ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ತಿನ್ನುವ ರೊಟ್ಟಿಗೆ ಉಗುಳಿದ ರೆಸ್ಟೋರೆಂಟ್ ಸಿಬ್ಬಂದಿ: ವೀಡಿಯೋ ವೈರಲ್ ಬೆನ್ನಲ್ಲೇ ಪ್ರಕರಣ ದಾಖಲು!

Viral Video: ರೆಸ್ಟೋರೆಂಟ್ ಒಂದರಲ್ಲಿ ಕೆಲಸಮಾಡುತ್ತಿದ್ದ ಸಿಬ್ಬಂದಿಯೊಬ್ಬರು ಅಡುಗೆ ಮಾಡುವಾಗ ರೊಟ್ಟಿಗಳ ಮೇಲೆ ಉಗುಳುತ್ತಿದ್ದ ಘಟನೆ ಇತ್ತೀಚೆಗಷ್ಟೇ ಗಾಜಿಯಾಬಾದ್‌ನಲ್ಲಿ ನಡೆದಿದೆ. ಈ ದೃಶ್ಯಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು ವೀಡಿಯೋ ಕಂಡ ನೆಟ್ಟಿಗರು ಆಘಾತಕ್ಕೊಳಗಾಗಿದ್ದಾರೆ.

ತಿನ್ನುವ ರೊಟ್ಟಿ ಮೇಲೆ ಉಗುಳುತ್ತಿದ್ದ ರೆಸ್ಟೋರೆಂಟ್ ಸಿಬ್ಬಂದಿ

ಉತ್ತರಪ್ರದೇಶ, ಜ. 9: ಇತ್ತೀಚಿನ ದಿನದಲ್ಲಿ ಬಹುತೇಕ ಜನರು ಮನೆ ಊಟಕ್ಕಿಂತಲೂ ಹೊಟೇಲ್ , ರೆಸ್ಟೋರೆಂಟ್ ಊಟವನ್ನು ಬಹಳ ಇಷ್ಟಪಡುತ್ತಾರೆ. ಫ್ಯಾಮಿಲಿ, ಫ್ರೆಂಡ್ಸ್ ಜೊತೆ ಹೊರಗೆ ಹೋದಾಗ ಅಪರೂಪಕ್ಕೊಮ್ಮೆ ಹೊಟೇಲ್ ಗೆ ತೆರಳಿ ಅಲ್ಲಿನ ಊಟವನ್ನು ಚಪ್ಪರಿಸಿ ಸವಿ ಯುವುದನ್ನು ತುಂಬಾ ಜನರು ಇಷ್ಟ ಪಡುತ್ತಾರೆ. ಅದರಲ್ಲೂ ಅಲ್ಲಿ ಕ್ಲೀನ್ ಆಗಿರಬೇಕು, ಟೇಬಲ್ ನೆಸ್ ಇರಬೇಕು ಎಂದೆಲ್ಲ ಪರಿಶೀಲಿಸುವವರು ಇದ್ದಾರೆ. ಆದರೆ ನಾವು ಕುಳಿತುಕೊಳ್ಳುವ ಚೇರ್ , ಟೇಬಲ್ ಮಾತ್ರ ಕ್ಲೀನ್ ಇದ್ದರೆ ಯಾವ ಪ್ರಯೋಜನವು ಇಲ್ಲ ಬದಲಾಗಿ ನಾವು ಸೇವಿಸಬೇಕೆಂದಿದ್ದ ಆಹಾರ ಕೂಡ ಸ್ವಚ್ಛವಾದ ಸ್ಥಳದಲ್ಲಿ ಮಾಡಿದ್ದರೆ ಉತ್ತಮ. ಈ ನಿಟ್ಟಿನಲ್ಲಿ ರೆಸ್ಟೋರೆಂಟ್ ಒಂದರಲ್ಲಿ ಕೆಲಸಮಾಡುತ್ತಿದ್ದ ಸಿಬ್ಬಂದಿಯೊಬ್ಬರು ಅಡುಗೆ ಮಾಡುವಾಗ ರೊಟ್ಟಿಗಳ ಮೇಲೆ ಉಗುಳುತ್ತಿದ್ದ ಘಟನೆ ಇತ್ತೀಚೆಗಷ್ಟೇ ಗಾಜಿಯಾಬಾದ್‌ನಲ್ಲಿ ನಡೆದಿದೆ. ಈ ದೃಶ್ಯಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು (Viral Video) ವೀಡಿಯೋ ಕಂಡ ನೆಟ್ಟಿಗರು ಆಘಾತ ಕ್ಕೊಳಗಾಗಿದ್ದಾರೆ.

ಗಾಜಿಯಾಬಾದ್‌ನ ಚಿಕನ್ ಪಾಯಿಂಟ್ ಎಂಬ ಹೆಸರಿನ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರನೊಬ್ಬ ತಂದೂರಿ ರೊಟ್ಟಿಗಳನ್ನು ತಯಾರಿಸುವಾಗ ಅದರ ಮೇಲೆ ಉಗುಳುತ್ತಿದ್ದು ಈ ದೃಶ್ಯವನ್ನು ವೈರಲ್ ವಿಡಿಯೋದಲ್ಲಿ ಕಾಣಬಹುದು. ಇದೇ ರೆಸ್ಟೋರೆಂಟ್ ಗೆ ಬಂದ ಗ್ರಾಹಕ ನೊಬ್ಬನು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಈ ವಿಡಿಯೋ ಮಾಡಿದ್ದಾನೆ. ಸದ್ಯ ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಸಂಚಲನ ಉಂಟು ಮಾಡಿದೆ. ರೆಸ್ಟೋರೆಂಟ್, ಹೊಟೇಲ್ ಇತರ ಸ್ಥಳಗಳ ಸ್ವಚ್ಛತೆ, ನೈರ್ಮಲ್ಯದ ಬಗ್ಗೆ ಹೊಸ ಪ್ರಶ್ನೆ ಹುಟ್ಟುಹಾಕಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ವಿಡಿಯೋ ನೋಡಿ:



