ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪುಟ್ಟ ನಾಯಿ ಮರಿಯನ್ನು ಗಂಗೆಯಲ್ಲಿ ಮುಳುಗಿಸಿದ ವ್ಯಕ್ತಿ: ಮೂರ್ಖತನದ ಕೆಲಸ ಎಂದ ನೆಟ್ಟಿಗರು

Viral Video: ಗಂಗಾ ನದಿಯಲ್ಲಿ ಸ್ನಾನ ಮಾಡುವುದರಿಂದ ಪಾಪ ಕಳೆದು ಹೋಗುತ್ತದೆ ಎನ್ನುವ ನಂಬಿಕೆ ಇದೆ. ಹೀಗಾಗಿ ಹೆಚ್ಚಿನವರು ತಮ್ಮ ಪಾಪ- ಕರ್ಮಗಳನ್ನು ಹೋಗಲಾಡಿಸಲು ನದಿಯಲ್ಲಿ ಸ್ನಾನ ಮಾಡುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಈ ನಂಬಿಕೆಯನ್ನು ಪ್ರಾಣಿಯ ಮೇಲೆ ಹೇರಿದ್ದಾನೆ. ಪುಟ್ಟ ನಾಯಿ ಮರಿಯನ್ನು ನದಿಯಲ್ಲಿ ಹಲವು ಬಾರಿ ಮುಳುಗಿಸುತ್ತಿರುವ ದೃಶ್ಯ ಕಂಡು ಬಂದಿದೆ.

ನಾಯಿ ಮರಿಯನ್ನು ಗಂಗೆಯಲ್ಲಿ ಸ್ನಾನ ಮಾಡಿದ ವ್ಯಕ್ತಿ

ನವದೆಹಲಿ, ಏ. 2: ಹಿಂದೂ ಧರ್ಮದ ನಂಬಿಕೆ ಪ್ರಕಾರ ಗಂಗೆ ಅತ್ಯಂತ ಪವಿತ್ರ ನದಿ. ಗಂಗಾ ನದಿಯಲ್ಲಿ ಸ್ನಾನ ಮಾಡುವುದರಿಂದ ಪಾಪಗಳು ಕಳೆದು ಹೋಗುತ್ತವೆ ಎನ್ನುವ ನಂಬಿಕೆ ಇದೆ. ಹೀಗಾಗಿ ಹೆಚ್ಚಿನವರು ತಮ್ಮ ಪಾಪ- ಕರ್ಮಗಳನ್ನು ಹೋಗಲಾಡಿಸಲು ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಈ ನಂಬಿಕೆಯನ್ನು ಪ್ರಾಣಿಯ ಮೇಲೆ ಹೇರಿದ್ದಾನೆ. ಪುಟ್ಟ ನಾಯಿ ಮರಿಯನ್ನು ಗಂಗಾ ನದಿಯಲ್ಲಿ ಹಲವು ಬಾರಿ ಮುಳುಗಿಸುತ್ತಿರುವ ದೃಶ್ಯ (Viral News) ಕಂಡು ಬಂದಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿ ವರ್ಷ ಲಕ್ಷಾಂತರ ಜನರು ಗಂಗಾದಲ್ಲಿ ಸ್ನಾನ ಮಾಡುತ್ತಾರೆ. ಇದೀಗ ನದಿಯಲ್ಲಿ ನಾಯಿ ಮರಿಯನ್ನು ಮುಳುಗಿಸುವುದು ಪ್ರಾಣಿಪ್ರಿಯರನ್ನು ಕೆರಳಿಸಿದೆ. ಆ ವ್ಯಕ್ತಿ ನಾಯಿಯನ್ನು ಪದೇ ಪದೆ ಮುಳುಗಿಸುತ್ತಿರುವುದು ಕಂಡು ಬಂದಿದೆ. ಇದರಿಂದ ಉಸಿರುಗಟ್ಟಿದಂತಾಗಿ ಆ ಪುಟ್ಟ ನಾಯಿ ಮರಿ ಒದ್ದಾಡಿದೆ. ನೀರಿನಿಂದ ಹೊರ ಬರಲು ಹರಸಹಾಸ ಪಟ್ಟಿದೆ.

ವಿಡಿಯೊ ನೋಡಿ:



ಈ ವಿಡಿಯೊದಲ್ಲಿ ಒಬ್ಬ ವ್ಯಕ್ತಿ ನಾಯಿ ಮರಿಯನ್ನು ಗಂಗಾದಲ್ಲಿ ಹಲವು ಬಾರಿ ಮುಳುಗಿಸುತ್ತಿರುವುದನ್ನು ಕಾಣಬಹುದು. ಈ ಸಂದರ್ಭದಲ್ಲಿ ನಾಯಿ ಮರಿ ಬಿಡಿಸಿಕೊಳ್ಳಲು ಹಲವು ಬಾರಿ ಪ್ರಯತ್ನಿಸಿದೆ. @TheAdorablePups ಎಂಬ ಖಾತೆಯಿಂದ ಈ ವಿಡಿಯೊ ಪೋಸ್ಟ್ ಮಾಡಲಾಗಿದ್ದು, "ನಮ್ಮ ದೇಶದಲ್ಲಿ ಗಂಗಾ ನೀರಿನಲ್ಲಿ ಸ್ನಾನ ಮಾಡುವ ಮೂಲಕ ಎಲ್ಲ ದುಃಖಗಳು, ನೋವು ಮತ್ತು ಪಾಪಗಳು ತೊಳೆಯಲ್ಪಡುತ್ತವೆ'' ಎಂದು ಬರೆಯಲಾಗಿದೆ. ʼʼನಾನು ನಾಯಿಯನ್ನೂ ಗಂಗಾ ನೀರಿನಲ್ಲಿ ಸ್ನಾನ ಮಾಡಲು ಯೋಚಿಸಿದೆʼʼ ಎಂದು ಹೇಳಲಾಗಿದೆ.

ಹಾಡ ಹಗಲೇ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ

ವಿಡಿಯೊ ನೋಡಿ ನೆಟ್ಟಿಗರು ಆಕ್ರೋಶ ವ್ಯಕತಪಡಿಸಿದ್ದಾರೆ. ನೆಟ್ಟಿಗರೊಬ್ಬರು, "ನೀವು ಪ್ರಾಣಿಗೆ ಏಕೆ ಹಾಗೆ ಮಾಡುತ್ತೀರಿ? ಇದು ಪ್ರಾಣಿಗಳ ಮೇಲಿನ ದೌರ್ಜನ್ಯʼʼ ಎಂದು ಕಿಡಿಕಾರಿದ್ದಾರೆ. ಮತ್ತೊಬ್ಬರು, ʼʼಇದು ಮೂರ್ಖತನದ ಕೆಲಸ. ಬಡ ನಾಯಿಮರಿ ಆಘಾತಕ್ಕೊಳಗಾಗಿದೆʼʼ ಎಂದು ಬರೆದುಕೊಂಡಿದ್ದಾರೆ. ʼʼಇದು ಪ್ರಾಣಿ ಹಿಂಸೆಯಾಗಿದ್ದು, ಇಂತಹ ಕೃತ್ಯ ಎಸಗಿದವರಿಗೆ ಸರಿಯಾದ ಶಿಕ್ಷೆ ನೀಡಬೇಕುʼʼ ಎಂದು ಇನ್ನೊಬ್ಬರು ಆಗ್ರಹಿಸಿದ್ದಾರೆ.