ಮುಂಬೈ, ಮಾ.17: ಉದ್ಯೋಗ ಅನ್ನೋದು ಪ್ರತಿಯೊಬ್ಬ ವ್ಯಕ್ತಿಗೂ ಅಗತ್ಯ. ಅದರಲ್ಲೂ ಶಿಕ್ಷಣ ಪಡೆದ ಅನೇಕರು ಇಂದು ಕಾರ್ಪೊರೇಟ್, ಐಟಿ ಉದ್ಯಮದತ್ತ ಆಸಕ್ತಿ ವಹಿಸುತ್ತಿದ್ದಾರೆ. ಆದರೆ ಇಂತಹ ಉದ್ಯಮಕ್ಕಿಂತ ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭ ಗಳಿಸಬಹುದು ಅನ್ನೋದಕ್ಕೆ ಈ ವ್ಯಕ್ತಿಯೇ ಸಾಕ್ಷಿಯಾಗಿದ್ದಾರೆ. ಮುಂಬೈ ನಿವಾಸಿ ಮತ್ತು ಪ್ಲಂಬರ್ ಕೆಲಸ ಮಾಡುವ ವ್ಯಕ್ತಿಯ ಸಂಭಾಷಣೆಯ ದೃಶ್ಯ ವೈರಲ್ (Viral News) ಆಗಿದ್ದು ಅವರು ಗಳಿಸುವ ಆದಾಯ ಕೇಳಿ ಜನರು ಶಾಕ್ ಆಗಿದ್ದಾರೆ.
ಮುಂಬೈ ವ್ಯಕಿಯೊರ್ವ ಪೈಪ್ ಲೈನ್ ದುರಸ್ತಿ ಮಾಡುವ ಯುವಕನ ಜೊತೆ ಕುತೂಹಲದಿಂದ ಆತನ ವಾರ್ಷಿಕ ಆದಾಯ ಗಳಿಕೆಯ ಬಗ್ಗೆ ಕೇಳಿದ್ದಾರೆ. ಆತ ತನ್ನ ಒಟ್ಟು ಆದಾಯ 18 ಲಕ್ಷ ರೂಪಾಯಿ ಎಂದಿದ್ದಾನೆ. ಪೈಪ್ ಲೈನ್ ದುರಸ್ತಿ ಮಾಡುವ ಕೆಲಸದವರು ಇಂದು ಇತರ ಕಾರ್ಪೊರೇಟ್ ಉದ್ಯೋಗಕ್ಕಿಂತ ಹೆಚ್ಚಿನ ಸಂಬಳ ಪಡೆದುಕೊಳ್ಳುತ್ತಿದ್ದಾರೆ. ಶ್ರಮ ಪಟ್ಟರೆ ಸಾಮಾನ್ಯ ಉದ್ಯೋಗದಲ್ಲೂ ಲಾಭಗಳಿಸಬಹುದು ಅನ್ನೋದಕ್ಕೆ ಇದೇ ಸಾಕ್ಷಿಯಾಗಿದೆ.
Viral News: ದಿನನಿತ್ಯ 3.5 ಕೆಜಿ ಚಿನ್ನ ಧರಿಸುವ ಗೋಲ್ಡ್ ಮ್ಯಾನ್ ಕನ್ಹಯ್ಯಾಲಾಲ್ ಖಾತಿಕ್ ಗೆ ಜೀವ ಬೆದರಿಕೆ!