ವೀಡಿಯೋ ಸೋಶಿಯಲ್ ‌ಮಿಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೆ ಸಂಬಂಧ ಪಟ್ಟ ರೆಸ್ಟೋರೆಂಟ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ದೂರುಗಳು ಕೇಳಿ ಬರುತ್ತಲೇ ಇದೆ. ಹೀಗಾಗಿ ಗಾಜಿಯಾಬಾದ್ ನ ಕವಿನಗರದ ಎಸಿಪಿ ಸೂರ್ಯಬಲಿ ಮೌರ್ಯ ಈ ಬಗ್ಗೆ ತನಿಖೆ ಮಾಡಲು ಆದೇಶ ನೀಡಿದ್ದಾರೆ‌. ಈ ಬಗ್ಗೆ ಅವರು ಮಾತನಾಡಿ, 2026ರ ಜನವರಿ 8ರಂದು ಮಧುಬನ್ ಬಾಪುಧಾಮ್ ಪೊಲೀಸ್ ಠಾಣೆ ವ್ಯಾಪ್ತಿಯ ವರ್ಧಮಾನಪುರಂ ಔಟ್‌ಪೋಸ್ಟ್‌ನಲ್ಲಿ ಅಂಗಡಿಯ ಕೆಲಸಗಾರನೊಬ್ಬ ರೊಟ್ಟಿ ತಯಾರಿಸುವಾಗ ಉಗುಳುತ್ತಿರುವ ವೀಡಿಯೊ ಗಮನಕ್ಕೆ ಬಂದಿದೆ. ವೀಡಿಯೋವನ್ನು ಪರಿಶೀಲಿಸಿದ ನಂತರ, ಆರೋಪಗಳು ಪ್ರಾಥಮಿಕವಾಗಿ ನಿಜವೆಂದು ತಿಳಿದುಬಂದಿರುವುದಾಗಿ ಹೇಳಿದ್ದಾರೆ.

Viral News: ರಾತ್ರೋರಾತ್ರಿ ಕೆಂಪು ಬಣ್ಣಕ್ಕೆ ತಿರುಗಿದ ಹಾರ್ಮುಜ್ ದ್ವೀಪದ ಸಮುದ್ರ! ಏನಿದರ ಅಸಲಿಯತ್ತು?

ಪೊಲೀಸರು ತತ್ ಕ್ಷಣ ಸಂಬಂಧ ಪಟ್ಟ ಆರೋಪಿ ರೆಸ್ಟೋರೆಂಟ್ ಕೆಲಸಗಾರ ಜಾವೇದ್ ಅನ್ಸಾರಿ ಯನ್ನು ಬಂಧಿಸಿದ್ದಾರೆ. ಅಧಿಕಾರಿಗಳು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದು ಅಗತ್ಯ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ. ಗಾಜಿಯಾಬಾದ್ ನಲ್ಲಿ ಹಿಂದೆಯೂ ಇದೇ ರೀತಿಯ ಹಲವಾರು ಘಟನೆಗಳು ನಡೆದಿವೆ. ಈ ಹಿಂದೆ ಗಾಜಿಯಾಬಾದ್‌ನ ಹೊಟೇಲ್ ನಲ್ಲಿ ಮೂತ್ರ ಬೆರೆಸಿದ ಜ್ಯೂಸ್ ಅನ್ನು ಗ್ರಾಹಕರಿಗೆ ನೀಡಿದ್ದ ಆರೋಪ ಕೇಳಿ ಬಂದಿತ್ತು. ಕೋಪಗೊಂಡ ಸ್ಥಳೀಯರು ಅಂಗಡಿ ಯವನಿಗೆ ಥಳಿಸಿದ್ದರು.

ಈ ವಿಡಿಯೋ ಬಗ್ಗೆ ನೆಟ್ಟಿಗರು ಕೂಡ ನಾನಾ ತರನಾಗಿ ಕಾಮೆಂಟ್ ಮಾಡಿದ್ದಾರೆ‌. ಹೊಟೇಲ್ ನಲ್ಲಿ ಶುಚಿ ರುಚಿ ಊಟ ತಿಂಡಿ ಸಿಗುತ್ತದೆ ಎಂಬ ಕಾರಣಕ್ಕೆ ಗ್ರಾಹಕರು ನಂಬಿಕೆಯಿಂದ ಇಲ್ಲಿಗೆ ಬಂದಿ ರುತ್ತಾರೆ. ಆದರೆ ಇಂತಹ ಜನರು ಜನರ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬಳಕೆದಾರರೊಬ್ಬರು ಆಗ್ರಹಿಸಿದ್ದಾರೆ. ಇಂತಹ ಕೃತ್ಯಗಳನ್ನು ತಡೆಗಟ್ಟಲು ಮತ್ತು ಆಹಾರ ಸುರಕ್ಷತೆಯ ನಿಯಮವನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲು ಅಲ್ಲಿನ ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ. ಸದ್ಯ ಪೊಲೀಸರು ಈ ಬಗ್ಗೆ ಇನ್ನಷ್ಟು ತನಿಖೆ ಮಾಡುತ್ತಿದ್ದು ಶೀಘ್ರವೇ ಕಟ್ಟುನಿಟ್ಟಿನ ನಿಯಮ ಜಾರಿಯಾಗುವ ಸಾಧ್ಯತೆ ಕೂಡ ಇದೆ.