ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಾಗರಿಕ ಪ್ರಜ್ಞೆಯ ಕೊರತೆ: ಕ್ಯೂ ತಪ್ಪಿಸಿದವರಿಗೆ ಲಾಠಿ ರುಚಿ ತೋರಿಸಿದ ರೈಲ್ವೆ ಪೊಲೀಸ್

Viral News: ಇತ್ತೀಚೆಗೆ ಭಾರತೀಯರ ನಾಗರಿಕ ಪ್ರಜ್ಞೆಯ ಕೊರತೆ ಬಗ್ಗೆ ದಿನಕ್ಕೊಂದು ದೂರು ಕೇಳಿ ಬರುತ್ತಲೇ ಇದೆ. ಸಾರ್ವಜನಿಕ ಸ್ಥಳದಲ್ಲಿ ಸ್ವಚ್ಛತೆ ಕಾಪಾಡದೇ ಇರುವುದು, ಅಶಿಸ್ತಿನಿಂದ ವರ್ತಿಸುವುದು ಹೀಗೆ. ಇದರ ನಡುವೆಯೇ ರೈಲು ನಿಲ್ದಾಣವೊಂದರಲ್ಲಿ ಶಿಸ್ತು ಮರೆತು ಕೆಲವು ಪ್ರಯಾಣಿಕರು ಮನ ಬಂದಂತೆ ವರ್ತಿಸಿದ್ದಾರೆ. ಇವರಿಗೆ ಪೊಲೀಸರು ತಕ್ಕ ಪಾಠ ಕಲಿಸಿದ್ದಾರೆ.

ಪ್ರಯಾಣಿಕರಿಗೆ ಲಾಠಿ ರುಚಿ ತೋರಿಸಿದ ಪೊಲೀಸ್

ನವದೆಹಲಿ, ಜೂ. 2: ಇತ್ತೀಚೆಗೆ ಸಾರ್ವಜನಿಕ ಸ್ಥಳದಲ್ಲಿ ನಾಗರಿಕ ಪ್ರಜ್ಞೆ ಮರೆತು ಭಾರತೀಯರು ವರ್ತಿಸುವ ಅನೇಕ ದೃಶ್ಯಗಳು ವೈರಲ್ (Viral News) ಆಗುತ್ತಿರುತ್ತವೆ. ಇದರ ನಡುವೆಯೇ ರೈಲು ಹತ್ತುವ ಅವಸರದಲ್ಲಿ ಸಾಲು (ಕ್ಯೂ) ಮುರಿದು ನುಗ್ಗಲು ಯತ್ನಿಸಿದ ಪ್ರಯಾಣಿಕರಿಗೆ ಪೊಲೀಸ್ ಸಿಬ್ಬಂದಿಯೊಬ್ಬರು ಅಲ್ಲೇ ಪಾಠ ಕಲಿಸಿದ ಘಟನೆ ನಡೆದಿದೆ. ರೈಲು ಹತ್ತಲು ಫ್ಲಾಟ್‌ಫಾರ್ಮ್‌ನಲ್ಲಿ ಪ್ರಯಾಣಿಕರ ದೊಡ್ಡ ಗುಂಪೊಂದು ಕಾಯುತ್ತಿತ್ತು. ಅವರಲ್ಲಿ ಹೆಚ್ಚಿನವರು ಕ್ರಮಬದ್ಧ ಸಾಲಿನಲ್ಲಿ ತಾಳ್ಮೆಯಿಂದ ನಿಂತು ಬೋಗಿಗಳನ್ನು ಪ್ರವೇಶಿಸಲು ಕಾಯುತ್ತಿದ್ದರು. ಆದರೆ ಕೆಲವರು ಈ ಕ್ಯೂವನ್ನು ತಪ್ಪಿಸಲು ಮುಂದಾಗಿದ್ದರು. ಮುಂದೆ ನಡೆದಿದ್ದೇ ಬೇರೆ. ಅವರು ಇನ್ನುಮುಂದೆ ಕ್ಯೂ ತಪ್ಪಿಸುವ ದುಸ್ಸಾಹಸಕ್ಕೆ ಕೈ ಹಾಕದಂತೆ ಪೊಲೀಸರು ಬುದ್ಧಿ ಕಲಿಸಿದ್ದಾರೆ. ಅಷ್ಟಕ್ಕೂ ಆಗಿದ್ದೇನು?

