ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇಡೀ ಕೆಫೆಯನ್ನೇ ಧ್ವಂಸಗೊಳಿಸಿದ ಪೊಲೀಸ್ ಸಬ್-ಇನ್ಸ್‌ಪೆಕ್ಟರ್: ಅಧಿಕಾರಿಯ ವರ್ತನೆಗೆ ನೆಟ್ಟಿಗರು ಕಿಡಿ!

Viral Video: ಪೋಲೀಸ್ ಅಧಿಕಾರಿಯೊಬ್ಬ ಕೆಫೆಯೊಂದಕ್ಕೆ ನುಗ್ಗಿ ಗ್ರಾಹಕರ ಮೇಲೆ ದರ್ಪ ತೋರಿಸಿ ದ್ದಾನೆ. ಕೆಫೆಯೊಂದಕ್ಕೆ ಇದ್ದಕ್ಕಿದ್ದಂತೆ ಪ್ರವೇಶಿಸಿ ಕೌಂಟರ್‌ನಲ್ಲಿ ಇರಿಸಲಾಗಿದ್ದ ಕನ್ನಡಕವನ್ನು ಒಡೆದು ಹಾಕಿದ್ದಾನೆ. ಅಷ್ಟೇ ಅಲ್ಲದೆ ಕೆಫೆಯ ಸಿಬ್ಬಂದಿಯನ್ನು ನಿಂದಿಸಿ ಗ್ರಾಹಕರನ್ನು ಬೆದರಿಸಿದ್ದಾನೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ..

ಕೆಫೆಗೆ ನುಗ್ಗಿ ದರ್ಪ ತೋರಿಸಿದ ಪೊಲೀಸ್ ಸಬ್-ಇನ್ಸ್‌ಪೆಕ್ಟರ್

ಪುಣೆ,ಜು.2: ಇತ್ತೀಚೆಗೆ ಕಾನೂನು ರಕ್ಷಣೆ ನೀಡುವ ಪೊಲೀಸರೇ ದುರಂಹಕಾರದಿಂದ ವರ್ತಿಸಿದ ಅನೇಕ ಘಟನೆಗಳು ವರದಿಯಾಗಿವೆ. ಇದಕ್ಕೆ ಸಾಕ್ಷಿ ಎಂಬಂತೆ ಪೋಲೀಸ್ ಅಧಿಕಾರಿಯೊಬ್ಬ ಕೆಫೆಯೊಂದಕ್ಕೆ ನುಗ್ಗಿ ಗ್ರಾಹಕರ ಮೇಲೆ ದರ್ಪ ತೋರಿಸಿದ್ದಾನೆ. ಕೆಫೆಯೊಂದಕ್ಕೆ ಇದ್ದಕ್ಕಿದ್ದಂತೆ ಪ್ರವೇಶಿಸಿ ಕೌಂಟರ್‌ನಲ್ಲಿ ಇರಿಸಲಾಗಿದ್ದ ಕನ್ನಡಕವನ್ನು ಒಡೆದು ಹಾಕಿದ್ದಾನೆ. ಅಷ್ಟೇ ಅಲ್ಲದೆ ಕೆಫೆಯ ಸಿಬ್ಬಂದಿಯನ್ನು ನಿಂದಿಸಿ ಗ್ರಾಹಕರನ್ನು ಬೆದರಿಸಿದ್ದಾನೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ಗ್ರಾಹಕರು ಸೇರಿದ್ದ ಕೆಫೆಗೆ ಇದ್ದಕ್ಕಿದ್ದಂತೆ ಎಂಟ್ರಿ ನೀಡಿ ಪೊಲೀಸ್ ಅಧಿಕಾರಿ ಅತೀರೆಕದಿಂದ ವರ್ತಿಸಿದ್ದಾನೆ. ತಮಗೆ ಅಧಿಕಾರ ಇದೆ ಎಂದು ಈ ರೀತಿಯಾಗಿ ದುರುಪಯೋಗಪಡಿಸಿ ಕೊಳ್ಳು ತ್ತಿರುವುದು ತಪ್ಪು ಎಂದು ಅನೇಕರು ಕಿಡಿಕಾರಿದ್ದಾರೆ. ಸಿಸಿಟಿವಿ ದೃಶ್ಯಗಳಲ್ಲಿ ಕೆಫೆಯಲ್ಲಿ ಗ್ರಾಹಕರು ಮತ್ತು ಸಿಬ್ಬಂದಿಯನ್ನು ಬೆದರಿಸಿ ಅಲ್ಲಿದ್ದ ವಸ್ತುಗಳಿಗೆ ಹಾನಿ ಮಾಡಿರುವುದು ಸೆರೆಯಾಗಿದೆ.

