ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Viral Video: ಮಧ್ಯ ರಸ್ತೆಯಲ್ಲೇ ಭರ್ಜರಿ ಭೋಜನ; ರಾಜಸ್ಥಾನ ಎಕ್ಸ್‌ಪ್ರೆಸ್‌ವೇಯಲ್ಲೇ ಪಾರ್ಟಿ ಮಾಡಿದ ಕುಟುಂಬ

Rajasthan expressway: ಸಾರ್ವಜನಿಕ ಸ್ಥಳದಲ್ಲಿ ಅಶಿಸ್ತಿನಿಂದ ವರ್ತನೆ ತೋರುವ ಅನೇಕ ಘಟನೆಗಳು ವೈರಲ್ ಆಗುತ್ತವೆ. ಎಲ್ಲೆಂದರಲ್ಲಿ ಕಸ ಹಾಕುವುದು, ಪ್ರವಾಸಿ ಸ್ಥಳದಲ್ಲಿದ್ದ ವಸ್ತುಗಳನ್ನು ಮುಟ್ಟಿ ಹಾನಿಗೊಳಿಸುವುದು, ರೀಲ್ಸ್ ಚಿತ್ರೀಕರಣ ಮಾಡುವುದು ಹೀಗೆ ಮನ ಬಂದಂತೆ ವರ್ತಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಹೊಸದಾಗಿ ಉದ್ಘಾಟನೆಗೊಂಡ ರಾಜಸ್ಥಾನ ಎಕ್ಸ್‌ಪ್ರೆಸ್‌ ವೇಯ ಮಧ್ಯದಲ್ಲಿ ಕುಟುಂಬವೊಂದು ಕುಳಿತು ಊಟ ಮಾಡುತ್ತಿರುವ ದೃಶ್ಯ ಕಂಡುಬಂದಿದೆ‌.

ರಾಜಸ್ಥಾನದಲ್ಲಿ ಹೈವೆಯಲ್ಲಿ ಕುಳಿತು ಊಟ ಮಾಡಿದ ಕುಟುಂಬ

ಜೈಪುರ, ಆ. 31: ಜನರು ಸಾರ್ವಜನಿಕ ಸ್ಥಳದಲ್ಲಿ ಅಶಿಸ್ತಿನಿಂದ ವರ್ತನೆ ತೋರುವ ಅನೇಕ ಘಟನೆಗಳು ವೈರಲ್ (Viral News) ಆಗುತ್ತವೆ. ಎಲ್ಲೆಂದರಲ್ಲಿ ಕಸ ಎಸೆಯುವುದು, ಪ್ರವಾಸಿ ಸ್ಥಳದಲ್ಲಿದ್ದ ವಸ್ತುಗಳನ್ನು ಮುಟ್ಟಿ ಹಾನಿಗೊಳಿಸುವುದು, ರೀಲ್ಸ್ ಚಿತ್ರೀಕರಣ ಮಾಡುವುದು ಹೀಗೆ ಮನ ಬಂದಂತೆ ವರ್ತಿಸುತ್ತಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಹೊಸದಾಗಿ ಉದ್ಘಾಟನೆಗೊಂಡ ರಾಜಸ್ಥಾನದ ಎಕ್ಸ್‌ಪ್ರೆಸ್‌ ವೇಯೊಂದರಲ್ಲಿ ಕುಟುಂಬವೊಂದು ಕುಳಿತು ಊಟ ಮಾಡುತ್ತಿರುವ ಘಟನೆ ನಡೆದಿದೆ. ಅನೇಕರು ಸಾರ್ವಜನಿಕ ರಸ್ತೆಯನ್ನು ತನ್ನದೇ ಆಸ್ತಿ ಎಂಬಂತೆ ಬಳಕೆ ಮಾಡಿಕೊಂಡಿರುವ ಕುಟುಂಬದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೊಸದಾಗಿ ಉದ್ಘಾಟನೆಗೊಂಡ ರಾಜಸ್ಥಾನ ಎಕ್ಸ್‌ಪ್ರೆಸ್‌ವೇಯಲ್ಲಿ ಈ ಘಟನೆ ನಡೆದಿದೆ. ಇಲ್ಲಿ ಸಾರ್ವಜನಿಕ ರಸ್ತೆಯೇ ಈ ಕುಟುಂಬದ ಪಿಕ್ನಿಕ್ ತಾಣವಾಗಿ ಮಾರ್ಪಟ್ಟಿದೆ. ಈ ಘಟನೆ ಆನ್‌ಲೈನ್‌ನಲ್ಲಿ ಚರ್ಚೆಗೆ ಕಾರಣವಾಗಿದ್ದು ನಾಗರಿಕ ಪ್ರಜ್ಞೆ, ಸುರಕ್ಷತೆ ಬಗ್ಗೆ ಅನೇಕರು ಪ್ರಶ್ನಿಸಿದ್ದಾರೆ. ವಿಡಿಯೊದಲ್ಲಿ ಹೊಸದಾಗಿ ನಿರ್ಮಾಣಗೊಂಡ  ರಸ್ತೆಯ ಬದಿಯಲ್ಲಿ ದೊಡ್ಡ ಕುಟುಂಬವೊಂದು ಸಾಲಾಗಿ ಕುಳಿತು ಊಟ ಮಾಡುತ್ತಿರುವುದು ಕಂಡು ಬಂದಿದೆ.

