ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಾಹುಲ್ ಗಾಂಧಿಯನ್ನು ಟೀಕಿಸಲು ಹೋಗಿ ತಾನೇ ಟ್ರೋಲ್ ಆದ ಪ್ರಾಧ್ಯಾಪಕಿ: "ನೀವೇ ಮುರ್ಖರು" ಎಂದು ಕಾಲೆಳೆದ ನೆಟ್ಟಿಗರು!

Viral News: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಟೀಕಿಸಲು ಹೋಗಿ ತಾನೇ ಟ್ರೋಲ್ ಗೆ ಒಳಗಾದ ಘಟನೆಯೊಂದು ನಡೆದಿದೆ. ತಾವು ಪಶ್ಚಿಮ ಬಂಗಾಳದ ಸಹಾಯಕ ಪ್ರಾಧ್ಯಾಪಕಿ ಎಂದು ಹೇಳಿಕೊಂಡ ಅರ್ಪಿತಾ ಚಟರ್ಜಿ ಎಂಬವರು ತಮ್ಮ ಶೈಕ್ಷಣಿಕ ಅರ್ಹತೆಗಳನ್ನು ಹೈಲೈಟ್ ಮಾಡಿದ್ದು ರಾಹುಲ್ ಗಾಂಧಿಯ ಹೇಳಿಕೆಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಿದ್ದರು. ತಾನು ಉನ್ನತ ಮಟ್ಟದ ಶಿಕ್ಷಣ ಪಡೆದಿದ್ದೇನೆ ಎಂದು ಹೇಳಿಕೊಂಡರೂ ಈ ಸಣ್ಣ ಪೋಸ್ಟ್‌ ನಲ್ಲೇ ಬರೋಬ್ಬರಿ 6 ರಿಂದ 7 ಭೀಕರ ವ್ಯಾಕರಣ ತಪ್ಪುಗಳಿದ್ದವು‌.

ರಾಹುಲ್ ಗಾಂಧಿ ವಿರುದ್ಧ ಪೋಸ್ಟ್ ಶೇರ್ ಮಾಡಿ ಟ್ರೋಲ್ ಗೆ ಒಳಗಾದ ಪ್ರಾಧ್ಯಾಪಕಿ

ಹೊಸ ದೆಹಲಿ,ಜು.2: ಮಹಿಳೆಯೊಬ್ಬರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಟೀಕಿಸಲು ಹೋಗಿ ತಾನೇ ಟ್ರೋಲ್‌ಗೆ ಒಳಗಾದ ಘಟನೆಯೊಂದು (Viral News) ನಡೆದಿದೆ. ತಾವು ಪಶ್ಚಿಮ ಬಂಗಾಳದ ಸಹಾಯಕ ಪ್ರಾಧ್ಯಾಪಕಿ ಎಂದು ಹೇಳಿಕೊಂಡ ಅರ್ಪಿತಾ ಚಟರ್ಜಿ ಎಂಬವರು ತಮ್ಮ ಶೈಕ್ಷಣಿಕ ಅರ್ಹತೆಗಳನ್ನು ಹೈಲೈಟ್ ಮಾಡಿದ್ದು ರಾಹುಲ್ ಗಾಂಧಿಯ ಹೇಳಿಕೆಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಿದ್ದರು. ತಾನು ಉನ್ನತ ಮಟ್ಟದ ಶಿಕ್ಷಣ ಪಡೆದಿದ್ದೇನೆ ಎಂದು ಹೇಳಿಕೊಂಡರೂ ಈ ಸಣ್ಣ ಪೋಸ್ಟ್‌ ನಲ್ಲೇ ಬರೋಬ್ಬರಿ 6 ರಿಂದ 7 ಭೀಕರ ವ್ಯಾಕರಣ ತಪ್ಪುಗಳಿದ್ದವು‌.

