Viral News: ಪ್ರೀತಿ, ಮೋಸ, ಮದುವೆ-ತನ್ನ ಜೀವನದಲ್ಲಾದ ಈ ಮೂರು ಅನುಭವವನ್ನು ಬಿಚ್ಚಿಟ್ಟ ಮಹಿಳೆ
ಇಂಗ್ಲೆಂಡ್‌ನ ನಾರ್ಫೋಕ್‌ನ 50 ವರ್ಷದ ಮಹಿಳೆ ಜೋನ್ನಾ ಗರ್ಲಿಂಗ್ ಪ್ರೀತಿಸಿದ ವ್ಯಕ್ತಿಗಾಗಿ ಗಂಡನನ್ನೇ ಬಿಟ್ಟುಬಂದು ಕೊನೆಗೆ ಅವನಿಂದ ಮೋಸ ಹೋಗಿ ದಿಕ್ಕೆಟ್ಟು ನಿಂತಾಗ ಜೀವನದ ನಿಜವಾದ ಸಂಗಾತಿಯನ್ನು ಕಂಡುಕೊಂಡಿದ್ದಾಳೆ. ಇದೀಗ ಪತಿಗೆ ಡೈವೋರ್ಸ್ ನೀಡಿ ಆತನ ಜತೆ ಮದುವೆಯಾಗಲು ಮುಂದಾಗಿದ್ದಾಳೆ. ಈ ಸುದ್ದಿ ಈಗ ವೈರಲ್ (Viral News) ಆಗಿದೆ.


ಕೈರೋ: ಪ್ರೀತಿ, ಮದುವೆ ಎನ್ನುವುದು ಜೀವನದ ಪ್ರಮುಖ ಘಟ್ಟ ಎಂದೇ ಹೇಳಬಹುದು. ಅದರಲ್ಲಿಯೂ ಸಂಗಾತಿಯ ಆಯ್ಕೆ ಬಂದಾಗ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಯಾಕೆಂದರೆ ಒಂದು ತಪ್ಪು ನಿರ್ಧಾರದಿಂದ ಜೀವನಪರ್ಯಂತ ನೋವು ಅನುಭವಿಸಬೇಕಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಇಂಗ್ಲೆಂಡ್‌ನ ನಾರ್ಫೋಕ್‌ನ 50 ವರ್ಷದ ಮಹಿಳೆ ಜೋನ್ನಾ ಗರ್ಲಿಂಗ್ ಬದುಕು. ಆಕೆ ಪ್ರೀತಿಸಿದ ವ್ಯಕ್ತಿಗಾಗಿ ಗಂಡನನ್ನೇ ಬಿಟ್ಟು ಹೋಗಿದ್ದಾಳೆ. ಕೊನೆಗೆ ಪ್ರೇಮಿಯಿಂದ ಮೋಸ ಹೋಗಿ ದಿಕ್ಕೆಟ್ಟು ನಿಂತಾಗ ಮತ್ತೆ ಇನ್ನೊಬ್ಬ ವ್ಯಕ್ತಿಯ ಪ್ರೀತಿಯಲ್ಲಿ ಬಿದ್ದಿದ್ದಾಳೆ. ಆತನನ್ನು ಮದುವೆಯಾಗಿ ಸುಖ ಜೀವನ ನಡೆಸಲು ಮುಂದಾಗಿದ್ದಾಳೆ. ಈ ಸುದ್ದಿ ಈಗ ಸಿಕ್ಕಾಪಟ್ಟೆ ವೈರಲ್ (Viral News) ಆಗಿದೆ.
