ಚಂಡೀಗಢ, ಆ. 19: ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯಲ್ಲಿ ನಡೆದ ಮದುವೆ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ (Viral Video). ಮದುವೆ ಮಂಟಪದಲ್ಲಿ ವರನನ್ನು ನೋಡಿದ ವಧು ಕೊನೆಯ ಕ್ಷಣದಲ್ಲಿ ವರಿಸಲು ನಿರಾಕರಿಸಿದ್ದಾಳೆ. ಮದುವೆಗೂ ಮುನ್ನ ತೋರಿಸಿದ ವರನ ಫೋಟೊ ಬೇರೆ ಈಗ ಇರುವ ವರನೇ ಬೇರೆ ಎಂದು ಆಕ್ಷೇಪ ವ್ಯಕ್ತಪಡಿಸಿ ವಧು ಮದುವೆಯನ್ನು ನಿರಾಕರಿಸಿದ್ದಾಳೆ. ಸದ್ಯ ಈ ವಿಡಿಯೊ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದ ಅತ್ಯಂತ ಪ್ರಮುಖ ಘಟ್ಟ. ಆದರೆ ಹಸೆಮಣೆಗೆ ಏರಬೇಕಾದ ಕೊನೆಯ ಕ್ಷಣದಲ್ಲಿ, ವರನ ಮುಖ ನೋಡಿ ವಧುವೊಬ್ಬಳು "ನನಗೆ ಈ ಮದುವೆಯೇ ಬೇಡ" ಎಂದು ಹೈಡ್ರಾಮಾ ಸೃಷ್ಟಿಸಿ, ರದ್ದುಗೊಳಿಸಿದ ವಿಚಿತ್ರ ಹಾಗೂ ಅಚ್ಚರಿಯ ಘಟನೆಯೊಂದು ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯಲ್ಲಿ ನಡೆದಿದೆ.
ಕೊನೆಯ ಕ್ಷಣದಲ್ಲಿ ಮದುವೆ ರದ್ದುಗೊಳಿಸಿದ ವಧು: ವಿಡಿಯೊ ನೋಡಿ
ರಾಜಸ್ಥಾನದ ಛತ್ತರ್‌ಗಢದಿಂದ ಭಾರಿ ವಿಜೃಂಭಣೆಯಿಂದ ಬಂದಿದ್ದ ವರ ಮತ್ತು ಆತನ ಮೆರವಣಿಗೆ ಕೊನೆಗೆ ವಧುವಿಲ್ಲದೆ ಬರಿಗೈಯಲ್ಲಿ ವಾಪಸ್ ತೆರಳಬೇಕಾದ ಪರಿಸ್ಥಿತಿ ಎದುರಾಯಿತು. ಪಂಜಾಬ್‌ನ ಫಿರೋಜ್‌ಪುರ ವ್ಯಾಪ್ತಿಯ ಟೀಟೊ ಖೇಡಾ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಮದುವೆಯ ಸಕಲ ಸಿದ್ಧತೆಗಳು ಪೂರ್ಣಗೊಂಡು, ವರನು ಮದುವೆ ಮಂಟಪಕ್ಕೆ ಬಂದು ನಿಂತಿದ್ದನು. ಇನ್ನೇನು ಹಾರ ಬದಲಾಯಿಸುವ ಶಾಸ್ತ್ರ ಆರಂಭವಾಗಬೇಕು ಎನ್ನುವಷ್ಟರಲ್ಲಿ ವಧು ವರನ ಮುಖ ನೋಡಿ ಮದುವೆ ಬೇಡ ಎಂದು ಹೇಳಿದ್ದಾಳೆ.
ಫೋಟೊದಲ್ಲಿದ್ದವನೇ ಬೇರೆ, ಎದುರು ನಿಂತವನೇ ಬೇರೆ!
"ಮದುವೆ ನಿಶ್ಚಯವಾಗುವಾಗ ನನಗೆ ತೋರಿಸಿದ ಫೋಟೊದಲ್ಲಿದ್ದ ವ್ಯಕ್ತಿಯೇ ಬೇರೆ, ಮಂಟಪದಲ್ಲಿ ತಂದು ನಿಲ್ಲಿಸಿರುವ ವ್ಯಕ್ತಿಯೇ ಬೇರೆ. ಎಡಿಟಿಂಗ್ ಹಾಗೂ ಫಿಲ್ಟರ್ ಹಾಕಿದ ಮತ್ತೊಬ್ಬ ಯುವಕನ ಫೋಟೊ ತೋರಿಸಿ ನನಗೆ ವಂಚಿಸಲಾಗಿದೆ. ಜೀವನಪೂರ್ತಿ ಇವನ ಜತೆ ನಾನು ಬಾಳಲು ಸಾಧ್ಯವಿಲ್ಲ" ಎಂದು ವಧು ಖಡಾಖಂಡಿತವಾಗಿ ಹೇಳಿದ್ದಾಳೆ.
ಪ್ರೀತಿ, ಮೋಸ, ಮದುವೆ-ತನ್ನ ಜೀವನದಲ್ಲಾದ ಈ ಮೂರು ಅನುಭವವನ್ನು ಬಿಚ್ಚಿಟ್ಟ ಮಹಿಳೆ
ಇತ್ತ ವಧುವಿನ ಆಕ್ರೋಶಕ್ಕೆ ವರನ ಕಡೆಯವರು ಪ್ರತಿಕ್ರಿಯಿಸಿ, "ಮದುವೆಗೆ ಎರಡೂ ಕುಟುಂಬಗಳು ಸಂಪೂರ್ಣ ಸಮ್ಮತಿ ನೀಡಿದ್ದವು. ಮಧ್ಯವರ್ತಿಗಳು ಹಾಗೂ ವಧುವಿನ ತಾಯಿಯೇ ನಮಗೆ ಫೋಟೊಗಳನ್ನು ನೀಡಿದ್ದರು. ಮದುವೆಗೆ ಮುಂಚೆ ಮೊಬೈಲ್‌ನಲ್ಲಿ ಇಬ್ಬರೂ ಮಾತನಾಡಿಕೊಂಡಿದ್ದರು. ಈಗ ದಿಢೀರನೆ ಹೀಗೆ ಆರೋಪ ಮಾಡುತ್ತಿರುವುದು ಸರಿಯಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದರಿಂದ ವರನ ಕಡೆಯವರು ಸ್ಥಳೀಯ ಪೊಲೀಸರಿಗೆ ದೂರು ನೀಡಿದರು. ವಿಷಯ ತಿಳಿದ ಪೋಲಿಸರು ಸ್ಥಳಕ್ಕೆ ಆಗಮಿಸಿ ಎರಡೂ ಕಡೆಯವರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಕೊನೆಗೆ ಪೊಲೀಸರ ಮಧ್ಯಸ್ಥಿಕೆಯಲ್ಲಿ ಎರಡೂ ಕುಟುಂಬಗಳು ಮಾತುಕತೆ ನಡೆಸಿ, ಮದುವೆಯನ್ನು ರದ್ದುಗೊಳಿಸಿ ಪರಸ್ಪರ ಪ್ರಕರಣವನ್ನು ಇತ್ಯರ್ಥಪಡಿಸಿಕೊಂಡು ವಾಪಸ್ ತೆರಳಿದ್ದಾರೆ. ಪ್ರಸ್ತುತ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ವೈರಲ್ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.