ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕುಟ್ಟಿಪುರಂ ಬಳಿ ಖಾಸಗಿ ಬಸ್ ಅಪಘಾತ: ಓರ್ವ ಸಾವು, 26 ಮಂದಿಗೆ ಗಾಯ!

Viral Video: ಕೇರಳದ ಮಲಪ್ಪುರಂ ಜಿಲ್ಲೆಯ ಕುಟ್ಟಿಪ್ಪುರಂ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ‌. ಖಾಸಗಿ ಬಸ್ಸೊಂದು ನಿಯಂತ್ರಣ ತಪ್ಪಿ ಹಲವಾರು ವಾಹನ ಗಳಿಗೆ ಡಿಕ್ಕಿ ಹೊಡೆದು ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು 26 ಮಂದಿ ಗಾಯಗೊಂಡಿದ್ದಾರೆ‌.

ಕೇರಳದಲ್ಲಿ ಖಾಸಗಿ ಬಸ್ ಅಪಘಾತ

ಮಲಪ್ಪುರಂ,ಜು.27: : ಕೇರಳದ ಮಲಪ್ಪುರಂ ಜಿಲ್ಲೆಯ ಕುಟ್ಟಿಪ್ಪುರಂ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ‌. ಖಾಸಗಿ ಬಸ್ಸೊಂದು ನಿಯಂತ್ರಣ ತಪ್ಪಿ ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದು ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು 26 ಮಂದಿ ಗಾಯಗೊಂಡಿದ್ದಾರೆ‌. ಈ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಭಾರೀ ವೈರಲ್ (Viral News) ಆಗುತ್ತಿದೆ. ದೃಶ್ಯಾವಳಿಯಲ್ಲಿ ಬಸ್ ಹೆದ್ದಾರಿಯಲ್ಲಿ ವೇಗವಾಗಿ ಚಲಿಸುತ್ತಿದ್ದಾಗ ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿ ಉರುಳಿ ಬಿದ್ದಿರುವುದನ್ನು ಸೆರೆಹಿಡಿದಿದೆ.

ಭಾನುವಾರ ಬೆಳಿಗ್ಗೆ ಸುಮಾರು 11 ಗಂಟೆಗೆ ನಡೆದ ಈ ದುರಂತದಲ್ಲಿ ಒಬ್ಬರು ಸಾವನ್ನಪ್ಪಿದ್ದು, 26 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.'ಡಿಫೆಂಡರ್' ಹೆಸರಿನ ಖಾಸಗಿ ಬಸ್ ಕೋಝಿಕ್ಕೋಡ್ ನಿಂದ ತ್ರಿಶೂರ್ ಗೆ ಪ್ರಯಾಣಿಸುತ್ತಿದ್ದಾಗ ಕೈಲಾಶ್ ಆಡಿಟೋರಿಯಂ ಬಳಿ ಈ ದುರಂತ ಸಂಭವಿಸಿದೆ. ಬಸ್ ಹೆದ್ದಾರಿಯಲ್ಲಿ ವೇಗವಾಗಿ ಚಲಿಸುತ್ತಿದ್ದಂತೆ ಇದ್ದಕ್ಕಿದ್ದಂತೆ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಬಸ್ 25 ಮೀಟರ್‌ಗಿಂತಲೂ ಹೆಚ್ಚು ದೂರ ಸ್ಕಿಡ್ ಆಗಿ, ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದು ರಸ್ತೆಯ ಬದಿಗೆ ಉರುಳಿಕೊಂಡು ಹೋಗಿದೆ.

ವಿಡಿಯೋ ನೋಡಿ:



ಈ ವೇಳೆ ಬಸ್ ಸಂಪೂರ್ಣವಾಗಿ ಆಟೋರಿಕ್ಷಾವೊಂದನ್ನು ನಜ್ಜುಗುಜ್ಜು ಮಾಡಿದ್ದು ಈಗಾಗಲೇ ಅಪಘಾತಕ್ಕೀಡಾಗಿ ನಿಂತಿದ್ದ ಕಾರೊಂದರ ಮೇಲೆಯೂ ಡಿಕ್ಕಿ ಹೊಡೆದಿದೆ. ವೈರಲ್ ಆದ ದೃಶ್ಯದಲ್ಲಿ ಬಸ್ ಆಟೋರಿಕ್ಷಾವನ್ನು ಪುಡಿಪುಡಿ ಮಾಡಿ, ಕೊನೆಗೆ ಅಪಘಾತಕ್ಕೀಡಾಗಿದ್ದ ಕಾರಿನ ಮೇಲೆ ಡಿಕ್ಕಿ ಹೊಡೆಯುವುದನ್ನು ಕಾಣಬಹುದು. ಧೂಳು ಮತ್ತು ಹೊಗೆಯ ದಟ್ಟ ಸುತ್ತಲೂ ಆವರಿಸಿ ಕೊಂಡಿದೆ.

Viral Video: ಯೋಧ ಯಾವತ್ತಿದ್ದರೂ ಯೋಧನೇ; ಚಾರ್ಜ್‌ ಖಾಲಿಯಾದ ಮಹಿಳೆಯ ಎಲೆಕ್ಟ್ರಿಕ್‌ ಕಾರ್‌ ತಳ್ಳಿದ ಸೈನಿಕ

ಅಪಘಾತ ನಡೆದಾಗ ಪಕ್ಕದಲ್ಲಿ ಇದ್ದವರು ನೆರವಿಗೆ ಧಾವಿಸಿದ್ದಾರೆ‌. ಅಪಘಾತದ ನಂತರ ಪೊಲೀಸರು, ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಗಾಯಾಳುಗಳನ್ನು ತಕ್ಷಣವೇ ಕುಟ್ಟಿಪುರಂ, ವಲಂಚೇರಿ ಮತ್ತು ಕೊಟ್ಟಕ್ಕಲ್‌ನ ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ. ಅಪಘಾತ ಸಂಭವಿಸಿದಾಗ ಬಸ್ ಅತಿ ವೇಗದಲ್ಲಿ ಚಲಿಸುತ್ತಿತ್ತು ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಘಟನೆಯ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಕೇರಳದ ಸಾರಿಗೆ ಸಚಿವರು ಹೇಳಿದ್ದಾರೆ.