ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ನಿರ್ಜನ ಪ್ರದೇಶಕ್ಕೆ ಪ್ರಯಾಣಿಕರನ್ನು ಕರೆದೊಯ್ದು ದರ್ಪ ಮೆರೆದ ರ್‍ಯಾಪಿಡೊ ಚಾಲಕ!

ರ್‍ಯಾಪಿಡೊ ಕಾರ್ ಚಾಲಕನೊಬ್ಬ ಪ್ರಯಾಣಿಕರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ಯುವ ಮೂಲಕ ಆತಂಕ ಮುಡಿಸಿರುವ ಘಟನೆ ನಡೆದಿದೆ. ಚಾಲಕನು ಯುವಕ- ಯುವತಿಯನ್ನು ನಗರದ ಹೊರ ವಲಯದ ನಿರ್ಜನ ಪ್ರದೇಶದಲ್ಲಿ ಇಳಿಸಿ, ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ..

ಪ್ರಯಾಣಿಕರ ಮೇಲೆ ರಾಪಿಡೋ ಚಾಲಕನ ದರ್ಪ

ಬೆಂಗಳೂರು,ಡಿ. 12: ರಾಜಧಾನಿ ಬೆಂಗಳೂರಿನಲ್ಲಿ ಕ್ಯಾಬ್ ಚಾಲಕರ ದೌರ್ಜನ್ಯ ದಿನದಿಂದ ದಿನಕ್ಕೆ‌ ಮಿತಿಮೀರುತ್ತಿದೆ. ಮಹಿಳೆಯರು,ಹಿರಿಯರಿಗೆ ಸೇರಿದಂತೆ ಅಸಭ್ಯ ನಡವಳಿಕೆ ಗಳಂತಹ ವರ್ತನೆಗಳು ಕಂಡುಬರುತ್ತಲೇ ಇವೆ. ಇದಕ್ಷೆ ಸಾಕ್ಷಿ ಎಂಬಂತೆ ರಾಪಿಡೋ (Rapido) ಕಾರ್ ಚಾಲಕನೊಬ್ಬ ಪ್ರಯಾಣಿಕರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ಯುವ ಮೂಲಕ ಆತಂಕ ಮುಡಿಸಿರುವ ಘಟನೆ ನಡೆದಿದೆ. ಚಾಲಕನು ಯುವಕ- ಯುವತಿಯನ್ನು ನಗರದ ಹೊರವಲಯದ ನಿರ್ಜನ ಪ್ರದೇಶದಲ್ಲಿ ಇಳಿಸಿ, ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಶೇರ್ (Viral News) ಮಾಡಿಕೊಂಡಿದ್ದಾರೆ..

ಸದ್ಯ ಬೆಂಗಳೂರಿನಲ್ಲಿ ಇಂತಹ ಪ್ರಕರಣಗಳು ಜಾಸ್ತಿಯಾಗಿದ್ದು ಆ್ಯಪ್ ಆಧಾರಿತ ಸಾರಿಗೆ ವ್ಯವಸ್ಥೆಗಳ ಸುರಕ್ಷತೆಯ ಬಗ್ಗೆ ಜನರು ಕಳವಳ ವ್ಯಕ್ತ ಪಡಿಸಿದ್ದಾರೆ. ರಾಪಿಡೋ ಚಾಲಕನು ತಲುಪಿಸ ಬೇಕಿದ್ದ ಸ್ಥಳಕ್ಕೆ ತೆರಳದೆ ಪ್ರಯಾಣಿಕರನ್ನು ನಿರ್ಜನ ಪ್ರದೇಶದದಲ್ಲಿ ಇಳಿಸಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಯುವಕ ಸೋಷಿಯಲ್ ಮೀಡಿಯಾದಲ್ಲಿ ಈ ಭೀಕರ ಅನುಭವವನ್ನು ಹಂಚಿ ಕೊಂಡಿದ್ದಾರೆ.

