. ನಂತರ, ಪೊಲೀಸರು ವಿಕೃತ ಕಾಮಿ ನೀಲೇಶ್ ಭಿಲಾಲನನ್ನು ಬಂಧಿಸಿದರು.
ವಿಡಿಯೊ ವೀಕ್ಷಿಸಿ:
ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಹಿಳೆಯ ದೇಹವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ವ್ಯಕ್ತಿಯನ್ನು ಬಂಧಿಸಲಾಗಿದೆ. ಏಪ್ರಿಲ್ 2024 ರ ಘಟನೆಯ ವಿಡಿಯೊಗಳು ವೈರಲ್ ಆದ ನಂತರ ಆಘಾತಕಾರಿ ಸುದ್ದಿ ಬಹಿರಂಗವಾಯಿತು. ಇದು ಸರ್ಕಾರಿ ಆರೋಗ್ಯ ಸೌಲಭ್ಯಗಳಲ್ಲಿನ ಭದ್ರತೆಯ ಸ್ಥಿತಿಯನ್ನು ಬಹಿರಂಗಪಡಿಸಿತು ಎಂದು ವಿಡಿಯೊವನ್ನು ಹಂಚಿಕೊಳ್ಳುತ್ತಾ ಶೀರ್ಷಿಕೆ ನೀಡಲಾಗಿದೆ.
ಇದನ್ನೂ ಓದಿ: Viral Video: ಶೋ ರೂಂ ಹೊರಗೇ ನಿಂತು ಓಲಾ ಸ್ಕೂಟರ್‌ಗೆ ಬೆಂಕಿ ಹಚ್ಚಿದ ಗ್ರಾಹಕ; ಅಷ್ಟಕ್ಕೂ ಆಗಿದ್ದೇನು?
ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು
ವರದಿಯ ಪ್ರಕಾರ, ಪೊಲೀಸರು ಆರೋಪಿಯ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆತನನ್ನು ನ್ಯಾಯಾಲಯಕ್ಕೂ ಹಾಜರುಪಡಿಸಲಾಗಿದೆ. ಸರಣಿ ವಿಚಾರಣೆಯ ನಂತರ ನೀಲೇಶ್ ಭಿಲಾಲನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಖಕ್ನಾರ್ ಪೊಲೀಸ್ ಠಾಣೆಯ ಉಸ್ತುವಾರಿ ಅಭಿಷೇಕ್ ಜಾಧವ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಆರೋಪಿಯು ಶವಾಗಾರಕ್ಕೆ ಹೇಗೆ ಪ್ರವೇಶ ಪಡೆದನು ಎಂಬುದನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಎಂದು ಮತ್ತೊಬ್ಬ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.