ಇತ್ತೀಚೆಗೆ ಭಾರತೀಯರ ನಾಗರಿಕ ಪ್ರಜ್ಞೆಯ ಕೊರತೆ ಬಗ್ಗೆ ದಿನಕ್ಕೊಂದು ದೂರು ಕೇಳಿ ಬರುತ್ತಲೇ ಇದೆ. ಸಾರ್ವಜನಿಕ ಸ್ಥಳದಲ್ಲಿ ಸ್ವಚ್ಛತೆ ಕಾಪಾಡದೇ ಇರುವುದು, ಅಶಿಸ್ತಿನಿಂದ ವರ್ತಿಸುವುದು ಹೀಗೆ ಪಟ್ಟಿ ದೊಡ್ಡದಾಗುತ್ತದೆ. ಇದರ ನಡುವೆಯೇ ರೈಲು ನಿಲ್ದಾಣವೊಂದರಲ್ಲಿ ಶಿಸ್ತು ಮರೆತು ಕೆಲವು ಪ್ರಯಾಣಿಕರು ಮನ ಬಂದಂತೆ ವರ್ತಿಸಿರುವುದು, ಅದಕ್ಕೆ ತಕ್ಕ ಪಾಠ ಕಲಿತಿರುವ ವಿಡಿಯೊ ವೈರಲ್‌ ಆಗಿದೆ.

ವಿಡಿಯೊ ನೋಡಿ:



ವಿಡಿಯೊದಲ್ಲಿ ಏನಿದೆ?

ಸಾಲು ಮುಂದುವರಿಯುತ್ತಿದ್ದಂತೆ ಕೆಲವರು ಕ್ಯೂ ನಿಯಮಗಳನ್ನು ಮರೆತು ನೇರವಾಗಿ ಬೋಗಿಯ ಬಾಗಿಲಿನತ್ತ ನುಗ್ಗಲು ಯತ್ನಿಸಿದ್ದಾರೆ. ಇನ್ನೂ ಕೆಲವರು ಬೋಗಿಯ ಕಿಟಕಿಯ ಮೂಲಕ ಬ್ಯಾಗ್‌ ಹಾಗೂ ಸಾಮಗ್ರಿ ತೂರಲು ಯತ್ನಿಸಿದ್ದಾರೆ. ರೈಲು ಹತ್ತುವ ಧಾವಂತದಲ್ಲಿ ಕ್ಯೂ ಮುರಿದು ನುಗ್ಗಲು ಯತ್ನಿಸಿದ ಪ್ರಯಾಣಿಕರಿಗೆ ಈ ಸಂದರ್ಭ ಪೊಲೀಸ್‌ ಅಧಿಕಾರಿಯೂ ತಮ್ಮದೇ ರೀತಿಯಲ್ಲಿ ಸರಿಯಾಗಿಯೇ ಪಾಠ ಕಲಿಸಿದ್ದಾರೆ. ಪೊಲೀಸ್‌ ಅಧಿಕಾರಿ ಮಧ್ಯ ಪ್ರವೇಶಿಸಿ ಅವರಿಗೆ ಲಾಠಿ ರುಚಿ ತೋರಿಸಿ ಎಚ್ಚರಿಕೆ ನೀಡಿದ್ದಾರೆ.

ಅಯ್ಯೊಯ್ಯೋ ಹಸಿಯಾಗಿ ಇದೆಲ್ಲಾ ತಿಂತಾರಾ? ರೈಲಿನಲ್ಲಿ ವಿಚಿತ್ರ ಆಹಾರ ಸೇವನೆ ಮಾಡಿದ ವ್ಯಕ್ತಿ!

ಅಧಿಕಾರಿಯ ಈ ಕಟ್ಟುನಿಟ್ಟಿನ ಕ್ರಮದ ಬಳಿಕ ಯಾರೊಬ್ಬರೂ ಕ್ಯೂ ತಪ್ಪಿಸುವ ಸಾಹಸಕ್ಕೆ ಕೈಹಾಕದೆ, ಅತ್ಯಂತ ಶಿಸ್ತಿನಿಂದ ರೈಲು ಏರಿದ್ದಾರೆ. ಮಧ್ಯದಿಂದ ಪ್ರವೇಶಿಸಲು ಧೈರ್ಯ ಮಾಡಲಿಲ್ಲ. ಈ ಬಗ್ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದು, ಅಧಿಕಾರಿಯ ತ್ವರಿತ ಕ್ರಮವನ್ನು ಶ್ಲಾಘಿಸಿದ್ದಾರೆ. ʼʼಹೀಗೂ ಭಾರತೀಯರ ನಾಗರಿಕ ಪ್ರಜ್ಞೆಯನ್ನು ಸರಿಪಡಿಸ ಬಹುದುʼʼ ಎಂದು ಒಬ್ಬರು ಬರೆದಿದ್ದಾರೆ. ಮತ್ತೊಬ್ಬರು, ʼʼಇಂತಹವರಿಗೆ ಬುದ್ಧಿ ಕಲಿಸಲು ಇದೇ ರೀತಿಯ ಕ್ರಮ ಬೇಕುʼʼ ಎಂದು ಪ್ರತಿಕ್ರಿಯಿಸಿದ್ದಾರೆ.