ದೂರುದಾರ ವ್ಯಕ್ತಿ ಮತ್ತು ಅವರ ಗೆಳತಿ ರಾಪಿಡೋ ಮೂಲಕ ತೆರಳಲು ಕಾರನ್ನು ಬುಕ್ ಮಾಡಿದ್ದರು. ಆದರೆ ಚಾಲಕ ಸರಿಯಾದ ಸ್ಥಳಕ್ಕೆ ಕರೆದೊಯ್ಯದೆ ಸುಮಾರು 13 ಕಿಲೋ ಮೀಟರ್ ದೂರದ ನಿರ್ಜನ ಪ್ರದೇಶಕ್ಕೆ ತೆರಳಿ ಕಾರನ್ನು ನಿಲ್ಲಿಸಿದ್ದಾನೆ. ಆ ಜಾಗ ತೀರಾ ಅಪರಿಚಿತ ಮತ್ತು ನಿರ್ಜನವಾಗಿದ್ದರಿಂದ ದಂಪತಿಗಳು ಕೂಡ ಭಯಭೀತರಾಗಿದ್ದಾರೆ.

Viral Video: ವಿಮೆ ಹಣ ಪಡೆಯಲು ತನ್ನ ಅಂತ್ಯಕ್ರಿಯೆಗೆ ತಾನೇ ಮುಂದಾದ ವ್ಯಕ್ತಿ; ಆಮೇಲೆ ನಡೆದಿದ್ದ ಎಲ್ಲಾ ಶಾಕಿಂಗ್‌ .. ವಿಡಿಯೋ ನೋಡಿ

ಚಾಲಕ ಅಸಭ್ಯವಾಗಿ ಮಾತನಾಡಿದ್ದಲ್ಲದೆ, ಅತ್ಯಂತ ಕೆಟ್ಟದಾಗಿ ಮಾತನಾಡಿದ್ದಾನೆ. ದಾರಿಯ ಬಗ್ಗೆ ಪ್ರಶ್ನಿಸಿದಾಗ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ದಾರಿಯ ಮಧ್ಯೆಯೇ ಅವರಿಬ್ಬರನ್ನು‌ ಇಳಿಸಿದರೂ ಸಹ ಪೂರ್ಣ ಹಣ ಕೇಳಿದ್ದಾನೆ.. ಕೇವಲ ಅರ್ಧ ಹಣ ನೀಡಿದಾಗ ದಂಪತಿಗಳ ಮೇಲೆ ದೌರ್ಜನ್ಯ ಮಾಡಲು ಮುಂದಾಗಿದ್ದಾನೆ. ಈ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಯುವಕ ಕಾರು ಸಂಖ್ಯೆ KA 27 C 8669 ಅನ್ನು ಹಂಚಿಕೊಂಡಿದ್ದು ಮತ್ತು @rapidocaptain ಅನ್ನು ಟ್ಯಾಗ್ ಮಾಡಿ, ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಳಕೆದಾರರನ್ನು ಒತ್ತಾಯಿಸಿದರು. ಅವರ ಪೋಸ್ಟ್ ವೈರಲ್ ಆಗಿದ್ದು, ಪ್ರಯಾಣಿಕರ ಸುರಕ್ಷತೆಯ ಬಗ್ಗೆ ನೆಟ್ಟಿಗರು ತಮ್ಮ ಆಕ್ರೋಶ ಮತ್ತು ಕಳವಳವನ್ನು ವ್ಯಕ್ತಪಡಿಸಿದ್ದಾರೆ.

"ಒಂದು ವೇಳೆ ನನ್ನ ಗೆಳತಿ ಒಬ್ಬಳೇ ಪ್ರಯಾಣಿಸುತ್ತಿದ್ದರೆ ಈ ಸಂದರ್ಭ ಏನಾಗುತ್ತಿತ್ತು ಎಂದು ಊಹಿಸಿಕೊಳ್ಳಲೂ ಅಸಾಧ್ಯ"ನಾನು ಜೊತೆಗಿದ್ದ ಕಾರಣ ಧೈರ್ಯದಿಂದ ಚಾಲಕನನ್ನು ಎದುರಿ ಸಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಈ ಘಟನೆ ಸದ್ಯ ನಗರದಲ್ಲಿ ಮಹಿಳಾ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟು ಹಾಕಿವೆ. ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಪ್ಲಿ ಕೇಶನ್ ಆಧಾರಿತ ಸಾರಿಗೆ ಸೇವೆಗಳಿಗೆ ಕಟ್ಟುನಿಟ್ಟಾದ ಪರಿಶೀಲನೆಗಳು, ತ್ವರಿತ ದೂರು ಪರಿಹಾರ ಕ್ರಮವನ್ನು ಜಾರಿಗೆ ತರಬೇಕೆಂದು ನೆಟ್ಟಿಗರು ಒತ್ತಾಯಿಸಿದ್ದಾರೆ...