ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಐಪಿಎಲ್ ಪಂದ್ಯದ ವೇಳೆ ರೀಲ್ಸ್ ಮಾಡಲು ಹೋಗಿ ಯಡವಟ್ಟು; 70 ಸಾವಿರ ರೂ. ಮೌಲ್ಯದ ಉಂಗುರ ಕಳೆದುಕೊಂಡ ಯುವತಿ

Viral Video: ಇಲ್ಲೊಬ್ಬ ಯುವತಿ ರೀಲ್ಸ್ ಕ್ರೇಜ್ ನಿಂದ ತನ್ನ ದುಬಾರಿ ಮೊತ್ತದ ಉಂಗುರವನ್ನೇ ಕಳೆದು ಕೊಂಡಿದ್ದಾಳೆ. ಪಂಜಾಬ್‌ನಲ್ಲಿ ನಡೆದ ಐಪಿಎಲ್ ಪಂದ್ಯದ ವೇಳೆ ರೀಲ್ಸ್ ಮಾಡಲು ಹೋಗಿ ಉಂಗುರವೇ ಕಳೆದು ಹೋಗಿದೆ. ಮಹಾರಾಜ ಯಾದವೀಂದ್ರ ಸಿಂಗ್ ಪಿಸಿಎ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ಐಪಿಎಲ್ ಪಂದ್ಯ ನಡೆದಿತ್ತು. ಈ ಕ್ರೀಡಾಂಗಣದಲ್ಲಿ ರೀಲ್ ಮಾಡು ಹೋಗಿ ಮಹಿಳೆಯೊಬ್ಬರು 70,000 ರೂ.ಉಂಗುರ ಕಳೆದು ಕೊಂಡಿದ್ದಾರೆ

ದುಬಾರಿ ಉಂಗುರ ಕಳೆದುಕೊಂಡ ಯುವತಿ

ನವದೆಹಲಿ,ಎ. 15: ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಬೇಕು ಎನ್ನುವ ಉದ್ದೇಶದಿಂದ ನಾನಾ ಸಾಹಸಕ್ಕೆ ಇಳಿಯುವವರು ಅನೇಕರು ಇದ್ದಾರೆ. ಹೆಚ್ಚು ವೀವ್ಸ್ ಹಾಗೂ ಲೈಕ್ ಗಾಗಿ ಏನೇ ಟ್ರೆಂಡ್ ಬಂದ್ರೂ ಅದನ್ನು ರೀಲ್ಸ್ ಮಾಡಿ ಸೋಷಿಯಲ್ ಮೀಡಿಯಾ ದಲ್ಲಿ ಅಪ್ಲೋಡ್ ಮಾಡುತ್ತಾರೆ. ಆದರೆ ಇಲ್ಲೊಬ್ಬ ಯುವತಿ ರೀಲ್ಸ್ ಕ್ರೇಜ್ ನಿಂದ ತನ್ನ ದುಬಾರಿ ಮೊತ್ತದ ಉಂಗುರವನ್ನೇ ಕಳೆದು ಕೊಂಡಿದ್ದಾಳೆ. ಪಂಜಾಬ್‌ನಲ್ಲಿ ನಡೆದ ಐಪಿಎಲ್ ಪಂದ್ಯದ ವೇಳೆ ರೀಲ್ಸ್ ಮಾಡಲು ಹೋಗಿ ಉಂಗುರವೇ ಕಳೆದು ಹೋಗಿದೆ.

ಮಹಾರಾಜ ಯಾದವೀಂದ್ರ ಸಿಂಗ್ ಪಿಸಿಎ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ಐಪಿಎಲ್ ಪಂದ್ಯ ನಡೆದಿತ್ತು. ಈ ಕ್ರೀಡಾಂಗಣದಲ್ಲಿ ರೀಲ್ ಮಾಡು ಹೋಗಿ ಮಹಿಳೆಯೊಬ್ಬರು 70,000 ರೂ.ಉಂಗುರ ಕಳೆದು ಕೊಂಡಿದ್ದಾರೆ. ಮಧು ಪ್ರಿಯಾ ಎಂಬ ಯುವತಿ ಇನ್ ಸ್ಟಾಗ್ರಾಮ್ ರೀಲ್ಸ್ ಮಾಡಲು ಹೋಗಿ ಈ ಪಜಿತಿಗೆ ಸಿಲುಕಿದ್ದಾರೆ.

