ದಿಸ್ಪುರ್: ಇತ್ತೀಚೆಗೆ ಅಸ್ಸಾಂನ ಮಾನಸ್ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ವಾಹನದ ಮೇಲೆ ಖಡ್ಗಮೃಗ (Rhinoceros) ವೊಂದು ದಾಳಿ ಮಾಡಿದ್ದು,ಈ ಘಟನೆಯಿಂದ ಪ್ರವಾಸಿಗರು ಬೆಚ್ಚಿಬಿದ್ದಿದ್ದಾರೆ.ಈ ಘಟನೆಯ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರನ್ನು ಬೆಚ್ಚಿಬೀಳಿಸಿದೆ.ವೈರಲ್ ಆದ ವಿಡಿಯೊದಲ್ಲಿ ಖಡ್ಗಮೃಗವು ಜೀಪ್ ನಿಲ್ಲಿಸಿದ್ದ ರಸ್ತೆಯ ಕಡೆಗೆ ನಡೆದುಕೊಂಡು ಹೋಗುತ್ತಿರುವುದನ್ನು ಸೆರೆಹಿಡಿಯಲಾಗಿದೆ.ಅದು ಅಲ್ಲದೇ, ಖಡ್ಗಮೃಗವು ಜೀಪ್ ಅನ್ನು ಕೆಡವಲು ಕೂಡ ಪ್ರಯತ್ನಿಸಿದೆಯಂತೆ. ಆದರೆ,ಈ ಘಟನೆಯಲ್ಲಿ ಪ್ರವಾಸಿಗರಿಗೆ ಯಾವುದೇ ಹಾನಿಯಾಗಲಿಲ್ಲ.ಈ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.
ಘಟನೆಯ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ತಿಳಿಸಲಾಗಿದ್ದು, ಇಂತಹ ಘಟನೆ ಮರಳಿ ನಡೆಯದಂತೆ ನೋಡಿಕೊಳ್ಳವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದ್ದಾರೆ. ಸಫಾರಿಯ ಸಮಯದಲ್ಲಿ ಖಡ್ಗಮೃಗವು ದಾಳಿ ಮಾಡಿದ್ದು ಇದೇ ಮೊದಲಲ್ಲ. ಈ ಹಿಂದೆ ಅಸ್ಸಾಂನಲ್ಲಿರುವ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದ ಘಟನೆಯಲ್ಲಿ ಸಫಾರಿ ಮಾಡುತ್ತಿದ್ದ ವೇಳೆ ಖಡ್ಗಮೃಗದಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ತಾಯಿ-ಮಗಳ ಜೋಡಿ ಜೀಪ್‍ನಿಂದ ಕೆಳಗೆ ಬಿದ್ದಿದ್ದು, ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದರು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ವಿಡಿಯೊ ಇಲ್ಲಿದೆ ನೋಡಿ...
ವೈರಲ್ ಆದ ವಿಡಿಯೊದಲ್ಲಿ ಉದ್ಯಾನವನದ ಒಳಗೆ ಜೀಪಿನ ಹಿಂದೆ ಖಡ್ಗಮೃಗ ನಡೆದುಕೊಂಡು ಹೋಗುವುದು ರೆಕಾರ್ಡ್ ಆಗಿತ್ತು. ಅದರ ಹಿಂದೆ ಪ್ರವಾಸಿಗರಿಂದ ತುಂಬಿದ ಮೂರು ಜೀಪ್‌ಗಳು ಬಲಕ್ಕೆ ತಿರುವು ಪಡೆಯಲು ಹೋಗುವಾಗ ಜೀಪನಲ್ಲಿದ್ದ ಒಬ್ಬ ಚಿಕ್ಕ ಹುಡುಗಿ ಮತ್ತು ಅವಳ ತಾಯಿ ನೆಲಕ್ಕೆ ಬಿದ್ದು ಸಹಾಯಕ್ಕಾಗಿ ಕೂಗಿಕೊಂಡಿದ್ದರು. ವರದಿಗಳ ಪ್ರಕಾರ, ತಾಯಿ ಮತ್ತು ಮಗಳು ಜೀಪಿಗೆ ಹಿಂತಿರುವ ಮೂಲಕ ಖಡ್ಗಮೃಗದ ದಾಳಿಯಿಂದ ತಪ್ಪಿಸಿಕೊಂಡು ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು.
ಈ ಸುದ್ದಿಯನ್ನೂ ಓದಿ:Viral Video: ಕಂತೆ ಕಂತೆ ಹಣವನ್ನು ಕಿಟಕಿಯಿಂದ ಎಸೆದ ಎಂಜಿನಿಯರ್; ವಿಡಿಯೊ ಫುಲ್ ವೈರಲ್; ಅಷ್ಟಕ್ಕೂ ಆಗಿದ್ದೇನು?
ಈ ಮನಕಲಕುವ ವಿಡಿಯೊ ವೈರಲ್ ಆಗಿದ್ದು, ಸೋಶಿಯಲ್ ಮಿಡಿಯಾದಲ್ಲಿ ವ್ಯಾಪಕ ಗಮನ ಸೆಳೆದಿತ್ತು. ಈ ಬಗ್ಗೆ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳು ಘಟನೆಯ ಬಗ್ಗೆ ತನಿಖೆ ನಡೆಸಿದ್ದರು. ಪ್ರವಾಸಿಗರು ಜೀಪ್ ಸಫಾರಿಗಳ ಸಮಯದಲ್ಲಿ ಹೆಚ್ಚಿನ ಜಾಗರೂಕತೆ ವಹಿಸುವಂತೆ ಮತ್ತು ಉದ್ಯಾನವನದ ಸುರಕ್ಷಿತ ಭೂಪ್ರದೇಶದಲ್ಲಿ ಸಂಚರಿಸುವಾಗ ತಮ್ಮ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ವಿನಂತಿಸಿದ್ದರು.