ಜೋನ್ನಾಳ ಪ್ರೀತಿಯ ಪ್ರಯಾಣ
ಇಂಗ್ಲೆಂಡ್‌ನ ನಾರ್ಫೋಕ್‌ನ ಟೆಸ್ಕೊದಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ಜೋನ್ನಾ 2018ರಲ್ಲಿ ಈಜಿಪ್ಟ್‌ನ ಪ್ರವಾಸದ ವೇಳೆ ಹಸನ್ ಖಾಲಿದ್ ಎಂಬ ವ್ಯಕ್ತಿಯನ್ನು ಭೇಟಿಯಾಗಿದ್ದಳು. ಅವನ ಪ್ರೀತಿಯ ಸುಳಿಗೆ ಸಿಕ್ಕಿ ಆಕೆ ತನ್ನ ಗಂಡನನ್ನು ಬಿಟ್ಟು ಹರ್ಘಡಾಗೆ ಶಿಫ್ಟ್ ಆದಳು. ಆದರೆ ಹಸನ್ ಕೊನೆಗೆ ಅವಳಿಗೆ ಮೋಸ ಮಾಡಿ ಆಕೆಯ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದ.
ಗೆಳೆಯನಿಂದ ಮೋಸ ಹೋದ್ರೂ ಆಕೆ ಮಾತ್ರ ಈಜಿಪ್ಟ್‌ನಲ್ಲಿಯೇ ಇದ್ದಳಂತೆ. ಕೊನೆಗೆ ತನಗಿಂತ ಏಳು ವರ್ಷ ಚಿಕ್ಕವನಾದ ಸ್ಥಳೀಯ ವ್ಯಕ್ತಿ ಹಿಶಮ್ ಫೈಗೊನ ಜತೆ ಪ್ರೀತಿಯಲ್ಲಿ ಬಿದ್ದಳು. ಇವರಿಬ್ಬರ ನಡುವೆ ಉತ್ತಮ ಬಾಂಧವ್ಯ ಬೆಳೆದು ಗಂಡನಿಗೆ ವಿಚ್ಛೇದನ ನೀಡಿ ಹಿಶಮ್ ಜತೆ ಮದುವೆ ಮಾಡಿಕೊಳ್ಳಲು ಕೂಡ ನಿರ್ಧರಿಸಿದಳು. ನಿರುದ್ಯೋಗಿಯಾಗಿರುವ ಹಿಶಮ್, ಜೀವನ ಕಟ್ಟಿಕೊಳ್ಳಲು ಉಬರ್ ಚಾಲಕನಾಗಲು ಡ್ರೈವಿಂಗ್ ಲೈಸೆನ್ಸ್‌ಗಾಗಿ ಓಡಾಡುತ್ತಿದ್ದಾನೆ.
ಈ ಸುದ್ದಿಯನ್ನೂ ಓದಿ:Viral Video: ನಡುರಸ್ತೆಯಲ್ಲೇ ಮಹಿಳೆ ಜೊತೆ ಬಿಜೆಪಿ ನಾಯಕನ ಅಶ್ಲೀಲ ಕೃತ್ಯ- ವಿಡಿಯೊ ಫುಲ್ ವೈರಲ್
ಗಂಡನಿಂದ ದೂರಾಗಿ ಪ್ರೀತಿಯಲ್ಲಿ ಬಿದ್ದು ಅದರಿಂದ ಮೋಸ ಹೋದ್ರೂ ಬದುಕಿನಲ್ಲಿ ಭರವಸೆ ಕಳೆದುಕೊಳ್ಳದೇ ಮತ್ತೊಮ್ಮೆ ಪ್ರೀತಿಸಿ ಹೊಸ ಬದುಕು ಕೊಟ್ಟಿದ್ದಾಳೆ ಜೋನ್ನಾ. ಅದು ಅಲ್ಲದೆ ಆಕೆ ಇಂಗ್ಲೆಂಡ್‌ನಲ್ಲಿ, ಜಂಕ್ ಫುಡ್‌ಗಳನ್ನೇ ಹೆಚ್ಚು ತಿನ್ನುತ್ತಿದ್ದ ಈಕೆ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸಲು ಮುಂದಾಗಿದ್ದಾಳೆ.