ವಿಡಿಯೊ ನೋಡಿ:



ಬಳಕೆದಾರರೊಬ್ಬರು ಶೇರ್ ಮಾಡಿದ ವಿಡಿಯೊದಲ್ಲಿ ಕುಟುಂಬದ ಹಲವು ಸದಸ್ಯರು ಆಹಾರದ ತಟ್ಟೆಗಳನ್ನಿಟ್ಟು ರಸ್ತೆಯಲ್ಲಿ ಕುಳಿತು ಊಟ ಮಾಡುತ್ತಿರುವುದನ್ನು ತೋರಿಸಲಾಗಿದೆ. ಕೆಲವು ಕುಟುಂಬ ಸದಸ್ಯರು ರಸ್ತೆ ಬಳಿ ಓಡಾಡುತ್ತಿರುವುದನ್ನು ಮತ್ತು ಕುಳಿತವರಿಗೆ ಆಹಾರವನ್ನು ಬಡಿಸುತ್ತಿರುವುದನ್ನು ಕಾಣಬಹುದು.

ಶಿಕ್ಷಕಿಗೆ ಬೀಸಣಿಕೆಯಿಂದ ಗಾಳಿ ಹಾಕಿದ ವಿದ್ಯಾರ್ಥಿ: ಸರ್ಕಾರಿ ಶಾಲೆಯ ಶಿಕ್ಷಣ ಗುಣಮಟ್ಟ ಬಗ್ಗೆ ಪ್ರಶ್ನೆ ಮಾಡಿದ ನೆಟ್ಟಿಗರು!

ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರಿಂದ ತೀವ್ರ ಟೀಕೆ ವ್ಯಕ್ತವಾಗಿವೆ. ಸಾರ್ವಜನಿಕ ಆಸ್ತಿ ಮತ್ತು ಮೂಲಸೌಕರ್ಯಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ಕಿಡಿಕಾರಿದ್ದಾರೆ. ʼʼಕೆಲವರು ವಿಮಾನದಲ್ಲಿ ತಿಂಡಿ ತಿನ್ನುತ್ತಾರೆ, ರೈಲಿನಲ್ಲಿ ಊಟ ಮಾಡುತ್ತಾರೆ, ಈಗ ಹೆದ್ದಾರಿಯ ಪಕ್ಕದಲ್ಲಿದ್ದಾರೆ. ನನ್ನ ಪ್ರೀತಿಯ ಭಾರತೀಯರೇ, ದಯವಿಟ್ಟು ಅಶಿಸ್ತಿನಿಂದ ವರ್ತಿಸಬೇಡಿ. ನಮ್ಮ ದೇಶದ ಹೆಸರನ್ನು ಹಾಳುಮಾಡಬೇಡಿʼʼ ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಮತ್ತೊಬ್ಬರು, ʼʼಇಂತಹವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ದಂಡ ವಿಧಿಸಬೇಕುʼʼ ಎಂದಿದ್ದಾರೆ.