Viral Video: ಜನ ನಿಬಿಡ ರಸ್ತೆ ಮಧ್ಯೆ ನಮಾಜ್ ಮಾಡಿದ ಮಹಿಳೆ; ಟ್ರಾಫಿಕ್ ಜಾಮ್‌ನಿಂದ ವಾಹನ ಸವಾರರು ಹೈರಾಣ
ಅಸ್ತಿ ಕಲಹದಿಂದ ನೊಂದ ಮುಸ್ಲಿಂ ಮಹಿಳೆಯೊಬ್ಬಳು ಜನನಿಬಿಡ ರಸ್ತೆಯ ಮಧ್ಯದಲ್ಲೇ ನಮಾಜ್ ಮಾಡಿರುವ ಘಟನೆ ನಡೆದಿದೆ. ಕೇರಳದ ಪಾಲಕ್ಕಾಡ್‌ನಲ್ಲಿ ಐಎಂಎ ಜಂಕ್ಷನ್ ಬಳಿಯ ರಸ್ತೆಯ ಮಧ್ಯದಲ್ಲಿ ಈ ಮಹಿಳೆ ನಮಾಜ್ ಮಾಡಿದ್ದಾಳೆ. ಇದರಿಂದಾಗಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿದೆ.
ರಸ್ತೆ ಮಧ್ಯೆ ನಮಾಜ್ ಮಾಡಿದ ಮಹಿಳೆ -
ಪಾಲಕ್ಕಾಡ್, ಜ. 29: ಇತ್ತೀಚೆಗೆ ಆಸ್ತಿ ವಿವಾದಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇಂತಹ ಕಲಹಗಳು ಸಂಬಂಧವನ್ನೇ ಹಾಳು ಮಾಡಿ, ಕೆಲವೊಮ್ಮೆ ಹಿಂಸಾತ್ಮಕ ಘಟನೆಗಳಿಗೂ ಕಾರಣವಾಗುತ್ತವೆ. ಇತ್ತ ಅಸ್ತಿ ಕಲಹದಿಂದ ನೊಂದ ಮುಸ್ಲಿಂ ಮಹಿಳೆಯೊಬ್ಬಳು ಜನನಿಬಿಡ ರಸ್ತೆಯ ಮಧ್ಯದಲ್ಲೇ ನಮಾಜ್ ಮಾಡಿರುವ ಘಟನೆ ನಡೆದಿದೆ. ಕೇರಳದ ಪಾಲಕ್ಕಾಡ್‌ನಲ್ಲಿ ಐಎಂಎ ಜಂಕ್ಷನ್ ಬಳಿ ಜನನಿಬಿಡ ರಸ್ತೆಯ ಮಧ್ಯದಲ್ಲಿ ಮಹಿಳೆ ನಮಾಜ್ ಮಾಡಿದ್ದಾಳೆ. ಇದರಿಂದಾಗಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಯಿತು. ಸದ್ಯ ಈ ಘಟನೆಯ ವಿಡಿಯೊ ವೈರಲ್ ಆಗಿದೆ.
ಆಸ್ತಿ ವಿಚಾರವಾಗಿ ಕಲಹ ಉಂಟಾಗಿದ್ದು ಮಹಿಳೆ ರಸ್ತೆ ಮಧ್ಯೆ ನಮಾಜ್ ಮಾಡಲು ಹೊರಟಿದ್ದಾಳೆ. ವಾಹನಗಳು ಎರಡೂ ಬದಿಗಳಲ್ಲಿ ಚಲಿಸುತ್ತಲೇ ಇದ್ದರೂ ಮಹಿಳೆ ಶಾಂತವಾಗಿ ರಸ್ತೆಯ ಮೇಲೆ ಕುಳಿತು ಪ್ರಾರ್ಥನೆ ಮಾಡಿದ್ದಾಳೆ. ಸಂಚಾರ ಸುರಕ್ಷತೆಯ ನಿಟ್ಟಿನಲ್ಲಿ ಹಲವರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುವಂತೆ ಮನವೊಲಿಸಲು ಪ್ರಯತ್ನಿಸಿದರು, ಮೊಂಡು ಹಠ ಬಿಡದ ಮಹಿಳೆ ಅಲ್ಲೇ ತಮ್ಮ ಪ್ರಾರ್ಥನೆ ನಡೆಸಿದಳು.