ವಿಡಿಯೋ ನೋಡಿ:



ಏಪ್ರಿಲ್ 11 ರಂದು ಮಹಾರಾಜ ಯಾದವೀಂದ್ರ ಸಿಂಗ್ ಪಿಸಿಎ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು ಪಂಜಾಬ್ ಕಿಂಗ್ಸ್ (PBKS) ನಡುವಿನ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪಂದ್ಯದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.

ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಉಂಗುರವನ್ನು ಗಾಳಿಯಲ್ಲಿ ಎಸೆದು ಅದು ಮಯವಾಗಿ ಪ್ರತ್ಯಕ್ಷವಾಗುವಂತೆ ಮಾಡುವ ಟ್ರೆಂಡ್ ಶುರುವಾಗಿದೆ. ಅದೇ ರೀತಿ ಯುವತಿ ತಮ್ಮ ಉಂಗುರವನ್ನು ಗಾಳಿಯಲ್ಲಿ ಎಸೆಯುವಂತೆ ನಟಿಸಿದ್ದಾರೆ. ಅದನ್ನು ಸರಾಗವಾಗಿ ಹಿಡಿದು ಹಾಸ್ಯ ದೃಶ್ಯ ಕ್ಷಣವನ್ನು ಸೃಷ್ಟಿಸುವುದು ಇದರ ಉದ್ದೇಶವಾಗಿತ್ತು.

Viral Video: ಅಸೆಂಬ್ಲಿಯಲ್ಲೇ ಬಿಟ್ಟಿ ಹಣಕ್ಕಾಗಿ ಮುಗಿಬಿದ್ದ ಪಾಕ್‌ ಸಂಸದರು; ವಿಡಿಯೋ ನೋಡಿ

ಆದರೆ ಯುವತಿ ಉಂಗುರವನ್ನು ಗಾಳಿಯಲ್ಲಿ ಎಸೆದಾಗ ಅದು ಕೈತಪ್ಪಿ ಸೀಟಿನ ಕೆಳಗೆ ಬಿದ್ದಿದೆ. ಎಷ್ಟೇ ಹುಡುಕಿದರೂ ಉಂಗುರ ಪತ್ತೆಯಾಗಿಲ್ಲ. ಅವಳು ತನ್ನ ಸೀಟು ಮತ್ತು ಹತ್ತಿರದ ಸ್ಥಳದಲ್ಲಿ ಸುತ್ತಲೂ ನೋಡುತ್ತಾ, ಕಾಣೆಯಾದ ಉಂಗುರವನ್ನು ಹುಡುಕಲು ಪ್ರಯತ್ನಿಸುತ್ತಿರುವುದು ಕಂಡು ಬಂದಿದೆ. ಆಕೆಯ ಶೀರ್ಷಿಕೆ, “ರೂ. 70,000 ಕಾ ಲಾಸ್ ಹೋ ಗಯಾ. ಉಂಗುರ ಇನ್ನೂ ಕಾಣೆಯಾಗಿದೆ” ಎಂದು ಬರೆಯಲಾಗಿದೆ.

ಕ್ರೀಡಾಂಗಣದಲ್ಲಿ ಹಾಜರಿದ್ದ ಇತರರಿಂದಲೂ ಅವರು ಸಹಾಯ ಕೇಳಿದ್ದಾರೆ‌. ಯಾರಿಗಾದರೂ ಉಂಗುರ ಸಿಕ್ಕರೆ ದಯವಿಟ್ಟು ಕೊಡಿ, ನಾನು ನನ್ನ ಟಿಕೆಟ್ ವಿವರಗಳನ್ನು ನೀಡುತ್ತೇನೆ ಎಂದು ಬರೆದುಕೊಂಡಿದ್ದಾರೆ.ಈ ವೀಡಿಯೊಗೆ ಆನ್‌ಲೈನ್‌ನಲ್ಲಿ ಅನೇಕ ಪ್ರತಿಕ್ರಿಯೆಗಳು ಬಂದಿದ್ದು ಜನರು ಹಾಸ್ಯ ವಾಗಿ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು ಮುಂದಿನ ವರ್ಷ ಸಿಗಬಹುದು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ವರು ಇದು ಸಿಗಲು ಸಾಧ್ಯತೆ ಇಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.