ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Viral Video: ಪೊಲೀಸ್ ಬೈಕ್‌ನಲ್ಲಿ ರ‍್ಯಾಪಿಡೋ ಸೇವೆ? ಸರ್ಕಾರಿ ವಾಹನ ದುರುಪಯೋಗ ಪಡಿಸಿಕೊಂಡ ಸಬ್ ಇನ್ಸ್‌ಪೆಕ್ಟರ್‌ ವಿರುದ್ಧ ಕ್ರಮ

Police Bike Used For Rapido Ride: ತೆಲಂಗಾಣದ ವಾರಂಗಲ್‌ನಲ್ಲಿ ಪೊಲೀಸ್ ಇಲಾಖೆಯ ಪಟ್ರೋಲಿಂಗ್ ಬೈಕ್ ಅನ್ನು ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆಗೆ ಬಳಸಲಾಗಿದೆ ಎಂಬ ಆರೋಪ ಭಾರಿ ವಿವಾದಕ್ಕೆ ಕಾರಣವಾಗಿದೆ. ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸ್ ಇಲಾಖೆ ತನಿಖೆ ಆರಂಭಿಸಿದೆ. ಸಂಬಂಧಿತ ಸಬ್ ಇನ್ಸ್‌ಪೆಕ್ಟರ್ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗಿದೆ.

ತೆಲಂಗಾಣದಲ್ಲಿ ಸರ್ಕಾರಿ ಬೈಕ್‌ನಲ್ಲಿ ರ‍್ಯಾಪಿಡೋ ರೈಡ್

ಹೈದರಾಬಾದ್‌, ಆ. 5: ಪೊಲೀಸ್ ಇಲಾಖೆಯ ವಾಹನವನ್ನು (Police Vehicle) ಖಾಸಗಿ ರ‍್ಯಾಪಿಡೋ (Rapido) ಬೈಕ್ ಟ್ಯಾಕ್ಸಿ ಸೇವೆಗೆ ಬಳಸಲಾಗಿದೆ ಎಂಬ ಆರೋಪ ತೆಲಂಗಾಣದ ವಾರಂಗಲ್‌ನಲ್ಲಿ (Warangal) ಭಾರಿ ವಿವಾದಕ್ಕೆ ಕಾರಣವಾಗಿದೆ. ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗುತ್ತಿದ್ದಂತೆ ಪೊಲೀಸ್ ಇಲಾಖೆ ತನಿಖೆ ಆರಂಭಿಸಿದ್ದು, ಸಂಬಂಧಪಟ್ಟ ಸಬ್ ಇನ್ಸ್‌ಪೆಕ್ಟರ್ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗಿದೆ.

ಮಾಹಿತಿಯ ಪ್ರಕಾರ, ಒಬ್ಬ ಪ್ರಯಾಣಿಕ ಅಂಬೇಡ್ಕರ್ ಜಂಕ್ಷನ್‌ನಿಂದ ಸುಬೇದಾರಿವರೆಗೆ ಪ್ರಯಾಣಿಸಲು ರ‍್ಯಾಪಿಡೋ ಆ್ಯಪ್‌ನಲ್ಲಿ 26 ರುಪಾಯಿಗೆ ರೈಡ್ ಬೈಕ್ ಬುಕ್ ಮಾಡಿದ್ದರು. ಚಾಲಕ TS 09 PC 2795 ನೋಂದಣಿ ಸಂಖ್ಯೆಯ ಪೊಲೀಸ್ ಪೆಟ್ರೋಲಿಂಗ್ ಬೈಕ್‌ನಲ್ಲಿ ಆಗಮಿಸಿದ್ದನ್ನು ಕಂಡು ಪ್ರಯಾಣಿಕ ಅಚ್ಚರಿಗೊಂಡಿದ್ದಾರೆ.