ವಿಡಿಯೊ ನೋಡಿ:
Peak of insensitivity.
— THESingh (I ❤️Mahadev) (@IamVishnu_Singh) January 29, 2026
Why Keralites are so insensitive to a Muslim woman who is offering Namaz right in the middle of the road?
pic.twitter.com/JTzwwKBg35
ಸಂಬಂಧವನ್ನು ಲೆಕ್ಕಿಸದೆ ಮಹಿಳೆ ರಸ್ತೆಯ ಮಧ್ಯದಲ್ಲೇ ನಮಾಜ್ ಮಾಡುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾಳೆ. ಇದನ್ನು ಕಂಡು ಅಚ್ಚರಿಗೊಂಡ ವಾಹನ ಸವಾರರು ಮತ್ತು ದಾರಿ ಹೋಕರು, ಆಕೆಯನ್ನು ಅಲ್ಲಿಂದ ಪಕ್ಕಕ್ಕೆ ಸರಿಯುವಂತೆ ಮನವೊಲಿಸಲು ನೋಡಿದರೂ ಮಹಿಳೆ ತನ್ನ ಹಠ ಬಿಟ್ಟಿಲ್ಲ. ಮಹಿಳೆ ಯಾವುದಕ್ಕೂ ಕಿವಿಗೊಡದೆ ತನ್ನ ಪ್ರಾರ್ಥನೆಯನ್ನು ಅಲ್ಲೇ ಮಾಡಿದ್ದಾಳೆ.
ಭಾರತೀಯ ಮೊಮೊಸ್ ರುಚಿಗೆ ಅಮೆರಿಕದ ಯುವಕ ಫುಲ್ ಫಿದಾ
ಈ ವಿಚಾರ ತಿಳಿದ ಸೌತ್ ಸಿಟಿ ಪೊಲೀಸರು ಸ್ಥಳಕ್ಕೆ ಧಾವಿಸಿ ಆಕೆಯನ್ನು ರಸ್ತೆಯಿಂದ ತೆರವುಗೊಳಿಸಿದರು. ನಂತರ ಸಂಚಾರ ವ್ಯವಸ್ಥೆ ಸುಗಮವಾಗಿದ್ದು ಪೊಲೀಸರು ಮಹಿಳೆಯ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ. ವಿಚಾರಣೆಯ ಸಮಯದಲ್ಲಿ, ಮಹಿಳೆ ಪೊಲೀಸರಿಗೆ ತನ್ನ ಕೃತ್ಯವು ದೀರ್ಘಕಾಲದ ಕೌಟುಂಬಿಕ ಆಸ್ತಿ ವಿವಾದದ ಬಗ್ಗೆ ಗಮನ ಸೆಳೆಯಲು ಒಂದು ರೀತಿಯ ಪ್ರತಿಭಟನೆಯಾಗಿತ್ತು ಎಂದು ಹೇಳಿದ್ದಾರೆ.
ʼʼನನ್ನ ದೂರುಗಳನ್ನು ದೀರ್ಘ ಕಾಲದವರೆಗೆ ನಿರ್ಲಕ್ಷಿಸಲಾಗಿದೆ. ಸಾರ್ವಜನಿಕ ಗಮನವನ್ನು ಸೆಳೆಯಲು ಈ ಹೆಜ್ಜೆ ಇಟ್ಟಿದ್ದೇನೆ. ಈ ಬಗ್ಗೆ ನಾನು ಹಲವು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲʼʼ ಎಂದಿದ್ದಾಳೆ. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬರು "ನಾಗರಿಕ ಪ್ರಜ್ಞೆ ಎಲ್ಲಿದೆ?" ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು, ತಮ್ಮ ವೈಯಕ್ತಿಕ ಸಮಸ್ಯೆಗಾಗಿ "ಸಂಚಾರವನ್ನು ಅಡ್ಡಿಪಡಿಸುವುದು ಮತ್ತು ಜೀವಗಳನ್ನು ಅಪಾಯಕ್ಕೆ ಸಿಲುಕಿಸುವುದು ಸರಿಯಲ್ಲʼʼ ಎಂದಿದ್ದಾರೆ.