ವಿಡಿಯೋ ನೋಡಿ:



ಅನೇಕರು ಸಬ್-ಇನ್ಸ್ಪೆಕ್ಟರ್ ನಡವಳಿಕೆಯನ್ನು ಪ್ರಶ್ನಿಸಿದ್ದು ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳ ಬೇಕೆಂದು ಒತ್ತಾಯಿಸಿದ್ದಾರೆ. ವೀಡಿಯೊದ ಪ್ರಕಾರ, ಜೂನ್ 7 ರಂದು ಬೆಳಿಗ್ಗೆ 1:48 ರ ಸುಮಾ ರಿಗೆ ಶಿರೋಲ್ ರಸ್ತೆಯಲ್ಲಿರುವ ಫ್ಲೈಯಿಂಗ್ ಜಿಪ್ಸಿ ಕೆಫೆಯಲ್ಲಿ ಈ ದೃಶ್ಯ ಕಂಡು ಬಂದಿದೆ.. ಸಬ್-ಇನ್ಸ್‌ಪೆಕ್ಟರ್ ಅನ್ನು ಸಂದೀಪ್ ಕದಮ್ ಎಂದು ಗುರುತಿಸಲಾಗಿದೆ.

Viral Video: ನೂರಾರು ಕೋತಿಗಳ ಆರೈಕೆ ಮಾಡುತ್ತಿರುವ 77ರ ವೃದ್ಧ ತಾಯಿ; ನಿವೃತ್ತ ಪೊಲೀಸ್ ಅಧಿಕಾರಿಯ ಪ್ರಾಣಿ ಪ್ರೇಮಕ್ಕೆ ನೆಟ್ಟಿಗರು ಫಿದಾ

ಕೆಫೆ ಮುಚ್ಚುವ ಸಮಯದಲ್ಲಿ ಸಬ್-ಇನ್ಸ್‌ಪೆಕ್ಟರ್ ಸಂದೀಪ್ ಕದಮ್ ಒಳಗೆ ನುಗ್ಗಿದ್ದಾರೆ. ಅಲ್ಲಿ ಗ್ರಾಹಕರು ಇರುವುದನ್ನು ಕಂಡು ಕೋಪಗೊಂಡು ತಮ್ಮ ಕೈಯಲ್ಲಿದ್ದ ಲಾಠಿಯಿಂದ ಕೌಂಟರ್ ಮೇಲಿದ್ದ ಕಾಫಿ ಗ್ಲಾಸ್‌ಗಳು ಬಡಿದು ಕೆಳಗೆ ಹಾಕಿದ್ದಾರೆ..ಅದೇ ಸಮಯದಲ್ಲಿ ಗ್ರಾಹಕರು ಮತ್ತು ಉದ್ಯೋಗಿಗಳನ್ನು ಹೊರ ಹೋಗುವಂತೆ ಆದೇಶಿಸಿದ್ದಾರೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದು, ಸಬ್- ಇನ್ಸ್‌ಪೆಕ್ಟರ್‌ನನ್ನು ಅಮಾನತುಗೊಳಿಸಲಾಗಿದೆ.

​ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದು ಬಳಕೆದಾರರೊಬ್ಬರು ದೇವರ ದಯೆಯಿಂದ ಇದು ಡ್ಯಾನ್ಸ್ ಬಾರ್ ಅಲ್ಲ, ಇದು ಕಾಫಿ ಶಾಪ್ ಎಂದು ಬರೆದಿದ್ದಾರೆ. ಮತ್ತೊಬ್ಬರು ಪೊಲೀಸರು ಅಂತಲ್ಲ, ನಮ್ಮ ಭಾರತದಲ್ಲಿ ಯಾರಿಗಾದರೂ ಅಧಿಕಾರ ಸಿಕ್ಕರೆ ಸಾಕು ತಕ್ಷಣಕ್ಕೆ ಅಹಂಕಾರದ ಕೊಬ್ಬು ಏರುತ್ತದೆ ಎಂದು ಬರೆದಿದ್ದಾರೆ. ಸದ್ಯ ಎಚ್ಚೆತ್ತ ಪುಣೆ ಹೆಚ್ಚುವರಿ ಪೊಲೀಸ್ ಕಮಿಷನರ್ ರಾಜೇಶ್ ಬನ್ಸೋಡೆ ಅವರು, ಸಬ್-ಇನ್ಸ್‌ಪೆಕ್ಟರ್ ಸಂದೀಪ್ ಕದಮ್ ಅವರ ವರ್ತನೆ ಕಂಡು ಅಮಾನತು ಗೊಳಿಸಿದ್ದಾರೆ.