ರಾಹುಲ್ ಗಾಂಧಿ ಈ ಹಿಂದೆ ಅಂಧ ಭಕ್ತರನ್ನು ಮುರ್ಖರು ಎಂದು ಕರೆದಿದ್ದರು. ಈ ಹೇಳಿಕೆಯನ್ನು ಪ್ರಶ್ನೆ ಮಾಡಿದ ಮಹಿಳೆ, ಪ್ರಿಯ ರಾಹುಲ್ ಗಾಂಧಿ, ನಾನು ಹೆಮ್ಮೆಯ ಅಂಧಭಕ್ತ ಮತ್ತು ಸಹಾಯಕ ಪ್ರಾಧ್ಯಾಪಕಿ, ಎರಡು ಸ್ನಾತಕೋತ್ತರ ಪದವಿಗಳನ್ನು ಹೊಂದಿದ್ದೇನೆ (ಇಂಗ್ಲಿಷ್ ಮತ್ತು ಶಿಕ್ಷಣ), ಬಿ.ಎಡ್. ಪದವಿಯನ್ನು ಕೂಡ ಹೊಂದಿದ್ದೇನೆ ಮತ್ತು ಪಿಎಚ್‌ಡಿ ಓದುತ್ತಿದ್ದೇನೆ. ನಿಮ್ಮ ಅನಿಸಿಕೆ ಪ್ರಕಾರ ಅಂಧ ಭಕ್ತರು ಒಂದು ಮೂರ್ಖರು. ನಾನು ಮೂರ್ಖಳೇ? ನಿಮಗೆ ಖಚಿತವೇ?" ಎಂದು ಪ್ರಶ್ನೆ ಮಾಡಿದ್ದಾರೆ.



ಮಹಿಳೆಯೂ ಸ್ನಾತಕೋತ್ತರ ಪದವಿ ಪಡೆದು ಬಿ.ಎಡ್. ಪದವಿ ಮತ್ತು ಪಿಎಚ್‌ಡಿ ಓದುತ್ತಿದ್ದಾರೆ ಎಂದು ಹೇಳಿಕೊಂಡರೂ ಅವರ ವಾಕ್ಯದಲ್ಲಿ ಹಲವಾರು ತಪ್ಪುಗಳಿದ್ದವು. ತಮ್ಮ ಉನ್ನತ ವಿದ್ಯಾರ್ಹ ತೆಯನ್ನು ಹೆಮ್ಮೆಯಿಂದಲೇ ಬರೆದುಕೊಂಡಿದ್ದರೂ ,ಇಂಗ್ಲಿಷ್‌ನಲ್ಲಿ ಎಂ.ಎ ಮಾಡಿರುವ ಅವರ ಈ ಸಣ್ಣ ಪೋಸ್ಟ್‌ನಲ್ಲೇ ಬರೋಬ್ಬರಿ 6 ರಿಂದ 7 ವ್ಯಕಾರಣ ತಪ್ಪುಗಳಿದ್ದವು‌.

Viral Video: ಮಳೆಯಿಂದ ಜಲಾವೃತಗೊಂಡ ಮದುವೆ ಮಂಟಪ: ವಧುವನ್ನು ಎತ್ತಿಕೊಂಡು ಹೆಜ್ಜೆಹಾಕಿದ ವರ

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅನೇಕ ಬಳಕೆದಾರರು ರಾಜಕೀಯ ವಿಚಾರ ಬದಲಾಗಿ ಹಲವಾರು ವ್ಯಾಕರಣ ತಪ್ಪುಗಳನ್ನು ಗಮನಿಸಿದ್ದಾರೆ. ಒಬ್ಬ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದು "ನೀವು ನಿಜಕ್ಕೂ ಮೂರ್ಖರು. ನೀವು ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಮಾಡಿದ್ದೀರಿ? ಆದರೆ ನೀವು ಈ ಪೋಸ್ಟ್‌ನಲ್ಲಿ ಸುಮಾರು ಏಳು ವ್ಯಾಕರಣ ದೋಷಗಳನ್ನು ಮಾಡಿದ್ದೀರಿ" ಅಂದರು. ನೆಟ್ಟಿಗರು ಅವರ ರಾಜಕೀಯ ನಿಲುವನ್ನು ಚರ್ಚಿಸುವ ಬದಲು, ಅವರ ಇಂಗ್ಲಿಷ್ ಜ್ಞಾನವನ್ನು ಟೀಕಿಸಲು ಪ್ರಾರಂಭ ಮಾಡಿದ್ದಾರೆ.

ಒಬ್ಬ ಬಳಕೆದಾರರು "ಪದವಿ ಸಂಪೂರ್ಣ ವ್ಯರ್ಥ". ಮತ್ತೊಬ್ಬ ಬಳಕೆದಾರರು, "ಭಾರತೀಯ ಶಿಕ್ಷಣ ವ್ಯವಸ್ಥೆಯು ಜ್ಞಾನವನ್ನು ಖಾತರಿಪಡಿಸುವುದಿಲ್ಲ, ಅದು ಅಂಕವನ್ನು ಆಧರಿಸಿದೆ" ಎಂದು ಟೀಕಿಸಿದ್ದಾರೆ.