ವೈರಲ್‌ ವಿಡಿಯೊ ಇಲ್ಲಿದೆ:



ಈ ಬಗ್ಗೆ ಪ್ರಶ್ನಿಸಿದಾಗ, ಬೈಕ್ ತನ್ನ ಪೊಲೀಸ್ ಕಾನ್ಸ್‌ಟೇಬಲ್ ಸ್ನೇಹಿತನಿಂದ ಪಡೆದಿರುವುದಾಗಿ ಚಾಲಕ ಹೇಳಿದ್ದಾನೆ ಎನ್ನಲಾಗಿದೆ. ಅನುಮಾನಗೊಂಡ ಪ್ರಯಾಣಿಕ ಸಂಪೂರ್ಣ ಸಂಭಾಷಣೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ವಿಡಿಯೋ ವೈರಲ್ ಆದ ಬಳಿಕ ಘಟನೆ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಬೈಕ್ ಎನುಮಾಮುಲ ಪೊಲೀಸ್ ಠಾಣೆಗೆ ಸೇರಿದ 'ಬ್ಲೂ ಕೋಲ್ಟ್' (Blue Colt) ಪೆಟ್ರೋಲಿಂಗ್ ವಾಹನ. ಇಂತಹ ವಾಹನಗಳನ್ನು ತುರ್ತು ಕರೆಗಳಿಗೆ ಸ್ಪಂದಿಸಲು, ಗಸ್ತು ತಿರುಗಲು ಹಾಗೂ ಅಪರಾಧ ಸ್ಥಳಗಳಿಗೆ ತ್ವರಿತವಾಗಿ ತಲುಪಲು ಪೊಲೀಸ್ ಇಲಾಖೆ ಬಳಸುತ್ತದೆ. ಹೀಗಿರುವಾಗ ಸರ್ಕಾರಿ ವಾಹನವನ್ನು ಖಾಸಗಿ ವಾಣಿಜ್ಯ ಉದ್ದೇಶಕ್ಕೆ ಬಳಸಿರುವ ಆರೋಪ ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ನ್ಯಾಯ ಸಿಕ್ಕಿಲ್ಲ ಎಂದು ಬೇಸತ್ತು ಪೊಲೀಸ್ ಠಾಣೆಯಲ್ಲೇ ವಿಷ ಸೇವಿಸಿದ ಯುವತಿ!

ಎನುಮಾಮುಲ ಸರ್ಕಲ್ ಇನ್ಸ್‌ಪೆಕ್ಟರ್ ಜೆ. ಸುರೇಶ್, ಈ ವಾಹನವನ್ನು ಎಸ್‌ಐ ಶಂಕರ್ ಅವರಿಗೆ ಕರ್ತವ್ಯಕ್ಕಾಗಿ ನೀಡಲಾಗಿತ್ತು ಎಂದು ದೃಢಪಡಿಸಿದ್ದಾರೆ. ಆದರೆ, ಗುವ್ವ ಸಿದ್ದಾರ್ಥ್ ಎಂಬ ವ್ಯಕ್ತಿ ಅದನ್ನು Rapido ಸೇವೆಗೆ ಬಳಸುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಘಟನೆಯ ಬಳಿಕ ಎಸ್‌ಐ ಶಂಕರ್ ಅವರಿಗೆ ಎಚ್ಚರಿಕೆ ನೀಡಲಾಗಿದ್ದು, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ವರದಿ ಸಿದ್ಧಪಡಿಸಿ ವಾರಂಗಲ್ ಪೊಲೀಸ್ ಆಯುಕ್ತರಿಗೆ ಕಳುಹಿಸಲಾಗಿದೆ. ಹಿರಿಯ ಅಧಿಕಾರಿಗಳು ವೈರಲ್ ವಿಡಿಯೊ ವಾಹನದ ದಾಖಲೆಗಳು ಹಾಗೂ ಇತರ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

ಈ ಘಟನೆ ಸರ್ಕಾರಿ ವಾಹನಗಳ ಸುರಕ್ಷಿತ ಬಳಕೆ, ಪೊಲೀಸ್ ಇಲಾಖೆಯ ಹೊಣೆಗಾರಿಕೆ ಹಾಗೂ ಸಾರ್ವಜನಿಕ ಆಸ್ತಿಯ ದುರುಪಯೋಗ ಕುರಿತು ಹಲವು ಪ್ರಶ್ನೆಗಳನ್ನು ಎಬ್ಬಿಸಿದೆ. ಈ ಪ್ರಕರಣದಲ್ಲಿ ಯಾರಾದರೂ ಪೊಲೀಸ್ ಸಿಬ್ಬಂದಿ ಉದ್ದೇಶಪೂರ್ವಕವಾಗಿ ವಾಹನವನ್ನು ಖಾಸಗಿ ಬಳಕೆಗೆ ನೀಡಿದ್ದಾರೆಯೇ ಎಂಬುದರ ಬಗ್ಗೆಯೂ ಸಮಗ್ರ ತನಿಖೆ ನಡೆಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.