ಆತ ಮೀರಾ ರೋಡ್, ಬೊರಿವಲಿ ಹೀಗೆ ಹಲವು ನಗರ ಪ್ರದೇಶದಲ್ಲಿ ಕೆಲಸ ಮಾಡುತ್ತಾನೆ. ಈ ಬಗ್ಗೆ ರೆಡ್ಡಿಟ್ ಪೋಸ್ಟ್ ಶೇರ್ ಮಾಡಿದ ವ್ಯಕ್ತಿಯೂ ಸಾಮಾನ್ಯವಾಗಿ ಒಂದು ವರ್ಷದಲ್ಲಿ ನೀವು ಎಷ್ಟು ಸಂಪಾದಿಸುತ್ತಾರೆ ಎಂದು ಕೇಳಿದ್ದಾರೆ. ಅವರು ಕೆಲಸ ಮಾಡುವ ಪಟ್ಟಣಗಳ ಎಲ್ಲಾ ಆದಾಯ ವನ್ನು ಒಟ್ಟುಗೂಡಿಸಿ, ಅವರು ಸುಮಾರು 18 ಲಕ್ಷ ಗಳಿಸುತ್ತಾರೆ ಎಂದು ಬಹಿರಂಗ ಪಡಿಸಿದ್ದಾರೆ. ಬಳಕೆದಾರರು ಆರಂಭದಲ್ಲಿ ಪ್ಲಂಬರ್ ತಮಾಷೆ ಮಾಡುತ್ತಿದ್ದಾನೆಂದು ಭಾವಿಸಿದ್ದರು, ಆದರೆ ಹೆಚ್ಚಿನ ವಿವರಗಳನ್ನು ಕೇಳಿದ ನಂತರ ನಿಜವೆಂದು ಅರಿತುಕೊಂಡಿದ್ದಾರೆ.
ಅಲ್ಲದೆ, ಈ ವ್ಯಕ್ತಿ ಹುಂಡೈ ಕ್ರೆಟಾ ಖರೀದಿ ಮಾಡಿದ್ದಾರೆ. ಹಳ್ಳಿಯಲ್ಲಿ ಮನೆ ಕಟ್ಟಿದ್ದು ಕೃಷಿಭೂಮಿಯನ್ನು ಸಹ ಖರೀದಿಸಿದ್ದಾರೆ. ಈ ಬಗ್ಗೆ ಪೋಸ್ಟ್ ಶೇರ್ ಮಾಡಿದ ವ್ಯಕ್ತಿಯೂ ಗೆಳೆಯ ಶ್ರೀಮಂತ ನಾಗಿದ್ದಾನೆ. ಈ ಸಮಯದಲ್ಲಿ ನಾನು ನನ್ನ ಜೀವನ ಆಯ್ಕೆಗಳ ಬಗ್ಗೆ ಯೋಚಿಸುತ್ತಿದ್ದೇನೆ ಎಂದು ಬರೆದಿದ್ದಾರೆ.
ಈ ಪೋಸ್ಟ್ ಅನ್ನು ಮಾರ್ಚ್ 15 ರಂದು ಹಂಚಿಕೊಳ್ಳಲಾಗಿದ್ದು ಅನೇಕ ಜನರು ಪ್ರತಿಕ್ರಿಯೆ ನೀಡಿದ್ದಾರೆ. ಹಲವಾರು ಬಳಕೆದಾರರು ಕೌಶಲ್ಯಪೂರ್ಣ, ಪ್ರಾಯೋಗಿಕ ಉದ್ಯೋಗಗಳಲ್ಲಿ ಇಂತಹ ಗಳಿಕೆ ಸಾಧ್ಯ ಎಂದು ಹೇಳಿದ್ದಾರೆ. ಪ್ಲಂಬರ್‌ಗಳು, ಎಲೆಕ್ಟ್ರಿಷಿಯನ್ ಗಳು,, ಮೆಕ್ಯಾನಿಕ್‌ಗಳಿಗೆ ಇಂದು ಬೇಡಿಕೆ ಹೆಚ್ಚಿದೆ ಯಾವ ಎಐ ಬಂದಿದ್ದರೂ ಇವರಿಗೆ ಕೆಲಸಕ್ಕೆ ಭಯ ಇಲ್ಲ ಎಂದು ಒಬ್ಬರು ಬರೆದುಕೊಂಡಿದ್ದಾರೆ.